ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ
ಕೊಡಗು

ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ

December 1, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಛೇರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದಲೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘರ್ಷ ಸಮಿತಿ ವತಿಯಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿದ್ದರೂ ಇದುವರೆಗೆ ಜನಪ್ರತಿನಿಧಿ ಯಾಗಲಿ, ಅಧಿಕಾರಿಗಳಾಗಲಿ ಪ್ರತಿಭಟನಾಕಾ ರರ ಸಮಸ್ಯೆಗಳನ್ನು ಕೇಳದೆ ಕಡೆಗಣಿ ಸುತ್ತಿದ್ದು, ಇದೇ ರೀತಿ ಮುಂದುವರಿದರೆ ತಾಲೂಕು ಕಛೇರಿಗೆ ಬೀಗ ಜಡಿದು ಜಿಲ್ಲಾ ಧಿಕಾರಿ ಕಚೇರಿಗೂ ಮುತ್ತಿಗೆ ಹಾಕಲಾಗು ವುದು ಎಂದು ದಲಿತ ಸಂಘರ್ಷ ಸಮಿ ತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶು ರಾಮ್ ಎಚ್ಚರಿಸಿದ್ದಾರೆ.

ಮುಷ್ಕರದ ಸಂದರ್ಭ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಹಗಲು ಮತ್ತು ರಾತ್ರಿ ಮನೆ ಮನೆಗೆ ಬರುವ ಜನ ಪ್ರತಿನಿಧಿಗಳು ಕಳೆದ ಮೂರು ದಿನಗಳಿಂ ದಲೂ ನಮ್ಮ ಬೇಡಿಕೆ ಆಲಿಸದಿರುವುದು ಚುನಾವಣೆ ನಂತರ ದಲಿತರು ಬೇಡ ಎಂಬಂ ತಾಗಿದೆ ಎಂದ ಪರಶುರಾಮ್, ಕೊಡಗಿನ ಮೂಲ ನಿವಾಸಿಗಳಿಗೆ ನಿವೇಶನ ರಹಿತ ರಿಗೆ ಮನೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಈ ಸಂದರ್ಭ ಸಮಿತಿಯ ಹಿರಿಯರಾದ ಹೆಚ್.ಕೆ.ಸಣ್ಣಯ್ಯ, ಹೆಚ್.ಎಸ್. ಕುಮಾರ್, ಮಹಾದೇವ್, ರಜನಿಕಾಂತ್ ಮಾತನಾಡಿ, ಬಡ ವರ್ಗದ ಜನರನ್ನು ಕಡೆಗಣಿಸುತ್ತಿರುವು ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮುಷ್ಕರದಲ್ಲಿ ನಿರತರಾದ ಕೆಲವರು ಅಸ್ವಸ್ಥ ರಾಗಿದ್ದಾರೆಂದು ತಿಳಿದ ಹಿನ್ನಲೆಯಲ್ಲಿ ಸರ ಕಾರಿ ಆಸ್ಪತ್ರೆಯ ಡಾ.ಗಿರಿಧರ್ ಸ್ಥಳಕ್ಕೆ ಆಗ ಮಿಸಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

Translate »