ಶತಮಾನೋತ್ಸವ ಹಿನ್ನೆಲೆ: ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಎಂಎಂಸಿ-ಆರ್‍ಐ 2024ರೊಳಗೆ ನವೀಕರಣ
ಮೈಸೂರು

ಶತಮಾನೋತ್ಸವ ಹಿನ್ನೆಲೆ: ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಎಂಎಂಸಿ-ಆರ್‍ಐ 2024ರೊಳಗೆ ನವೀಕರಣ

January 24, 2020

ಮೈಸೂರು, ಜ.23(ಆರ್‍ಕೆಬಿ)- ಮೈಸೂ ರಿನ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು 2024 ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿ ರುವ ಹಿನ್ನೆಲೆಯಲ್ಲಿ ಅದಕ್ಕೆ ಅಗತ್ಯ ಪೂರ್ವ ತಯಾರಿ ಕೈಗೊಳ್ಳಬೇಕಿರುವುದರಿಂದ ಮೂಲ ಸೌಕರ್ಯ, ಗುಣಮಟ್ಟ ಅಭಿವೃದ್ಧಿ, ಕಟ್ಟಡದ ನವೀಕರಣ ಮತ್ತು ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿ ವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವಥ್‍ನಾರಾಯಣ ತಿಳಿಸಿದರು.

ಮೈಸೂರಿನ ವಿನೋಬಾ ರಸ್ತೆಯ ನಂಜ ರಾಜ ಬಹುದ್ದೂರ್ ಛತ್ರದ ಎದುರಿನ ವೈದ್ಯ ಕೀಯ ಪಿಜಿ ವಿದ್ಯಾರ್ಥಿನಿಯರ ವಸತಿ ನಿಲಯ ಆವರಣದಲ್ಲಿ 9.50 ಕೋಟಿ ರೂ ಅಂದಾಜು ವೆಚ್ಚದಲ್ಲಿ ನೂತನ 2ನೇ ಬ್ಲಾಕ್ ಕಟ್ಟಡ ನಿರ್ಮಾಣ ಹಾಗೂ ಕೆಆರ್‍ಎಸ್ ರಸ್ತೆಯ ವೈದ್ಯಕೀಯ ವಿದ್ಯಾರ್ಥಿನಿಯರ ವಸತಿ ನಿಲಯದ ಆವರಣದಲ್ಲಿ 5.50 ಕೋಟಿ ರೂ ಅಂದಾಜಿನ ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಬಳಿಕ ಮಾಧ್ಯಮದವ ರೊಂದಿಗೆ ಮಾತನಾಡಿದರು.

ಶತಮಾನೋತ್ಸವ ಆಚರಿಸುತ್ತಿರುವ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಕೇಂದ್ರದ ಕಟ್ಟಡಗಳ ನವೀಕರಣದ ಜೊತೆಗೆ ಅಗತ್ಯ ಮೂಲ ಸೌಕರ್ಯ ಹೆಚ್ಚಿ ಸಲು ಕ್ರಮ ಕೈಗೊಳ್ಳಲಾಗುವುದು. ಕೆ.ಆರ್. ಆಸ್ಪತ್ರೆಯಲ್ಲಿ ಇನ್ನೊಂದು ಹೊರ ರೋಗಿ ಗಳ ವಿಭಾಗ ಮಾಡುವಂತೆಯೂ ಒತ್ತಾಯ ಗಳಿವೆ. ಅದಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು. ಶಾಸಕ ಎಲ್.ನಾಗೇಂದ್ರ ಆಸ್ಪತ್ರೆ ಕಟ್ಟಡ ಮತ್ತು ಶೌಚಾಲಯಗಳ ದುಸ್ಥಿತಿ ಬಗ್ಗೆ ಸಾಕಷ್ಟು ಗಮನ ಸೆಳೆದಿದ್ದಾರೆ. ಹೀಗಾಗಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿ ಕೊಳ್ಳಲಾಗುತ್ತಿದೆ. ಜೊತೆಗೆ ಮೈಸೂರಿನ ನಿರ್ಮಾಣ ಹಂತದಲ್ಲಿರುವ ಟ್ರಾಮಾ ಕೇರ್ ಆಸ್ಪತ್ರೆಯ ಕಾಮಗಾರಿ ಇನ್ನೆರಡು ತಿಂಗ ಳಲ್ಲಿ ಪೂರ್ಣಗೊಳ್ಳಲಿದೆ. ಅದಕ್ಕೆ ಬೇಕಾದ 18 ಕೋಟಿ ರೂ. ಅಂದಾಜಿನ ಸಲಕರಣೆ ಗಳನ್ನು ಒದಗಿಸಲು ಈಗಾಗಲೇ ಮಂಜೂ ರಾತಿ ನೀಡಲಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವೂ ಏಪ್ರಿಲ್‍ನಲ್ಲಿ ಮುಗಿ ಯಲಿದೆ. ಅದಕ್ಕೆ ಬೇಕಾದ ಸಿಬ್ಬಂದಿ ಮತ್ತು ಸಲಕರಣೆಗಳ ಪ್ರಸ್ತಾವನೆ ಇಟ್ಟು ಅಗತ್ಯ ಸೌಲತ್ತುಗಳನ್ನು ಒದಗಿಸಲಾಗುತ್ತದೆ ಎಂದರು.

ಈಗ ಗುದ್ದಲಿಪೂಜೆ ನಡೆಸಲಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯರ ವಸತಿ ನಿಲಯ ವನ್ನು ವಿದ್ಯಾರ್ಥಿನಿಲಯದ ಪ್ರವೇಶ ಸಂಖ್ಯೆ 250ಕ್ಕೆ ಹೆಚ್ಚಿರುವುದರಿಂದ ಹಾಸ್ಟೆಲ್ ಕೊರತೆ ನಿವಾರಿಸಲು ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಪಪಡಿಸಿ ದರು. ಅಲ್ಲದೆ ಪಿಕೆಟಿಬಿ ಆಸ್ಪತ್ರೆ ಆವರಣ ದಲ್ಲಿಯೂ ತಲಾ 40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುರುಷ ಮತ್ತು ಮಹಿಳಾ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪನೆ: ರಾಜ್ಯದ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾವೇರಿ ಮತ್ತು ಯಾದಗಿರಿಯಲ್ಲಿ ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿ ಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆ ದಿದೆ. ತ್ವರಿತವಾಗಿ ಕಾಮಗಾರಿ ಕೈಗೊಳ್ಳಲಾಗು ವುದು. ಅಲ್ಲದೆ ಇನ್ನೂ 4 ಹೊಸ ಮೆಡಿ ಕಲ್ ಕಾಲೇಜು ಮಾಡಲಿದ್ದೇವೆ. ಅಲ್ಲದೆ, ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ನೀಡಲಾಗುವುದು. ರಾಮನಗರದಲ್ಲಿ ವೈದ್ಯ ಕೀಯ ಕಾಲೇಜು ಮತ್ತು ಆರೋಗ್ಯ ನಗರ ಮಾಡಲು ತಯಾರು ಮಾಡಿಕೊಳ್ಳುತ್ತಿ ದ್ದೇವೆ. ರಾಮನಗರದಲ್ಲಿ ರಾಜೀವ್‍ಗಾಂಧಿ ವಿಶ್ವವಿದ್ಯಾನಿಲಯದಿಂದ ವೈದ್ಯಕೀಯ ಕಾಲೇಜು ಮಾಡಿಸಿ, ಅವರಿಂದಲೇ ಆರೋಗ್ಯ ನಗರವನ್ನು ಮಾಡಿಸುತ್ತೇವೆ ಎಂದೂ ಹೇಳಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ನಂಜ ರಾಜ್, ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಲೋಕೋಪಯೋಗಿ ಇಲಾಖೆ ವಿಶೇಷ ವಿಭಾಗ ಕಾರ್ಯಪಾಲಕ ಇಂಜಿನಿಯರ್ ಎಲ್.ಜಗ ದೀಶ್ ಇನ್ನಿತರರು ಉಪಸ್ಥಿತರಿದ್ದರು.

ಇಂದಿನ `ಬಾಂಬ್’ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಆರೋಪ
ಮೈಸೂರು, ಜ.23(ಆರ್‍ಕೆಬಿ)- ಹಿಂದಿನ ಸರ್ಕಾರ ಸಮಾಜಘಾತಕ ಶಕ್ತಿಗಳಿಗೆ ಕಡಿವಾಣ ಹಾಕದೆ ಅವರಿಗೆ ಪ್ರೋತ್ಸಾಹ ನೀಡಿದ್ದರಿಂದಲೇ ಇಂದಿನ ಬಾಂಬ್ ನಂತಹ ಆತಂಕ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್‍ನಾರಾಯಣ್ ದೂರಿದರು.

ಮೈಸೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದಿನ ಸರ್ಕಾರ ಸಮಾಜಘಾತಕ ಶಕ್ತಿಗಳ ವಿರುದ್ಧದ ಕೇಸ್‍ಗಳನ್ನು ವಾಪಸ್ ತೆಗೆದುಕೊಂಡಿದ್ದರಿಂದಲೇ ಅವರೆಲ್ಲರೂ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತು ಇಂದಿನ ಬಾಂಬ್ ಪರಿಸ್ಥಿತಿ ಸೃಷ್ಟಿ ಯಾಗಿದೆ ಎಂದು ದೂರಿದರು. ಇಂಥವನ್ನು ನಿಯಂತ್ರಣ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಅನೇಕ ಘಟನೆಗಳನ್ನು ನಡೆಯುವ ಮುನ್ನವೇ ಹತ್ತಿಕ್ಕಿದ್ದೇವೆ. ಕಾರ್ಖಾನೆ ಉಪಯೋಗಕ್ಕೆಂದು ಸಿಗುವ ಕೆಲ ವಸ್ತುಗಳನ್ನೇ ಬಳಸಿ ಕೊಂಡು ಬಾಂಬ್ ತಯಾರಿಸಿ ಈ ಕೃತ್ಯ ಎಸಗುತ್ತಿದ್ದಾರೆ. ಇಂತಹ ವಸ್ತುಗಳು ಅವರ ಕೈಗೆ ಸಿಗದಂತೆ ನೋಡಿಕೊಳ್ಳಲಾಗುವುದು ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಅಣಕು ಪ್ರದರ್ಶನ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತುಗಳಲ್ಲಿ ಅರ್ಥವಿರಬೇಕು. ಬಾಂಬ್ ಇಟ್ಟಿರುವವನು ಈ ಹಿಂದೆ ಹುಸಿ ಬಾಂಬ್ ಕರೆ ಮಾಡಿದ್ದ. ಈ ಬಾರಿ ತಾನೇ ಬಾಂಬ್ ಇಟ್ಟಿದ್ದನ್ನು ಒಪ್ಪಿಕೊಂಡಿದ್ದಾನೆ. ಇದರ ತನಿಖೆ ನಡೆಯುತ್ತಿದೆ. ಈ ಎಲ್ಲಾ ಮಾಹಿತಿ ತಿಳಿದು ಕೊಂಡು ಮಾತನಾಡಬೇಕು ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ಸಮಾಜಘಾತಕ ಸಂಘಟನೆಗಳ ನಿಷೇಧ?: ಸಮಾಜಘಾತಕ ಚಟುವಟಿಕೆಗಳಲ್ಲಿ ಭಾಗಿ ಯಾಗುವ ಕೆಲ ಸಂಘಟನೆಗಳ ನಿಷೇಧಕ್ಕೆ ಈಗಾಗಲೇ ನಾವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ. ಇವುಗಳನ್ನು ಬೆಳೆಯಲು ಬಿಟ್ಟರೆ ಮುಂದೆ ತೊಂದರೆಯಾಗುತ್ತದೆ ಎಂದರು.

Translate »