ಕಟ್ಟಡ ಸಾಮಾಗ್ರಿ ಕಳವು ಆರೋಪಿ ಬಂಧನ
ಕೊಡಗು

ಕಟ್ಟಡ ಸಾಮಾಗ್ರಿ ಕಳವು ಆರೋಪಿ ಬಂಧನ

December 12, 2018

ಮಡಿಕೇರಿ:  ನಗರದ ಮುನೀಶ್ವರ ದೇವಾ ಲಯದಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ದೇವಾಲಯ ಸಮಿತಿ ಪದಾಧಿಕಾರಿ ಗಳು ಸಿನಿಮೀಯ ಮಾದರಿಯಲ್ಲಿ ಸೆರೆಹಿಡಿದು ಪೊಲೀ ಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಪುಟಾಣಿನಗರ ನಿವಾಸಿ ಮನೋಜ್(45) ಬಂಧಿತ ಆರೋಪಿಯಾ ಗಿದ್ದು, ನಗರ ಠಾಣಾ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ವಿವರ: ನಗರದ ಸುದರ್ಶನ ಅತಿಥಿ ಗೃಹದ ಬಳಿಯಿ ರುವ ಶ್ರೀ ಮುನೀಶ್ವರ ದೇವಾಲಯ ಆವರಣದಲ್ಲಿ ಸಮು ದಾಯ ಭವನದ ಶೌಚಾಲಯ ಮತ್ತು ಸ್ನಾನಗೃಹದ ಕಟ್ಟಡ ಕಾಮಗಾರಿಗೆಂದು ಕುಶಾಲನಗರದಿಂದ 3 ಬಂಡಲ್ ಕಬ್ಬಿಣದ ಸಲಾಕೆಗಳನ್ನು ತಂದು ದೇವಾಲಯದ ಆವರಣ ದಲ್ಲಿ ಹಾಕಲಾಗಿತ್ತು. ಅಲ್ಲದೆ 12 ಚೀಲ ಸಿಮೆಂಟ್ ಮತ್ತು 5 ಕೆ.ಜಿ. ಬೈಂಡಿಂಗ್ ವೈರ್‍ಗಳನ್ನು ಕೂಡ ಇಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಕಾಮಗಾರಿ ಸ್ಥಳಕ್ಕೆ ಬಂದ ಕಾರ್ಮಿಕರು ಕಬ್ಬಿಣದ ರಾಡ್‍ಗಳು ಮತ್ತು ಸಿಮೆಂಟ್ ಚೀಲಗಳು ನಾಪತ್ತೆಯಾದ ಬಗ್ಗೆ ದೇವಾಲಯ ಸಮಿತಿಯ ಸದಸ್ಯರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯೋನ್ಮುಖರಾದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಮುನೀಶ್ವರ ದೇವಾಲಯ ಸಮಿತಿ ಸದಸ್ಯ ಉಣ್ಣಿ ಕೃಷ್ಣ, ನಿವೃತ್ತ ಪೊಲೀಸ್ ಸಿಬ್ಬಂದಿ ಕಾವೇರಪ್ಪ, ಗುತ್ತಿಗೆದಾರ ರಾದ ಜಯ, ರಾಜೇಂದ್ರ ಮತ್ತು ಚಾಲ್ಸ್ ಎಂಬವರು ಕಳ್ಳತನ ಪ್ರಕರಣ ಪ್ತತೆ ಹಚ್ಚಲು ಮುಂದಾಗಿದ್ದಾರೆ. ದೇವಾಲಯದ ಪಕ್ಕದ ಮನೆಯೊಂದರ ಸಿಸಿ ಕ್ಯಾಮರಾ ಪರಿಶೀಲಿಸಿದ ಸಂದರ್ಭ ಆಟೋ ರಿಕ್ಷಾವೊಂದರಲ್ಲಿ ಕಬ್ಬಿಣದ ರಾಡ್ ಗಳು ಮತ್ತು ಸಿಮೆಂಟ್ ಚೀಲಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ಕುರಿತು ಮಡಿಕೇರಿ ನಗರ ಪೊಲೀಸರಿಗೆ ಮಾಹಿತಿ ನೀಡಿದ ದೇವಾಲಯ ಸಮಿತಿ ಸದಸ್ಯರು ಆಟೋ ರಿಕ್ಷಾದ ಪತ್ತೆಗೂ ಮುಂದಾಗಿದ್ದಾರೆ.
ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಆಟೋ ರಿಕ್ಷಾವನ್ನು ಗುರುತಿಸಿದ ದೇವಾಲಯ ಸಮಿತಿ ಪದಾಧಿಕಾರಿಗಳು ಅದೇ ಆಟೋ ರಿಕ್ಷಾದಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕೂಡ ಸ್ಥಳಕ್ಕೆ ಬರ ಹೇಳಿದ್ದಾರೆ. ಈ ಹಿಂದೆ ಮನೋಜ್ ಎಂಬಾತ ಗುತ್ತಿಗೆದಾರರನ್ನು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಹಲವು ಬಾರಿ ಕರೆ ತಂದು ಬಿಟ್ಟಿದ್ದ. ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಆಟೋ ರಿಕ್ಷಾ ಕೂಡ ಮನೋಜ್ ಎಂಬಾತನಿಗೆ ಸೇರಿದ್ದಾಗಿತ್ತು.

ಸ್ಥಳದಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೆ ಇದೇ ಆಧಾರದಲ್ಲಿ ಆರೋಪಿ ಮನೋಜ್‍ನನ್ನು ಹಿಡಿದು ಕೊಡುವಲ್ಲಿ ದೇವಾಲಯ ಸಮಿತಿ ಪದಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆತನನ್ನು ವಿಚಾರಣೆ ನಡೆಸಿದ ಬಳಿಕ ಮನೆಯಲ್ಲಿಟ್ಟ 12 ಚೀಲ ಸಿಮೆಂಟ್, 5 ಕೆ.ಜಿ. ಬೈಂಡಿಂಗ್ ವೈರ್ ಮತ್ತು ಸುದರ್ಶನ ಅತಿಥಿ ಗೃಹದ ಹಿಂಭಾಗದ ಕಾಡಿನೊಳಗೆ ಅವಿತಿಟ್ಟಿದ್ದ 3 ಬಂಡಲ್ ಕಬ್ಬಿಣದ ರಾಡ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Translate »