ಶೀಘ್ರವೇ ಮಂಡ್ಯದಲ್ಲೂ ಪಾಸ್‍ಪೋರ್ಟ್ ಸೇವಾ ಕೇಂದ್ರ
ಮೈಸೂರು

ಶೀಘ್ರವೇ ಮಂಡ್ಯದಲ್ಲೂ ಪಾಸ್‍ಪೋರ್ಟ್ ಸೇವಾ ಕೇಂದ್ರ

February 23, 2019

ಸಿಐಐ ಯಂಗ್ ಇಂಡಿಯನ್ಸ್ ಮೈಸೂರು 2.0 ಔದ್ಯಮಿಕ ಶೃಂಗಸಭೆಯಲ್ಲಿ ಸಂಸದ ಪ್ರತಾಪ ಸಿಂಹ
ಮೈಸೂರು: ಶೀಘ್ರ ದಲ್ಲೇ ಮಂಡ್ಯದಲ್ಲೂ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭಿಸಲಾಗುವುದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಹೇಳಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಕಾನ್ಫೆ ಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಹಾಗೂ ಯಂಗ್ ಇಂಡಿಯನ್ಸ್ ಸಹಯೋಗದಲ್ಲಿ ಶುಕ್ರವಾರ ನಡೆದ `ಮೈಸೂರು 2.0’ ಔದ್ಯಮಿಕ ಶೃಂಗಸಭೆ ಯಲ್ಲಿ ಮಾತನಾಡಿದ ಅವರು, ನಾನು ಸಂಸದನಾಗುವ ಮುನ್ನ ನಗರದ ರಿಂಗ್ ರಸ್ತೆ ಕಾಮಗಾರಿ ಅರ್ಧಕ್ಕೇ ನಿಂತು ಹೋಗಿತ್ತು. ನಾನು ಅದನ್ನು ಪೂರ್ಣಗೊಳಿಸಿದೆ. ಇದೀಗ 177 ಕೋಟಿ ರೂ. ಬಿಡುಗಡೆ ಯಾಗಿದ್ದು, ಡಾಂಬರೀಕರಣ ಸೇರಿದಂತೆ ರಿಂಗ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಪತ್ರಕರ್ತ ಮತ್ತು ರಾಜಕಾರಣಿಗೆ ಎಲ್ಲಾ ವಿಷಯಗಳ ಬಗ್ಗೆ ಗೊತ್ತಿರಬೇಕು. ಕಾರಣ, ಜರ್ನಲಿಸ್ಟ್‍ಗಳು ಎಲ್ಲಾ ರೀತಿಯ ಕಾರ್ಯ ಕ್ರಮಗಳಿಗೂ ಹೋಗಬೇಕು. ಹಾಗೆಯೇ ರಾಜಕಾರಣಿಗಳು ಎಲ್ಲಾ ವಿಷಯಗಳ ಕುರಿತು ಮಾತನಾಡಬೇಕಾಗುತ್ತದೆ. ಹಾಗಾಗಿ ಎಲ್ಲಾ ವಿಷಯಗಳನ್ನೂ ತಿಳಿದುಕೊಂಡಿರ ಬೇಕು. ಆಗ ಮಾತ್ರ ಸಮಾಜದ ಸಮಸ್ಯೆ-ಸವಾಲುಗಳಿಗೆ ಸ್ಪಂದಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಎಕ್ಸ್‍ಪ್ರೆಸ್ ಲೇನ್ ಆಗಲಿಲ್ಲ: ಮೈಸೂರು -ಬೆಂಗಳೂರು ನಡುವೆ 10 ಲೇನ್ ಹೆದ್ದಾ ರಿಯನ್ನು ನಿರ್ಮಾಣ ಮಾಡುತ್ತಿದ್ದು, ಅಸು 2021ರ ವೇಳೆಗೆ ಪೂರ್ಣಗೊಳ್ಳ ಲಿದೆ. ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ ಸೇರಿ ದಂತೆ 6 ನಗರಗಳಿಗೆ 53 ಕಿ.ಮೀ. ಬೈಪಾಸ್ ರಸ್ತೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ, ಭೂಮಿ ವಶಪಡಿಸಿಕೊಳ್ಳಲು 3 ಸಾವಿರ ಕೋಟಿ ರೂ. ನೀಡಿದ್ದು, ಜಮೀನಿಗೆ ಉತ್ತಮ ಬೆಲೆ ನೀಡಲಾಗುತ್ತಿದೆ. ಹಾಗಾಗಿ ಭೂ ಸ್ವಾಧೀನ ದಲ್ಲಿ ಯಾವುದೇ ತಕರಾರು ಎದುರಾಗಿಲ್ಲ ಎಂದರು.

ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಯಾಗಿದ್ದಾಗ ಮೈಸೂರು-ಬೆಂಗಳೂರು ನಡುವೆ ನೈಸ್ ಎಕ್ಸ್‍ಪ್ರೆಸ್ ಕಾರಿಡಾರ್ ಮಾಡುತ್ತೇನೆ ಎಂದಿದ್ದರು. ಆದರೆ, 25 ವರ್ಷಗಳೇ ಕಳೆದರೂ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಮೈಸೂರು-ಕೊಡಗು ಕ್ಷೇತ್ರಕ್ಕೆ ಬಿಜೆಪಿ ನನಗೆ ಟಿಕೆಟ್ ಘೋಷಿಸುವರೆಗೆ ರಾಜ ಕೀಯ ವ್ಯಕ್ತಿಗಳಿಗೆ ನಾನ್ಯಾರೆಂದೇ ಗೊತ್ತಿರ ಲಿಲ್ಲ. ರಾಜಕೀಯದಂತೆ ಮೈಸೂರು ನಗರ ಕೂಡ ನನಗೆ ಹೊಸದಾಗಿತ್ತು. ಯಾವುದಾದರೂ ಹಳ್ಳಿಗೆ ಹೋಗಬೇಕಾ ದರೆ ಗೂಗಲ್ ಮ್ಯಾಪ್ ಹಾಕಿಕೊಂಡು ಹೋಗುತ್ತಿದ್ದೆ. ಮೈಸೂರಿನಲ್ಲಿ 12 ಇಂಜಿನಿ ಯರಿಂಗ್ ಕಾಲೇಜು, 85 ಪದವಿ ಕಾಲೇಜುಗಳಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣವಿದೆ. ಆದರೂ ಉದ್ಯೋಗ ಸಿಗುತ್ತಿಲ್ಲ ಯಾಕೆ ಎಂದು ಬಹುತೇಕ ನಾಗರೀಕರು ನನ್ನನ್ನು ಪ್ರಶ್ನಿಸಿ ದರು. ಇದಕ್ಕೆ ಮುಖ್ಯ ಕಾರಣ ಸಂಪರ್ಕ ಸಮಸ್ಯೆ ಎಂದು ತಿಳಿಯಿತು. ಪ್ರತಿದಿನ ಮೈಸೂರು-ಬೆಂಗಳೂರು ನಡುವೆ 36 ಸಾವಿರ ವಾಹನಗಳು ಸಂಚರಿಸುತ್ತಿದ್ದು, ಟ್ರಾಫಿಕ್ ಜಾಮ್ ಆಗುತ್ತಿತ್ತು. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ರೂಪಿಸ ಬೇಕೆಂದು ರಸ್ತೆ, ರೈಲು, ವಿಮಾನ ಸಂಪರ್ಕ ವ್ಯವಸ್ಥೆ ಹೀಗೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡೆ ಎಂದು ವಿವರಿಸಿದರು. ಸಿಐಐನ ಭಾಸ್ಕರ್ ಕಳಲೆ, ಘನಶ್ಯಾಮ್ ಮುರಳಿ, ಡಿ.ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Translate »