ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ
ಮೈಸೂರು

ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ

July 1, 2019

ಪಿರಿಯಾಪಟ್ಟಣ, ಜೂ.30(ರಮೇಶ್)- ಮಲೇರಿಯಾ ರೋಗ ನಿಯಂತ್ರಣಕ್ಕೆ ತಂದಂತೆ ಡೆಂಗ್ಯೂ, ಚಿಕುನ್ ಗುನ್ಯಾ ರೋಗ ತಡೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗಮನಹರಿಸಬೇಕು ಎಂದು ಶಾಸಕ ಕೆ. ಮಹದೇವ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಒಂದೂ ಮಲೇರಿಯಾ ಪ್ರಕರಣ ಪತ್ತೆಯಾಗದಿರುವುದರ ಹಿಂದೆ ಆರೋಗ್ಯ ಇಲಾಖೆಯ ಶ್ರಮವಿದೆ. ಜನರಲ್ಲಿ ಜಾಗೃತಿ ಮೂಡಿಸಿ ಖಾಯಿಲೆ ಬಾರದಂತೆ ಕ್ರಮವಹಿಸಿರುವುದು ಶ್ಲಾಘನೀಯ. ಈ ಹಿಂದೆ ತಿಗಣೆ ಕಾಟ ಹೆಚ್ಚಿತ್ತು, ಸೊಳ್ಳೆ ಗಳು ಹೆಚ್ಚಿರಲಿಲ್ಲ. ಟೈಫಾಡ್ ಜ್ವರದಿಂದ ಸಾವುಗಳು ಸಂಭವಿಸುತ್ತಿದ್ದವು. ಆದರೆ ಈಗ ಡೆಂಗ್ಯೂ, ಚಿಕುನ್‍ಗುನ್ಯಾ ಪ್ರಕರಣ ಗಳು ಹೆಚ್ಚಾಗಿವೆ. ಈ ರೋಗಗಳು ಸೊಳ್ಳೆ ಯಿಂದಲೇ ಬರುವುದರಿಂದ ಇವುಗಳನ್ನು ತಡೆಗಟ್ಟಲು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಸಭೆಯಲ್ಲಿ ಮಲೇರಿಯಾ ಬಗ್ಗೆ ಮಾಹಿತಿ ನೀಡಿದ ಡಾ.ರಥನ್‍ರಾಜ್ ಕ್ರಿ.ಶ.1700ರಿಂದಲೂ ಮಲೇರಿಯಾ ಖಾಯಿಲೆ ಇದ್ದು, ವಿಶ್ವ ಆರೋಗ್ಯ ಸಂಸ್ಥೆ ಇದರ ನಿರ್ಮೂಲನೆಗೆ ಹೆಚ್ಚು ಒತ್ತು ಕೊಟ್ಟಿದೆ. ಪ್ರಸ್ತುತ ಆರೋಗ್ಯ ಇಲಾಖೆಯ ಸತತ ಪರಿ ಶ್ರಮದಿಂದ ಜಿಲ್ಲೆಯಲ್ಲಿ ಒಂದೂ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. ಆದರೆ ಇದರ ಬದ ಲಾಗಿ ಡೆಂಗ್ಯೂ, ಚಿಕುನ್ ಗುನ್ಯಾ, ಮಂಗನ ಕಾಯಿಲೆ ಮುಂತಾದ ರೋಗಗಳು ಕಾಣಿಸಿ ಕೊಳ್ಳುತ್ತಿದೆ. ಇವುಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಕಾರ ಅಗತ್ಯ ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಶ್ ಮಾತನಾಡಿ, ಈ ಬಾರಿ `ಶೂನ್ಯ ಮಲೇರಿಯಾ ನನ್ನಿಂದಲೇ’ ಎಂಬ ಘೋಷಣೆ ಯೊಂದಿಗೆ ಮಲೇರಿಯಾ ಮಾಸಾಚರಣೆ ಮಾಡಲಾಗುತ್ತಿದ್ದು. ತಾಲೂಕಿನಲ್ಲಿ ಯಾವುದೇ ಮಲೇರಿಯಾ ಪ್ರಕರಣ ಕಾಣಿಸಿಕೊಳ್ಳ ದಂತೆ ಕ್ರಮ ವಹಿಸಲಾಗಿದೆ. ಆದಾಗಿಯೂ ಸಾರ್ವಜನಿಕರು ತಮ್ಮ ಸುತ್ತಮುತ್ತಲ ಪರಿ ಸರಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ಆರೋಗ್ಯ ಇಲಾಖೆ ಯಿಂದ ಏರ್ಪಡಿಸಿದ್ದ ಮಲೇರಿಯಾ ಮಾಸಾ ಚರಣೆ ಜಾಗೃತಿ ಜಾಥಾಕ್ಕೆ ಟಿಹೆಚ್‍ಓ ನಾಗೇಶ್ ಚಾಲನೆ ನೀಡಿದರು. ಈ ಸಂದರ್ಭ ದಲ್ಲಿ ತಾಪಂ ಸದಸ್ಯ ರಂಗಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ನಿರಂಜನ್, ಪ್ರಕಾಶ್‍ಸಿಂಗ್, ಮಾಜಿ ತಾಪಂ ಸದಸ್ಯ ಕಗ್ಗುಂಡಿ ಸುರೇಶ್, ವೈದ್ಯಾಧಿಕಾರಿ ಡಾ.ಶಿವಕುಮಾರ್, ಬಿಹೆಚ್ ಇಓ ಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮಂಜು ಮದಕರಿ, ಶೇಷಗಿರಿ, ವಿವಿಧ ಪಿಹೆಚ್‍ಸಿ ವೈದ್ಯರು, ಶುಶ್ರೂ ಷಕಿಯರು ಮತ್ತು ಆಶಾ ಕಾರ್ಯಕರ್ತರು ಸೇರಿದಂತೆ ಮತ್ತಿತರರಿದ್ದರು.

Translate »