ಪುತ್ರನನ್ನು ಸೋಲಿಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಕುತಂತ್ರ
ಮೈಸೂರು

ಪುತ್ರನನ್ನು ಸೋಲಿಸಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಕುತಂತ್ರ

April 17, 2019

ಮಂಡ್ಯ: ಮತದಾನಕ್ಕೆ ಒಂದೇ ದಿನ ಬಾಕಿ. ಬಹಿರಂಗ ಪ್ರಚಾರ ಕೊನೆಗೊಳ್ಳುವ ದಿನ ವಾದ ಮಂಗಳವಾರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್ ಕೆ. ಪರ ಇಡೀ ದಿನ ಎಡೆಬಿಡದೇ ಪ್ರಚಾರ ನಡೆಸಿದರು.

ತಗ್ಗಹಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ ಚುನಾವಣಾ ಪ್ರಚಾರ ಶುರುವಿಟ್ಟ ಅವರು, ಕೆಲವರಿಗೆ ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವುದು ಇಷ್ಟವಿಲ್ಲ. ಆದ್ದ ರಿಂದ ನನ್ನ ಮಗನನ್ನು ಸೋಲಿಸುವ ಮೂಲಕ ಕೆಳಗಿಳಿಸಲು ಮುಂದಾಗಿz್ದÁರೆ, ನನ್ನ ಮೇಲಿನ ಪ್ರೀತಿಗಾಗಿ ಜಿಲ್ಲೆ ಏಳೂ ಸ್ಥಾನವನ್ನೂ ಗೆಲ್ಲಿಸಿ ಕೊಟ್ಟಿದ್ದೀರಿ. ಈ ಚುನಾವಣೆಯಲ್ಲಿ ನಿಖಿಲ್ ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಮನವಿ ಮಾಡಿದರು. ಬಡವರು- ರೈತರ ಪರ ಯಾರು ಕೆಲಸ ಮಾಡುತ್ತಾರೆ ಎಂಬುವುದು ನಿಮಗೆ ತಿಳಿದಿದೆ. ಮುಂದಿನ ನನ್ನ ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನ ನೀಡಲು ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಿಕೊಡಿ. ರೈತರ ಅಭಿವೃದ್ಧಿಗಾಗಿ ನಾನು ಸಾಕಷ್ಟು ಶ್ರಮಿಸಿದ್ದೇನೆ. ಮುಂದೆಯೂ ರೈತರ ಪರವಾಗಿಯೇ ನಿಲ್ಲುತ್ತೇನೆ ಎಂಬುದು ನಿಮಗೆ ಗೊತ್ತಿದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದರು.

ಜಿಲ್ಲೆಯ ಪ್ರತಿ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ನನ್ನ ಗುರಿ. ಈ ಹಿನ್ನೆಲೆಯಲ್ಲಿ ರಾಜ್ಯದ 4 ಜಿಲ್ಲಾಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮೊದಲಿಗೆ ಮಂಡ್ಯ ಕ್ಷೇತ್ರ ಎಲ್ಲ ಗ್ರಾಮಕ್ಕೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದೇನೆ ಎಂದು ಹೇಳಿದರು. ಮೈಷುಗರ್ ಕಾರ್ಖಾನೆ ಉಳಿಸುವುದು ನನ್ನ ಜವಾಬ್ದಾರಿ. ಕಳೆದ ನಾಲ್ಕೈದು ತಿಂಗಳಿನಿಂದ ಅಲ್ಲಿನ ಕಾರ್ಮಿಕರು ವೇತನವೇ ನೀಡಿಲ್ಲ ಎಂದು ಅಳಲು ತೋಡಿಕೊಂಡರು. ಕೂಡಲೇ ಅವರ ಸಮಸ್ಯೆ ಇತ್ಯರ್ಥ ಮಾಡ ಬೇಕು ಎಂದು ಅವರಿಗೆ ಪೂರ್ಣ ವೇತನ ಬಿಡುಗಡೆ ಮಾಡಿಸಿದ್ದೇನೆ.

ಮೈಷುಗರ್ ಕಾರ್ಖಾನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇನೆ ಎಂದು ವಿವರಿಸಿದರು.

ಕಬ್ಬು ಸರಬರಾಜು ಮಾಡಿದ ರೈತರು ಬಾಕಿ ಹಣ ಬಿಡುಗಡೆ ಮಾಡಿಸಿ ಎಂದು ಮನವಿ ಮಾಡಿದ್ಧಾರೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಸಕ್ಕರೆ ಮಾರಾಟ ವಾದ ಕೂಡಲೇ ಎಲ್ಲ ರೈತರಿಗೆ ಬಾಕಿ ಹಣ ನೀಡಲು ಮುಂದಾಗುತ್ತೇನೆ ಎಂದರು. ಜಿಲ್ಲೆಯ ರೈತರು ಸಮೃದ್ಧಿಗಾಗಿ 2 ಬೆಳೆ ಬೆಳೆಯಬೇಕು ಎನ್ನುವ ಉದ್ದೇಶದಿಂದ ನಾನು ನಾಲೆಗಳಿಗೆ ನೀರು ಬಿಟ್ಟರೆ ರೈತರ ಓಟು ಪಡೆದುಕೊಳ್ಳುವ ಉದ್ದೇಶದಿಂದ ನೀರು ಬಿಟ್ಟಿದ್ಧಾರೆ ಎಂದು ಅಧಿಕಾರಿ ಗಳ ವಿರುದ್ಧ ದೂರು ನೀಡಿದ್ಧಾರೆ. ರೈತರು ಹಾಳುಮಾಡಲು ನಿಂತಿರುವವರನ್ನು ಗೆಲ್ಲಿಸುತ್ತೀರಾ? ನಿಮ್ಮ ಅಭಿವೃದ್ಧಿಗೆ ಪಣ ತೊಟ್ಟಿರುವವರ ಕೈಹಿಡಿಯುತ್ತೀರಾ? ಚಿಂತಿಸಿ ಎಂದರು.

Translate »