ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ ಆರೋಗ್ಯ ಸಿಬ್ಬಂದಿಗೆ ಶಾಸಕ ಕೆ.ಮಹದೇವ್ ಸಲಹೆ
ಮೈಸೂರು

ಮಲೇರಿಯಾ ನಿಯಂತ್ರಣಕ್ಕೆ ಗಮನಹರಿಸಿ ಆರೋಗ್ಯ ಸಿಬ್ಬಂದಿಗೆ ಶಾಸಕ ಕೆ.ಮಹದೇವ್ ಸಲಹೆ

July 1, 2019

ಸರಗೂರು, ಜೂ.30(ನಾಗೇಶ್)- ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಹೆಚ್.ಡಿ.ಕೋಟೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಂಸದ ವಿ.ಶ್ರೀನಿವಾಸ್‍ಪ್ರಸಾದ್ ಭರವಸೆ ನೀಡಿದರು.

ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ನಡೆದ ಅಖಿಲ ಕರ್ನಾಟಕ ನಾಮಧಾರಿಗೌಡ ಸಂಘದ ನೂತನ ಕಟ್ಟಡ, ವಾರ್ಷಿಕ ಮಹಾಸಭೆ ಸಮಾರಂಭ ಉದ್ಘಾಟಿಸಿ ಅವರು ಮಾತ ನಾಡಿದರು. ಗಡಿನಾಡು ಎಂದು ಬಿಂಬಿ ಸಲ್ಪಡುವ ಕೋಟೆಯಲ್ಲಿ ವನಸಿರಿ ಸಂಪತ್ತು ಅಪಾರ ಪ್ರಮಾಣದಲ್ಲಿದೆ. ಇಂಥ ತಾಲೂ ಕಿನ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಅನು ಭವವನ್ನು ಅಭಿವೃದ್ಧಿಗಾಗಿ ಮೀಸಲಿಟ್ಟು, ಮತದಾರರು ನೀಡಿರುವ ಅವಕಾಶವನ್ನು ಅವರ ಸೇವೆಗೆ ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದರಲ್ಲದೆ, ಈ ಭಾಗದ ಸಮಸ್ಯೆ ಗಳನ್ನು ಮೊದಲು ಅರಿತುಕೊಂಡು ಶಾಸ ಕರು, ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾ ಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಸರಗೂರು ಅಭಿವೃದ್ಧಿಗೂ ಕ್ರಮ: ನೂತನ ತಾಲೂಕು ಸರಗೂರು ಅಭಿವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಕ್ರಮ ವಹಿಸುತ್ತೇನೆ. ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರ ಸರಗೂರಿಗೆ ಬೇಕಾಗುವ ಮೂಲ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು. ಸಮಾಜದ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಮುಂದಾ ಗಬೇಕು. ಇದರಿಂದ ಮಕ್ಕಳಲ್ಲಿ ಯೋಚಿ ಸುವ ಶಕ್ತಿ ಬರಲಿದೆ. ಅಲ್ಲದೆ ಸಮಾಜ ದಲ್ಲಿ ಉನ್ನತ ಹುದ್ದೆಯನ್ನು ಅಲಂಕ ರಿಸಲೂ ಸಾಧ್ಯವಾಗಲಿದೆ ಎಂದು ಇದೇ ವೇಳೆ ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಉನ್ನತ ಶಿಕ್ಷಣ ಸಚಿವರೂ ಆದ ಜಿ.ಟಿ.ದೇವೇ ಗೌಡ ಮಾತನಾಡಿ, ಮಕ್ಳಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಸರಗೂರು ಪಟ್ಟಣದಲ್ಲಿ ಪದವಿ ಕಾಲೇಜು ಆರಂಭಕ್ಕೆ 3.80 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿ ಸಲಾಗುವುದು. ಹ್ಯಾಂಡ್‍ಪೋಸ್ಟ್-ಎನ್.ಬೇಗೂರು ಹಾಗೂ ಸರಗೂರು-ಬೀದರಹಳ್ಳಿ ರಸ್ತೆಗಳು ತುಂಬಾ ಹದ ಗೆಟ್ಟಿದ್ದು, ಸಂಬಂಧಪಟ್ಟ ಅಧಿಕಾರಿ ಗಳೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಕೆಲವೇ ದಿನಗಳಲ್ಲಿ ರಸ್ತೆ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗಲಿದೆ ಎಂದು ತಿಳಿಸಿದರು.

ಶಾಸಕ ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಮ್‍ಸುಂದರ್, ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರ ದಾಸ್, ಸಂಘದ ಅಧ್ಯಕ್ಷ ಹೆತ್ತೇಗೌಡ, ಕೇಂದ್ರ ಸಮಿತಿ ಅಧ್ಯಕ್ಷ ಸಿ.ಜಿ.ನಾಗರಾಜು ಮಾತ ನಾಡಿದರು. ಮಾಜಿ ಸಚಿವ ಎಂ.ಶಿವಣ್ಣ, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಕೇಂದ್ರ ಸಮಿತಿ ಉಪಾಧ್ಯಕ್ಷ ಎಂ.ಎನ್.ಜಗ ದೀಶ್, ರಾಜಶೇಖರ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಮಲ್ಲಿಕಾರ್ಜುನ, ಜಿಪಂ ಮಾಜಿ ಸದಸ್ಯ ರವಿ, ಸಂಘದ ಮಾಜಿ ಅಧ್ಯಕ್ಷರಾದ ಬಿ.ಸಿ.ಬಸಪ್ಪ, ಎಚ್.ದೇವ ದಾಸ್, ಉಪಾಧ್ಯಕ್ಷ ಎಂ.ಎನ್.ಭೀಮ ರಾಜ್, ನೆಹರು ಯುವ ಕೇಂದ್ರದ ಎಂ.ಎನ್. ನಟರಾಜು, ಸಮಾಜದ ಮುಖಂಡರಾದ ಎಂ.ಎನ್.ಜಯರಾಮ್ ಇನ್ನಿತರರಿದ್ದರು.

Translate »