ಡಿ.12, 14 ರಂದು ವಿದ್ಯುತ್ ವ್ಯತ್ಯಯ
ಕೊಡಗು

ಡಿ.12, 14 ರಂದು ವಿದ್ಯುತ್ ವ್ಯತ್ಯಯ

December 12, 2018

ಮಡಿಕೇರಿ: ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ-ಕೇಂದ್ರದಿಂದ ಹೊರ ಹೋಗುವ ನಲ್ಲೂರು, ಬಾಳೆಲೆ, ತಿತಿಮತಿ ಮತ್ತು ಪಾಲಿಬೆಟ್ಟ ಫೀಡರ್‍ನಲ್ಲಿ ಡಿ.14 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗು ವುದು. ಆದ್ದರಿಂದ, ಬಾಳೆಲೆ, ನಲ್ಲೂರು, ತಿತಿಮತಿ, ಪಾಲಿಬೆಟ್ಟ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಶ್ರೀಮಂಗಲ, ಕಾನೂರು, ಕುಟ್ಟ, ಟಿ.ಶೆಟ್ಟಿಗೇರಿ, ಬಿರುನಾಣಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

Translate »