ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಸಂಸದ ವಿ.ಶ್ರೀನಿವಾಸ ಪ್ರಸಾದ್
ಮೈಸೂರು

ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ: ಸಂಸದ ವಿ.ಶ್ರೀನಿವಾಸ ಪ್ರಸಾದ್

July 15, 2019

ಮೈಸೂರು,ಜು.14(ವೈಡಿಎಸ್)-ಸಂವಿಧಾನ ಬದ್ಧವಾಗಿ ಮೈತ್ರಿ ಸರ್ಕಾರ ಉರುಳಿದರೆ ರಾಜ್ಯಪಾಲರ ಆಡಳಿತಕ್ಕೆ ಅವಕಾಶ ನೀಡದೆ ಬಿಜೆಪಿ ಜವಾಬ್ದಾರಿಯುತ ಸರ್ಕಾರ ರಚಿಸಲಿದೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಭರವಸೆ ನುಡಿಗಳನ್ನಾಡಿದರು.

ಮೈಸೂರಿನ ವಿಶ್ವೇಶ್ವರನಗರದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುವುದು ಕಷ್ಟವಿದೆ. ಉಳಿ ಯುತ್ತದೆಂಬ ನಂಬಿಕೆ ಇಲ್ಲ. ಸರ್ಕಾರ ಉರುಳಿದರೆ ಬಿಜೆಪಿ 107 ಸೀಟುಗಳಿದ್ದು, ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ಉರುಳಿದರೆ ಬಿಜೆಪಿ ಸರ್ಕಾರ ರಚಿಸಲಿದೆ. ಇನ್ನೂ ಆಡಳಿತಾವಧಿ 4 ವರ್ಷಗಳಿದ್ದು, ಉತ್ತಮ ಆಡಳಿತ ನೀಡುವ ಮೂಲಕ ಜನರಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.

ವರ್ಷದಿಂದ ದೋಸ್ತಿ ಸರ್ಕಾರದಲ್ಲಿ ಸಮನ್ವಯತೆ ಇತ್ತೇ? ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಶಾಸಕಾಂಗ ಸಭೆ ನಡೆಸಿದಾಗಲೆಲ್ಲಾ ಸಾವಧಾನವಾಗಿ ಮಾತ ನಾಡಿದ್ದಾರಾ? ಸಿದ್ದರಾಮಯ್ಯ ಅವರು ಬರೀ ಸಮಸ್ಯೆ ಗಳನ್ನು ಉದ್ಭವ ಮಾಡುತ್ತಾರೆ. ಅತೃಪ್ತ ಶಾಸಕರ ರಾಜೀನಾಮೆಗೆ ಯಾರು ಕಾರಣ? ಎಂದು ಪ್ರಶ್ನಿಸಿದ ಅವರು, ದೇವೇಗೌಡರಿಗೆ ಸಿದ್ದರಾಮಯ್ಯ, ಸಿದ್ದರಾ ಮಯ್ಯಗೆ ದೇವೇಗೌಡರೇ ದುಷ್ಮನ್. ಅದ್ಯಾವ ರೀತಿ ಇವರು ಮಿತ್ರರಾಗುತ್ತಾರೆ? ಎಂದು ಹೇಳಿದರು.

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿ ಇಲಾಖೆಗೂ ಮಧ್ಯ ಪ್ರವೇಶಿಸುತ್ತಿದ್ದರು. ಸರ್ವಾ ಧಿಕಾರತ್ವ ಇತ್ತು. ಜೆಡಿಎಸ್‍ನಲ್ಲಿ ಕುಟುಂಬದವರೇ ಇದ್ದಾರೆ. ಮೈತ್ರಿ ಸರ್ಕಾರವಿದ್ದರೂ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು, ಮಂಡ್ಯದಲ್ಲಿ ಪಂಚಾಯತಿಯಿಂದ ಪಾರ್ಲಿ ಮೆಂಟ್‍ವರೆಗೆ ಜೆಡಿಎಸ್‍ನವರೇ ಅಧಿಕಾರದಲ್ಲಿದ್ದರೂ ನಿಖಿಲ್ ಕುಮಾರಸ್ವಾಮಿ ಸೋಲನ್ನನುಭವಿಸಿ ದರು. ಜನರು ಇವರ ಆಡಳಿತದ ಬಗ್ಗೆ ಬೇಸರಗೊಂಡಿದ್ದಾರೆ ಎಂದರು.

ಮೈತ್ರಿ ಆಡಳಿತದಲ್ಲಿ ಮುಖ್ಯಮಂತ್ರಿ ಗಳು ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಹಣವನ್ನೂ ಬಿಡುಗಡೆ ಮಾಡುತ್ತಿರ ಲಿಲ್ಲ. ಶಾಸಕರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಹಾಗಾಗಿ ಅತೃಪ್ತಿ ಭುಗಿಲೆದ್ದಿದೆ. ಜತೆಗೆ ಈ ಸಮಸ್ಯೆ ಉದ್ಭವ ವಾಗಲು ಸಿದ್ದರಾಮಯ್ಯನೂ ಕಾರಣ. ಸಿದ್ದರಾಮಯ್ಯ ಅವರಿಗೆÉ ವಿರೋಧ ಪಕ್ಷದಲ್ಲಿ ಕೂರುವುದು ಬೇಕಾಗಿದೆ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಅಡಗೂರು ಹೆಚ್.ವಿಶ್ವನಾಥ್ ಅವರು ಕೆ.ಆರ್.ನಗರ ಪುರಸಭೆಯ ಟಿಕೆಟ್ ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದ ಅಪಾರ ನೋವು ಅನುಭವಿಸಿದ್ದಾರೆ. ಅದನ್ನು ಅವರು ಬರೆಯಬಹುದು. ರಾಜ್ಯಾಧ್ಯಕ್ಷರಾಗಿದ್ದ ವಿಶ್ವನಾಥ್ ಅವರನ್ನು ಯಾರಾದರೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿದ್ದಾರಾ?. ಇಲ್ಲ. ಸಿದ್ದರಾಮಯ್ಯನ ಕಾಟ ತಡೆಯಲಾರದೆ ಕಾಂಗ್ರೆಸ್ ಬಿಟ್ಟ ವಿಶ್ವನಾಥ್ ಅವರು ಜೆಡಿಎಸ್ ಅನ್ನೂ ತೊರೆದಿದ್ದಾರೆ. ಅವರ ಸ್ಥಿತಿ ಹಳ್ಳಿಯ ಹಕ್ಕಿಯ ಹಾಡು ಹಳ್ಳಿಹಕ್ಕಿ ಗೋಳಿನಂತಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಹೇಳಿಕೆ ಸ್ವಾರ್ಥದಿಂದ ಕೂಡಿದೆ: ಪ್ರಧಾನಿ ಮೋದಿ, ಅಮಿತ್ ಶಾ ಆಪ ರೇಷನ್ ಕಮಲ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಯಾಕೇ ರಾಜ್ಯ ರಾಜಕಾರಣಕ್ಕೆ ಕೈ ಹಾಕುತ್ತಾರೆ. ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಬಂದಿದ್ದು, ಸ್ಥಿರ ಸರ್ಕಾರ ರಚಿಸಿದ್ದಾರೆ. 5 ವರ್ಷ ಆಡಳಿತ ನಡೆಸಲಿದ್ದು, ಉತ್ತಮ ಆಡಳಿತ ನೀಡುವ ಕುರಿತು ಚರ್ಚಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ರಾಹುಲ್‍ಗಾಂಧಿ ಯನ್ನು ಪ್ರಧಾನಿ ಮಾಡುತ್ತೇವೆಂದೇ ಹೇಳುತ್ತಿದ್ದರು. ಆದರೆ, ಚಾ.ನಗರ, ಮೈಸೂರಿನಲ್ಲೇ ಲೋಕಸಭಾ ಚುನಾವಣೆಯಲ್ಲಿ ಸೋಲನನುಭವಿಸಿದ್ದಾರೆ. ಅಮೇಥಿಯಲ್ಲಿ ರಾಹುಲ್‍ಗಾಂಧಿ ಸೋಲನನುಭವಿಸಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರನ್ನು ಪಿಎಂ ಮಾಡುತ್ತೇನೆಂದು ಬಾಲಿಶ ಹೇಳಿಕೆ ನೀಡುತ್ತಾರೆ. ಅವರ ಹೇಳಿಕೆಗಳು ಸ್ವಾರ್ಥದಿಂದ ಕೂಡಿವೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಸಿಎಂ ಆಗುತ್ತಾರೋ-ಬಿಡು ತ್ತಾರೋ ಗೊತ್ತಿಲ್ಲ. ಆದರೆ, ಅವರ 5 ವರ್ಷದ ಆಡಳಿತವನ್ನು ಜನತೆ ನೋಡಿದ್ದಾರೆ. ಅವರ ಬೆಂಬಲಿಗರಾದ ಎಂಟಿಬಿ ನಾಗರಾಜ್, ಬೈರತಿ ಬಸವರಾಜ್, ಮುನಿತರ್ನ ಅವರೆಲ್ಲಾ ದೋಸ್ತಿ ಸರ್ಕಾರದ ಸಹವಾಸಬೇಡವೆಂದು ಪಕ್ಷಬಿಟ್ಟು ಹೋಗಿದ್ದಾರೆ ಎಂದರು.

ವಿಶ್ವನಾಥ್ ಬಿಜೆಪಿಗೆ?: ಸಿದ್ದರಾಮಯ್ಯ ಕಾಟದಿಂದ ಬೇಸತ್ತು ವಿಶ್ವನಾಥ್ ಅವರು ಜೆಡಿಎಸ್ ಸೇರಿ ರಾಜ್ಯಾ ಧ್ಯಕ್ಷರಾಗಿದ್ದರು. ಈಗ ಆಸ್ಥಾನಕ್ಕೂ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಬರದೆ ಇನ್ನೆಲ್ಲಿಗೆ ಹೋಗುತ್ತಾರೆ ಎಂದು ಹೇಳುವ ಮೂಲಕ ವಿಶ್ವನಾಥ್ ಬಿಜೆಪಿ ಸೇರುವ ಸುಳಿವು ನೀಡಿದರು.

ಸಚಿವ ಸಿ.ಪುಟ್ಟರಂಗಶೆಟ್ಟಿ ಬಿಜೆಪಿ ಸೇರುತ್ತಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಶೆಟ್ಟಿ ಕಟ್ಟಿ ಕೊಂಡು ಏನಾಗಬೇಕು ಎಂದು ಪ್ರತಿಕ್ರಿಯಿಸಿದರು. ಕಾಂಗ್ರೆಸ್‍ನವರು ಪ್ರತಿ ಆಪರೇಷನ್ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಆಪರೇಷನ್ ಮಾಡಲಿ ಯಾರು ಬೇಡ ಅನ್ನುತ್ತಾರೆ ಎಂದು ಉತ್ತರಿಸಿದರು.

ತೀರ್ಪಿಗೆ ಬದ್ಧರಾಗಬೇಕು: ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ನಿಧಾನ ಪ್ರವೃತ್ತಿ ಅನುಸರಿಸುತ್ತಿದ್ದಾರೆಂದು ನ್ಯಾಯಾ ಲಯದ ಮೊರೆ ಹೋಗಿದ್ದಾರೆ. ಹಾಗೆಯೇ ಸ್ಪೀಕರ್ ಕೂಡ ತಮ್ಮ ತೀರ್ಮಾನ ಸಮರ್ಥಿಸಿಕೊಂಡು ವರದಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನ್ಯಾಯಾಲಯ ಶಾಸಕ ಸ್ಥಾನವನ್ನು ಅನರ್ಹತೆ ಮಾಡಬೇಡಿ ಎಂದು ಹೇಳಿ ಮಂಗಳವಾರಕ್ಕೆ ಮುಂದೂಡಿತ್ತು. ತೀರ್ಪು ಮಂಗಳವಾರ ಹೊರ ಬೀಳಲಿದ್ದು, ಕುತೂಹಲ ಕೆರಳಿಸಿದೆ. ಈ ತೀರ್ಪಿಗೆ ಯಾರೇಯಾದರೂ ಬದ್ಧರಾಗಬೇಕಾಗುತ್ತದೆ. ನಾಳೆ ವಿಧಾನಸಭೆಯಲ್ಲಿ ಯಾವ ರೀತಿ ಬಹುಮತ ಸಾಬೀತು ಪಡಿಸುತ್ತಾರೆ ನೋಡಬೇಕು ಎಂದು ತಿಳಿಸಿದರು.

Translate »