ರೈತರ ಬಗ್ಗೆ ಕಳಕಳಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿಪಡಿಸಿ
ಮೈಸೂರು

ರೈತರ ಬಗ್ಗೆ ಕಳಕಳಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿಪಡಿಸಿ

January 1, 2019

ಮೈಸೂರು, ಡಿ.31(ಪಿಎಂ)- ದೇಶದ ರೈತ ಸಮುದಾಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಜಕ್ಕೂ ಕಾಳಜಿ ಇದ್ದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗೆ ಬೆಲೆ ನಿಗದಿ ಮಾಡಲಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 5 ವರ್ಷಗಳಿಂದ ರೈತಪರ ನೀತಿಗಳನ್ನು ಜಾರಿಗೊಳಿಸಲಾ ಗದ ಮೋದಿಯವರಿಗೆ ಇದೀಗ ತಮ್ಮ ಸರ್ಕಾ ರದ ಕೊನೆ ದಿನಗಳಲ್ಲಿ ರೈತರು ನೆನಪಾಗು ತ್ತಿದ್ದಾರೆ. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಪಾಲಿಸಿ ಹಣವನ್ನು ಕೇಂದ್ರ ಸರ್ಕಾರವೇ ಪಾವತಿಸುವುದು ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ನ ಸಾಲದ ಬಡ್ಡಿ ಮನ್ನಾ ಮಾಡುವ ಸಂಬಂಧ ಪ್ರಧಾನಿಗಳು ಪ್ರಸ್ತಾ ಪಿಸಿದ್ದಾರೆ ಎಂಬುದು ವಾಟ್ಸಪ್‍ಗಳಲ್ಲಿ ಹರಿದಾಡುತ್ತಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುವಂತಹ ನೀತಿ ಜಾರಿ ಗೊಳಿಸಿದರು. ಅಧಿಕಾರ ವಹಿಸಿಕೊಂಡಾಗಿ ನಿಂದ ಇವರಿಗೆ ರೈತರ ನೆನಪಾಗಲೇ ಇಲ್ಲ. ಇದೀಗ ಈ ಎರಡು ಪ್ರಸ್ತಾಪಗಳನ್ನು ಹರಿ ಬಿಟ್ಟು ರೈತರ ಕಿವಿಗಳಿಗೆ ಹೂ ಮುಡಿಸಲು ಹೊರಟಿದ್ದಾರೆ. ಅವರು ರೈತರನ್ನು ದಡ್ಡರು ಎಂದುಕೊಂಡಿದ್ದರೆ ಅದು ಅವರ ಭ್ರಮೆ ಎಂದು ಲೇವಡಿ ಮಾಡಿದರು.
ಒಂದು ವೇಳೆ ಈ ಎರಡು ಕಾರ್ಯ ಕ್ರಮಗಳು ಜಾರಿಗೊಂಡರೆ ವಿಮಾ ಕಂಪನಿ ಗಳು ಹಾಗೂ ಬ್ಯಾಂಕುಗಳಿಗೆ ಲಾಭವಾಗು ವುದನ್ನು ಯಾರು ಬೇಕಾದರೂ ಊಹಿಸ ಬಹುದು. ಇವು ಮೇಲ್ನೊಟಕ್ಕೆ ರೈತಪರ ಎಂದು ಕಾಣಿಸಲಿವೆ ಹೊರತು ರೈತರ ಸ್ಥಿತಿ ಉತ್ತಮಪಡಿಸುವ ಯಾವುದೇ ಉದ್ದೇಶ ವಿಲ್ಲ. ಈಗಾಗಲೇ ಫಸಲ್ ವಿಮಾ ಯೋಜನೆಯಡಿ ರೈತರು ಹಣ ಕಟ್ಟಿದ್ದಾರೆ. ಆದರೆ ಬೆಳೆ ನಷ್ಟಕ್ಕೆ ಇದರಿಂದ ಪರಿಹಾರ ಮಾತ್ರ ದೊರೆತಿಲ್ಲ. ರಾಷ್ಟ್ರೀಕೃತ ಬ್ಯಾಂಕು ಗಳಲ್ಲಿ ರೈತರ ಸಾಲಕ್ಕೆ ಸಂಬಂಧಿಸಿದಂತೆ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಮತ್ತೊಂದು ಪ್ರಸ್ತಾಪದಲ್ಲೂ ದಿವಾಳಿ ಯತ್ತ ಸಾಗಿರುವ ಬ್ಯಾಂಕುಗಳಿಗೆ ಅನು ಕೂಲ ಮಾಡಿಕೊಡುವ ಉದ್ದೇಶವಿದೆ ಎಂದು ಆರೋಪಿಸಿದರು.

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೊಸಕೋಟೆ ಬಸವರಾಜು ಮಾತ ನಾಡಿ, ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾ ನೆಯು ರೈತರಿಂದ ಕಬ್ಬು ತೆಗೆದುಕೊಳ್ಳುವ ಸಂಬಂಧ ಕರಾರಿನಂತೆ ಮೊದಲ ಆದ್ಯತೆ ಯನ್ನು ಮೈಸೂರು ಜಿಲ್ಲೆಯ ರೈತರಿಗೆ ನೀಡಬೇಕು. ಆ ಬಳಿಕ ಇನ್ನಿತರ ಜಿಲ್ಲೆಗಳ ರೈತರಿಗೆ ನೀಡಲು ನಮ್ಮ ತಕರಾರಿಲ್ಲ. ಜೊತೆಗೆ ಟನ್‍ಗೆ 3 ಸಾವಿರ ರೂ. ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಸಂಘದ ಹೊಸೂರು ಕುಮಾರ್ ಮಾತ ನಾಡಿ, ವಿಶ್ವಸಂಸ್ಥೆ ನಿರ್ದೇಶನದಂತೆ ತಂಬಾಕು ಬೆಳೆ ನಿಷೇಧ ಸಂಬಂಧ ಹಂತ ಹಂತ ವಾಗಿ ಕ್ರಮ ಕೈಗೊಳ್ಳಲು ನಮ್ಮ ಯಾವುದೇ ವಿರೋಧವಿಲ್ಲ. ಜೊತೆಗೆ ತಂಬಾಕು ಬೆಳೆಗೆ ಪರ್ಯಾಯ ಬೆಳೆ ಪರಿಚಯಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಯಾಕೇಜ್ ಮಾದರಿಯಲ್ಲಿ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು. ಸಂಘದ ಪಿ.ಮರಂಕಯ್ಯ ಸೇರಿದಂತೆ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »