ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾರೀರಿಕ, ಬೌದ್ಧಿಕ ಬೆಳವಣಿಗೆ ಅವಶ್ಯ
ಮೈಸೂರು

ವಿದ್ಯಾರ್ಥಿಗಳ ಭವಿಷ್ಯಕ್ಕೆ ಶಾರೀರಿಕ, ಬೌದ್ಧಿಕ ಬೆಳವಣಿಗೆ ಅವಶ್ಯ

July 15, 2019

ಮೈಸೂರು, ಜು.14-ವಿದ್ಯಾರ್ಥಿಗಳಿಗೆ ಅಗತ್ಯ ಸಂಸ್ಕಾರ ಕಲಿಸುವ ಮೂಲಕ ಅವ ರಿಗೆ ಉತ್ತಮವಾದ ಭವಿಷ್ಯವನ್ನು ಕಟ್ಟಿಕೊಡ ಬೇಕೆಂದು ವ್ಯಕ್ತಿತ್ವ ವಿಕಸನ ತರಬೇತು ದಾರರೂ ಆದ ನಿವೃತ್ತ ಬ್ಯಾಂಕ್ ಅಧಿ ಕಾರಿ ಕೆ.ಪಿ.ಪ್ರದ್ಯುಮ್ನ ಕರೆಕೊಟ್ಟರು.

ಜೆ.ಪಿ.ನಗರದ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆ ಗಳು ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮುಗ್ಧ ಮನಸುಗಳು ಜೇಡಿಮಣ್ಣಿದ್ದಂತೆ. ಆ ಮಣ್ಣಿನಿಂದ ಉತ್ತಮವಾದ ಮೂರ್ತಿ ಗಳನ್ನು ರೂಪಿಸಬಹುದೆಂದರು. ಹಾಗೆಯೇ ವಿದ್ಯಾರ್ಥಿಗಳು ಹಾಲಿದ್ದಂತೆ. ಹಾಲಿಗೆ ಸಂಸ್ಕಾರ ನೀಡಿದಾಗ ಮಾತ್ರ ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ವಾಗುವಂತೆ ವಿದ್ಯಾರ್ಥಿಗಳಿಗೆ ಗುರುವಿನ ಮುಖೇನ ಸಂಸ್ಕಾರ ನೀಡಿದಾಗ ಉತ್ತಮ ವಿದ್ಯಾರ್ಥಿ, ಚಿಂತಕ ಹಾಗೂ ಮಾರ್ಗದರ್ಶಿ ಯಾಗಬಲ್ಲರು. ಹಾಗೆಯೇ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳು ಮನಸ್ಸನ್ನು ಮಾರ್ಪಡಿ ಸುತ್ತವೆ ಎಂದು ತಿಳಿಸಿದರು.

ಕ್ರೀಡಾ ವೇದಿಕೆ ಉದ್ಘಾಟಿಸಿ ಮಾತನಾಡಿದ ಯೋಗಪಟು ಡಾ. ಜಯಪ್ಪ ಹೊನ್ನಾಳಿ, ಉತ್ತಮ ಸಂಸ್ಕøತಿ ಎನ್ನುವುದು ಕಾಲೇಜಿ ನಲ್ಲಿರುವ ಸತ್ಕಾರ ರೀತಿಯಿಂದ ಗೊತ್ತಾಗು ತ್ತದೆ ಎಂದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಉಸಿರಾಡುವ ಕಂಪ್ಯೂಟರ್ ಗಳಂತಿದ್ದು, ಹಾಗಾಗದೇ ವಿದ್ಯಾರ್ಥಿಗಳನ್ನು ಜೀವಂತ ಮನಸ್ಸುಗಳನ್ನಾಗಿ ಪರಿವರ್ತಿ ಸುವ ಅವಶ್ಯಕತೆ ಇದೆ ಎಂದರು.

ಎಸ್‍ಜೆಸಿಇ ಕಾಲೇಜಿನ ಮುಖ್ಯ ಆಡಳಿ ತಾಧಿಕಾರಿ ಪ್ರೊ. ಜಿ.ಕೆ.ಚಂದ್ರಶೇಖರಪ್ಪ, ಕಾಲೇಜು ಪ್ರಾಂಶುಪಾಲ ಹೆಚ್.ಎಂ.ಮಹ ದೇವಪ್ಪ ಮಾತನಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಹೆಚ್.ಎನ್.ನಾಗರಾಜು, ವಿಶೇಷ ಉಪನ್ಯಾಸ ಕಾರ್ಯದರ್ಶಿ ನಿರ್ಮಲ ಉಪ ಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಕಾರ್ಯ ದರ್ಶಿ ಪ್ರವೀಣ್‍ಕುಮಾರ್ ಪ್ರಾರ್ಥಿಸಿ ದರು. ಸಹ ಕಾರ್ಯದರ್ಶಿ ಕು.ಕುಸುಮಾ ಬಾಯಿ ಸ್ವಾಗತಿಸಿದರೆ, ಕು.ನಮಿತಾ ವಂದಿಸಿ ದರು. ಎಸ್.ನಂದೀಶ್ ನಿರೂಪಿಸಿದರು.

Translate »