ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

July 1, 2019

ಮೈಸೂರು,ಜೂ.30(ವೈಡಿಎಸ್)-ಸರಸ್ವತಿಪುರಂನ ಶ್ರೀಕೃಷ್ಣಧಾಮದ ಶ್ರೀಕೃಷ್ಣ ಸಭಾಭವನದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಭಾನುವಾರ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶ್ರೀಕೃಷ್ಣ ಮಿತ್ರ ಮಂಡಳಿ, ಶ್ರೀಕೃಷ್ಣ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‍ಎಸ್ ಎಲ್‍ಸಿಯಲ್ಲಿ ಹೆಚ್ಚು ಅಂಕ ಪಡೆದ ಹೆಚ್.ಕೆ. ತೇಜಸ್, ವಿ.ಹಿಮಾನಿ, ಎಂ.ಎನ್. ಅನಘ, ಎನ್.ಶ್ರೀಹರಿ, ಜಿ.ಸಾಧನಾ, ಎಸ್.ಕೀರ್ತನಾ, ಟಿ.ಆದಿತ್ಯ, ಮಾನ್ಯ ಎಸ್.ರಾವ್, ಜಿ.ಧೃತಿ, ಬಿ.ಚೇತನ, ಎಂ.ಅನಘ, ಎಸ್.ಕಾವ್ಯ, ಆರ್.ರಾಮಂತ್, ಎಸ್.ಸೊರಭ್, ಹೆಚ್.ವಿ.ಸಾಗರ್, ವಿ.ಅನನ್ಯ ಸೇರಿದಂತೆ 48 ಮಂದಿ. ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೆ.ಸ್ನೇಹ, ಜಿ.ಅಜಿತ್‍ಕುಮಾರ್, ಬಿ.ನೇಹಾ, ನೇಹಾ ಜಗನ್ನಾಥ್, ಆರ್.ಅದಿತಿ, ಅದಿತಿ ಅನಂತ್, ಎಸ್.ಸುಮುಖ, ಎನ್.ಐಶ್ವರ್ಯ, ಬಿ.ಎಂ.ಅಚಲ, ಪಿ.ಸಹನಾ, ಎಸ್.ಸಂಜನಾ ಪ್ರಭು, ಕೆ.ಆರ್.ನಿತ್ಯಶ್ರೀ ಹಾಗೂ ಎಸ್‍ಎಸ್ ಎಲ್‍ಸಿ ಸಿಬಿಎಸ್‍ಇಯ ಎಸ್.ವಿ.ಪವನ್, ನೇಹ ರಾಜು, ಎಸ್.ಶಶಾಂಕ್, ಹೆಚ್.ಎನ್. ಸಾಧ್ವಿ, ಸಂಜನಾಮೂರ್ತಿ, ಎನ್.ಲಾವಣ್ಯ ಸೇರಿದಂತೆ ಒಟ್ಟು 72 ಮಂದಿಗೆ ಪ್ರತಿಭಾ ಪುರಸ್ಕಾರ ಮತ್ತು ಗಿಡಗಳನ್ನು ನೀಡಿ ಪರಿಸರ ಕಾಳಜಿ ಬೆಳೆಸಿದರು.

ಮಹಾರಾಜ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜೀಸ್ ಅಧ್ಯಕ್ಷ ಡಾ.ಎಸ್.ಮುರಳಿ ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ನಂತರ ಮಾತ ನಾಡಿ, ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗದೇ, ಸಮಾಜಕಟ್ಟುವಲ್ಲಿ ಪ್ರಮುಖ ಕೊಡುಗೆ ನೀಡುಬೇಕು. ಓದಿನೊಂದಿಗೆ ಸಮಾಜದಲ್ಲಿ ನಡೆಯುತ್ತಿರುವ ವಿದ್ಯಾ ಮಾನಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ವಿದ್ಯಾರ್ಥಿಗಳು ತಿಳಿದು ಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ರವಿಶಾಸ್ತ್ರಿ, ಕಾರ್ಯದರ್ಶಿ ಪಿ.ಜಿ.ಪ್ರವೀಣ, ಶ್ರೀಕೃಷ್ಣ ಟ್ರಸ್ಟ್‍ನ ಉಪಾಧ್ಯಕ್ಷರಾದ ಪಿ.ಜಯ ರಾಮ ಭಟ್ಟ, ಜೆ.ಎಲ್.ಅನಂತ ತಂತ್ರಿ, ಕಾರ್ಯದರ್ಶಿ ಹೆಚ್.ವಿ.ರಾಘ ವೇಂದ್ರ ಭಟ್, ಶ್ರೀಕಾಂತಭಟ್ ಮತ್ತಿತರರು ಉಪಸ್ಥಿತರಿದ್ದರು.

Translate »