- ರಸ್ತೆ, ಯುಜಿಡಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ
- ಶುಶ್ರೂಷಕರ, ಪೌರಕಾರ್ಮಿಕ ಸಮಸ್ಯೆ ಪರಿಹರಿಸಲು ಸಚಿವರ ಭರವಸೆ
ಪಾಂಡವಪುರ:ಪಾಂಡವಪುರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂ ಗಣದಲ್ಲಿ ಪಟ್ಟಣದ ಅಭಿವೃದ್ಧಿ ಸಂಬಂಧ ನಡೆದ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಪಟ್ಟಣದ ಪುರಸಭೆ ವ್ಯಾಪ್ತಿ ಯಲ್ಲಿ ನಡೆಯಬೇಕಿದ್ದ ಅಭಿವೃದ್ಧಿ ಕೆಲಸಗಳ ಕ್ರಿಯಾ ಯೋಜನೆ ತಯಾರಿಸಬೇಕು. ಕೂಡಲೇ, ಕಾಮಗಾರಿಯನ್ನು ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶೀಘ್ರವೇ ಯುಜಿಡಿ ಪ್ರಾರಂಭ: ಪಟ್ಟಣ ದಲ್ಲಿ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ಸಮಸ್ಯೆಯಿಂದಾಗಿ ಪಟ್ಟಣ ದಲ್ಲಿ ಯುಜಿಡಿ ಸಮಸ್ಯೆ ದ್ವಿಗುಣಗೊಂಡಿದ್ದು, ಅರ್ಧಕ್ಕೆ ಸ್ಥಗಿತಗೊಂಡಿರುವ ಯುಜಿಡಿ ಸಮಸ್ಯೆಯನ್ನು ಬಗೆಹರಿಸಬೇಕು. ಕಾಮಗಾರಿ ಯನ್ನು ಪುನರ್ ಪ್ರಾರಂಭಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ಹಿಂದೆಯೇ ಯುಜಿಡಿ ಸಮಸ್ಯೆ ಬಗೆ ಹರಿಸಬೇಕಿತ್ತು. ಆದರೆ, ಯುಜಿಡಿ ಕಾಮ ಗಾರಿಗೆ ಕೆಲವು ಸಂಘಟನೆಗಳು ನಮಗೆ ಸಹ ಕರಿಸದಿದ್ದರಿಂದ ಸಮಸ್ಯೆ ಎದುರಾಗಿತ್ತು. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನ್ಯಾಯಾಲಯದ ಮೋರೆ ಹೋಗಿರುವವರೊಂದಿಗೆ ಚರ್ಚಿಸಿ ದ್ದೇನೆ. ಸಮಸ್ಯೆಯನ್ನು ಬಗೆಹರಿಸಿ ಅಧರ್Àಕ್ಕೆ ಸ್ಥಗಿತಗೊಂಡಿರುವ ಯುಜಿಡಿ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ರಸ್ತೆ ಅಭಿವೃದ್ಧಿಗೆ 25 ಕೋಟಿ ಮೀಸಲು: ಪಟ್ಟಣದ ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿ ಗಾಗಿಯೇ 25 ಕೋಟಿ ಅನುದಾನ ಮೀಸಲಿ ಡಲಾಗಿದೆ. ಇದರಲ್ಲಿ 14 ಕೋಟಿ ಹಣ ಬಿಡುಗಡೆಯಾಗಿದೆ. ಉಳಿದ ಹಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಪೌರಕಾರ್ಮಿಕರಿಗೆ ವೇತನ ನೀಡಿಲ್ಲ: 7 ತಿಂಗಳಿಂದ ಪುರಸಭೆಯ ಪೌರ ಕಾರ್ಮಿಕರು
ಹಾಗೂ ವಾಟರ್‍ಮ್ಯಾನ್ ಗಳಿಗೆ ಸಂಬಳವನ್ನೇ ಕೊಟ್ಟಿಲ್ಲ. ಜೊತೆಗೆ ಪೌರಕಾರ್ಮಿಕರಿಗೆ ಪುರಸಭೆಯಿಂದ ಬೆಳಗಿನ ತಿಂಡಿಕೊಡಬೇಕು ಎಂಬ ನಿಯಮ ವಿದೆ. ಆದರೂ, ಈವರೆಗೂ ನಮಗೆ ತಿಂಡಿ ಯನ್ನು ಕೊಟ್ಟಿಲ್ಲ. ಕೆಲವು ಸದಸ್ಯರ ರಾಜ ಕೀಯ ಒತ್ತಡದಿಂದ ಪೌರಕಾರ್ಮಿಕರ ಹೆಸರಿನಲ್ಲಿ ಇಬ್ಬರು ಮಹಿಳೆಯರನ್ನು ಕಚೇರಿ ಕೆಲಸಕ್ಕೆ ಬಳಕೆ ಮಾಡಿಕೊಂಡು ಇದೀಗ ಖಾಯಂ ನೇಮಕಾತಿ ಮಾಡಿಕೊಳ್ಳಲು ಹೊರ ಟಿದ್ದಾರೆ. ಆ ಇಬ್ಬರು ಮಹಿಳೆಯರು ಒಂದೇ ಒಂದು ದಿನವೂ ಪೌರ ಕಾರ್ಮಿಕರ ಕೆಲಸ ಮಾಡಿಲ್ಲ. ಕಚೇರಿಯಲ್ಲಿ ಕಸವನ್ನು ನಾವೇ ತೊಡೆಯಬೇಕೆ ಹೊರತು, ಅವರು ಎಂದೂ ತೊಡೆದಿಲ್ಲ ಅಂತಹವರನ್ನು ಅಧಿಕಾರಿಗಳು ಖಾಯಂ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಪೌರಕಾರ್ಮಿಕರ ಸಚಿವವರಿಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಪುಟ್ಟರಾಜು ಅವರು, ತ್ವರಿತವಾಗಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ನಗರಾಭಿವೃದ್ಧಿ ಯೋಜನಾ ಧಿಕಾರಿ ನರಸಿಂಹಮೂರ್ತಿ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ ಚಾಮರಾಜೇಗೌಡ, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಎಂ.ವಿ.ರೂಪ, ಸೆಸ್ಕ್ ಎಂಜಿನಿಯರ್ ಶ್ರೀನಿವಾಸಮೂರ್ತಿ ಸೇರಿ ದಂತೆ ಇತರರು ಹಾಜರಿದ್ದರು.
ಸಾರ್ವಜನಿಕ ಆಸ್ಪತ್ರೆಗೆ ಸಚಿವರ ಭೇಟಿ
ಸಭೆಯ ನಂತರ ಸಚಿವ ಸಿ.ಎಸ್. ಪುಟ್ಟರಾಜು ಅವರು ಅಧಿಕಾರಿಗ ಳೊಂದಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿಯೇ ಹೆÀರಿಗೆ ಮತ್ತು ಮಕ್ಕಳ (ಎಂಸಿಎಚ್) ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು. ಶಿಥಿಲಗೊಂಡಿರುವ ವೈದ್ಯರ ಹಾಗೂ ಗ್ರೂಪ್ ‘ಡಿ’ ನೌಕರರ ವಸತಿ ಗೃಹಗಳು ಕಟ್ಟಡ ದುರಸ್ತಿಗೊಳಿಸಿ ಅನು ಕೂಲ ಕಲ್ಪಿಸಬೇಕು. ತಾಲೂಕು ಆರೋಗ್ಯಾ ಧಿಕಾರಿಗಳ ಕಚೇರಿಯನ್ನು ಹೊಸದಾಗಿ ನಿರ್ಮಿಸಿಕೋಡಬೇಕು. ಆಸ್ಪತ್ರೆಯಲ್ಲಿ ಕೊರತೆ ಇರುವ ಸ್ಟಾಪ್ ನರ್ಸ್‍ಗಳ ಸಮಸ್ಯೆ ಯನ್ನು ಬಗೆಹರಿಸಬೇಕು ಎಂದು ವೈದ್ಯಾಧಿ ಕಾರಿಗಳು ಸಚಿವರಿಗೆ ಬೇಡಿಕೆ ಸಲ್ಲಿಸಿದರು.
ಈ ಸಂಬಂಧ ಪ್ರಸ್ತಾವನೆಯನ್ನು ನೀಡು ವಂತೆ ವೈದ್ಯಾಧಿಕಾರಿಗಳಿಗೆ ಸಚಿವರು ಸೂಚಿ ಸಿದರು. ಶುಶ್ರೂಷಕರ ಸಮಸ್ಯೆ ಪರಿಹರಿ ಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಅರವಿಂದ್, ಡಾ.ಜಯಂತ್ ಹಾಜರಿದ್ದರು.
ಪುರಸಭೆಯ ಮುಂಭಾಗದ ಅಂಗಡಿ ಮಳಿಗೆಳನ್ನು ತೆರವುಗೊಳಿಸಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲು ಪುರಸಭೆಯ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿ, ಮಳಿಗೆಗಳನ್ನು ತೆರವುಗೊಳಿಸಬೇಕು. ನೂತನ ಕಟ್ಟಡ ನಿರ್ಮಾಣವಾದ ಬಳಿಕ ಹಾಲಿ ಅಂಗಡಿ ಮಾಲೀಕರಿಗೆ ಅಂಗಡಿಗಳನ್ನು ನೀಡಬೇಕು. -ಸಿ.ಎಸ್.ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವರು