ರಸ್ತೆ ಮಧ್ಯೆ ರಾಶಿ ರಾಶಿ ಪ್ಲಾಸ್ಟಿಕ್   ಬಾಟಲ್: ಕೆಲಕಾಲ ಸಂಚಾರಕ್ಕೆ ಅಡ್ಡಿ
ಮೈಸೂರು

ರಸ್ತೆ ಮಧ್ಯೆ ರಾಶಿ ರಾಶಿ ಪ್ಲಾಸ್ಟಿಕ್  ಬಾಟಲ್: ಕೆಲಕಾಲ ಸಂಚಾರಕ್ಕೆ ಅಡ್ಡಿ

January 24, 2020

ಮೈಸೂರು, ಜ.23(ಎಂಕೆ)- ಮೈಸೂರಿನ ಆರ್‍ಎಂಸಿ ವೃತ್ತದ ಬಳಿ ರಸ್ತೆ ಮಧ್ಯದಲ್ಲಿಯೇ ರಾಶಿ ರಾಶಿ ಪ್ಲಾಸ್ಟಿಕ್ ಬಾಟಲ್ ಕಂಡು ವಾಹನ ಸವಾರರು ಕಕ್ಕಾಬಿಕ್ಕಿಯಾದ ಘಟನೆ ನಡೆದಿದೆ.

ಆರ್‍ಎಂಸಿ ವೃತ್ತದ ಸಮೀಪದ ಶೇಷಾದ್ರಿ ಅಯ್ಯರ್ ರಸ್ತೆ ಮಧ್ಯದಲ್ಲಿ ಗುರುವಾರ ಸಂಜೆ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್‍ಗಳ ರಾಶಿ ಕೆಲಕಾಲ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಯಿತು. ಸಂಜೆ 7 ಗಂಟೆ ಸಮಯದಲ್ಲಿ ಖಾಲಿ ಬಾಟಲ್‍ಗಳನ್ನು ತುಂಬಿದ್ದ ಗೂಡ್ಸ್ ಆಟೋದಿಂದ ರಾಶಿ ಬಾಟಲ್ ಗಳು ರಸ್ತೆಗೆ ಬಿದ್ದವು. ಆದರೆ, ಗೂಡ್ಸ್ ಆಟೋ ಚಾಲಕ ಮಾತ್ರ ಇದನ್ನು ಗಮನಿಸದೆ ತನ್ನ ಪಾಡಿಗೆ ಹೊರಟು ಹೋದ ಎಂದು ಕೆಲ ಪ್ರತ್ಯಕ್ಷದರ್ಶಿಗಳು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಈ ಬಗ್ಗೆ ಆರೋಗ್ಯಾಧಿಕಾರಿ ಡಾ.ನಾಗರಾಜು ಅವ ರಿಗೆ ವಿಷಯ ತಿಳಿ ಸಿದಾಗ ತಕ್ಷಣ  ಕಾರ್ಯ ಪ್ರವೃತ್ತ ರಾದ ಅವರು, ನಗರಪಾಲಿಕೆ ಸಿಬ್ಬಂದಿಗಳನ್ನು ಕಳುಹಿಸಿ ಖಾಲಿ ಬಾಟಲ್‍ಗಳನ್ನು ತೆರವುಗೊಳಿಸಿದರು.

ಸ್ವಚ್ಛ ಸರ್ವೇಕ್ಷಣೆ ತೊಡಕು: ಮೈಸೂರಿನೆಲ್ಲೆಡೆ ಸ್ವಚ್ಛಸರ್ವೇಕ್ಷಣೆ ನಡೆಯುತ್ತಿದ್ದು, ಕಂಡ ಕಂಡಲ್ಲಿ, ರಸ್ತೆ ಬದಿಗಳಲ್ಲಿ ಕಸವನ್ನು ಬಿಸಾಡುವುದರಿಂದ ಸ್ವಚ್ಛತೆ ಕಾಪಾಡಲು ತೊಂದರೆಯಾಗುತ್ತದೆ. ಸಾರ್ವಜನಿಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಪಾಲಿಕೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ.

 

Translate »