ನಾಳೆ ಮೈಸೂರಿಗೆ ಪ್ರಧಾನಿ ಮೋದಿ
ಮೈಸೂರು

ನಾಳೆ ಮೈಸೂರಿಗೆ ಪ್ರಧಾನಿ ಮೋದಿ

April 8, 2019

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಮೈಸೂರಿಗೆ ಆಗಮಿಸುವರು. ವಿಶೇಷ ವಿಮಾನದಲ್ಲಿ ಚಿತ್ರ ದುರ್ಗ ಜಿಲ್ಲೆಯಿಂದ ಮಂಗಳವಾರ 4.40 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಮಂತ್ರಿಗಳು ಅಲ್ಲಿಂದ ರಸ್ತೆ ಮೂಲಕ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪಡಿಸಲಿರುವ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರ ಗಳ ಬಿಜೆಪಿ ಅಭ್ಯರ್ಥಿಗಳಾದ ಪ್ರತಾಪ್ ಸಿಂಹ ಹಾಗೂ ವಿ. ಶ್ರೀನಿವಾಸಪ್ರಸಾದ್ ಅವರ ಪರ ಚುನಾವಣಾ ಪ್ರಚಾರದ ಸಭೆಯಲ್ಲಿ ಭಾಗವಹಿಸಿ ಸಂಜೆ 4.50 ಗಂಟೆಗೆ ಭಾಷಣ ಮಾಡುವರು. ಬಳಿಕ ಕಾರಿನಲ್ಲಿ ತೆರಳಿ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 6 ಗಂಟೆಗೆ ವಿಶೇಷ ವಿಮಾನದಲ್ಲಿ ನಿರ್ಗಮಿಸುವರು ಎಂದು ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ, ಮುಂಭಾಗದಲ್ಲಿ ನೆರಳಿಗಾಗಿ ಜರ್ಮನ್ ಟೆಂಟ್ ಮಾದರಿಯ ಮಂಟಪವನ್ನು ನಿರ್ಮಿಸಲಾಗಿದೆ. ಗಣ್ಯರಿಗೆ, ಸಾರ್ವಜನಿ ಕರು, ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕ ಎನ್‍ಕ್ಲೋಷರ್‍ಗಳನ್ನು ಸಿದ್ಧಪಡಿಸಿದ್ದು, ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ.

ಪ್ರತೀ ಪ್ರವೇಶ ದ್ವಾರಗಳಿಗೆ ಮೆಟಲ್ ಡೋರ್ ಡಿಟೆಕ್ಟರ್‍ಗಳನ್ನು ಅಳವಡಿಸಲಿದ್ದು, ಶ್ವಾನ ದಳ, ವಿಧ್ವಂಸಕ ಕೃತ್ಯ ನಿಗ್ರಹ ದಳದ ಸಿಬ್ಬಂದಿ ಬಹಿರಂಗ ಸಭೆ ನಡೆ ಯುವ ಮಹಾರಾಜ ಕಾಲೇಜು ಮೈದಾನ ದಲ್ಲಿ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ.

ಭಾರೀ ಭದ್ರತೆ: ಪ್ರಧಾನಮಂತ್ರಿ ಆಗಮನಕ್ಕೆ ಮೈಸೂರಲ್ಲಿ ಇನ್ನಿಲ್ಲದ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 7 ಎಸ್ಪಿ ರ್ಯಾಂಕ್ ಅಧಿ ಕಾರಿಗಳು, 11 ಎಸಿಪಿ, 50ಕ್ಕೂ ಹೆಚ್ಚು ಇನ್ಸ್‍ಪೆಕ್ಟರ್‍ಗಳು, 12 ಸಿಎಆರ್ ತುಕಡಿ, 12 ಕೆಎಸ್‍ಆರ್‍ಪಿ ತುಕಡಿ, ಡಿಎಆರ್, ಮೌಂಟೆಡ್, ಪಿಸಿಆರ್, ಮೊಬೈಲ್ ಕಂಟ್ರೋಲ್ ರೂಂ ವಾಹನ ಸೇರಿ ಒಟ್ಟು 1500ಕ್ಕೂ ಹೆಚ್ಚು ಪೊಲೀಸ್ ಅಧಿ ಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಹೊರ ಜಿಲ್ಲೆಗಳಿಂದ ಸಿಬ್ಬಂದಿ, ಅಧಿಕಾರಿಗಳನ್ನು ಕರೆಸಿಕೊಳ್ಳ ಲಾಗುತ್ತಿದ್ದು, ನಾಳೆ (ಏ.8) ಮೈಸೂ ರಿನ ಮಹಾರಾಜ ಕಾಲೇಜಿನಲ್ಲಿ ಭದ್ರತಾ ಕರ್ತವ್ಯ, ವಿವಿಐಪಿ ಸೆಕ್ಯೂರಿಟಿ ನಿಯಮಾವಳಿ ಕುರಿತು ಸೂಚನೆಗಳನ್ನು ನೀಡಲಾಗುವುದು. ಮಂಡಕಳ್ಳಿ ವಿಮಾನ ನಿಲ್ದಾಣ, ಪ್ರಧಾನಮಂತ್ರಿಗಳು ಹಾದು ಬರುವ ರಸ್ತೆ ಹಾಗೂ ಬಹಿರಂಗ ಸಭೆ ನಡೆಯುವ ಮಹಾರಾಜ ಕಾಲೇಜು ಮೈದಾನಗಳಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ನಿಯೋಜಿಸುವ ಬಗ್ಗೆ ಇಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ತಮ್ಮ ಕಚೇರಿಯಲಿ ಅಧೀನಾಧಿಕಾರಿಗಳ ಪೂರ್ವ ಸಿದ್ಧತಾ ಸಭೆ ನಡೆಸಿದರು.

ಎಸ್ಪಿಜಿ ಅಧಿಕಾರಿಗಳ ಭೇಟಿ: ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಎಸ್‍ಪಿಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಐಜಿಪಿ, ಎಡಿಜಿಪಿ ನೇತೃತ್ವದ 10 ಮಂದಿ ಅಧಿಕಾರಿಗಳು ಶನಿವಾರ ಮೈಸೂರಿಗೆ ಭೇಟಿ ನೀಡಿ ಮಹಾರಾಜ ಕಾಲೇಜು ಮೈದಾನ, ಪ್ರಧಾನಮಂತ್ರಿಗಳನ್ನು ಕರೆತರುವ ರಸ್ತೆ ಮಾರ್ಗ ಹಾಗೂ ವಿಮಾನದಿಂದ ಇಳಿಯುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ವೀಕ್ಷಿಸಿದರು.

ನಂತರ ಪೊಲೀಸ್ ಆಯುಕ್ತ, ಎಸ್ಪಿ, ಐಜಿಪಿ ಹಾಗೂ ಇತರ ಅಧಿಕಾರಿಗಳೊಂದಿಗೆ ಶನಿವಾರ ಸಂಜೆ ಸಭೆ ನಡೆಸಿದ ಎಸ್‍ಪಿಜಿ ಅಧಿಕಾರಿಗಳು, ವಿವಿಐಪಿ ಭದ್ರತೆ, ಶಿಷ್ಠಾಚಾರ ಪಾಲನೆ ಕುರಿತಂತೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಅದೇ ದಿನ ಬೆಳಿಗ್ಗೆ ಜೆ.ಕೆ. ಮೈದಾನದಲ್ಲಿ ಜೆಡಿಎಸ್-ಕಾಂಗ್ರೆಸ್ ಬಹಿರಂಗ ಚುನಾವಣಾ ಪ್ರಚಾರ ಸಭೆಯೂ ನಿಗದಿಯಾಗಿರುವುದರಿಂದ ಎರಡೂ ಕಾರ್ಯಕ್ರಮಗಳಿಗೂ ತೊಂದರೆ ಯಾಗದಂತೆ ಸಿಬ್ಬಂದಿ, ಅಧಿಕಾರಿಗಳನ್ನು ನಿಯೋಜಿಸಿಕೊಂಡು ಭದ್ರತೆ ಒದಗಿಸಲು ನಗರ ಘಟಕದ ಪೊಲೀಸರು ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.

Translate »