ಪ್ರಸ್ತುತ ರಾಜಕಾರಣ ನೆಮ್ಮದಿ ಹಾಳು ಮಾಡುತ್ತಿದೆ
ಮೈಸೂರು

ಪ್ರಸ್ತುತ ರಾಜಕಾರಣ ನೆಮ್ಮದಿ ಹಾಳು ಮಾಡುತ್ತಿದೆ

June 16, 2019

ಮೈಸೂರು: ಸಂಗೀತ, ಸಾಹಿತ್ಯ, ಚಿತ್ರಕಲೆಗಳು ಬಸ ವಳಿದವರ ಮನಸ್ಸು ಹಗುರ ಮಾಡುತ್ತವೆ. ಆದರೆ, ಪ್ರಸ್ತುತ ರಾಜಕಾರಣ ಮನಸ್ಸಿನ ನೆಮ್ಮದಿಯನ್ನೇ ಹಾಳು ಮಾಡುತ್ತಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎ.ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮೈಸೂರು ಕೃಷ್ಣಮೂರ್ತಿಪುರಂ ಶಾರದಾವಿಲಾಸ ಕಾಲೇಜು ಶತಮಾನೋ ತ್ಸವ ಭವನದಲ್ಲಿ ಹಳೇಬೇರು ಹೊಸ ಚಿಗುರು ಕಲ್ಚರಲ್ ಟ್ರಸ್ಟ್, ಜಿ.ಆರ್.ಸ್ನೇಹ ಬಳಗದ ಸಹಯೋಗದೊಂದಿಗೆ ಚಲನ ಚಿತ್ರ ಹಿನ್ನೆಲೆಗಾಯಕ ರಾಜೇಶ್‍ಕೃಷ್ಣ ಸಾರಥ್ಯದಲ್ಲಿ ನಡೆದ `ಸಂಗೀತ ಸಂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಲೆ, ಸಾಹಿತ್ಯ, ಸಂಗೀತ ಕಾರ್ಯಕ್ರಮಗಳು ಕಲಾಪೋಷಕರ ನೆರವಿನೊಂದಿಗೆ ವರ್ಷ ಪೂರ್ತಿ ನಡೆಯುತ್ತವೆ. ಇದರಿಂದ ಮೈಸೂರಿನ ಜನ ಸಾಮಾನ್ಯರ ಮನಸ್ಸಿ ನಲ್ಲಿ ಶಾಂತಮಯ ವಾತಾವರಣವಿದೆ. ಈ ವಾತಾವರಣ ಎಲ್ಲರ ಹೃದಯದಲ್ಲೂ ಪ್ರೀತಿಸುವ ಗುಣ ಬೆಳೆದಿದೆ. ಆದರೆ, ರಾಜ ಕಾರಣದಲ್ಲಿ ದಿನನಿತ್ಯ ಒಂದಿಲ್ಲೊಂದು ರಾಗ, ದ್ವೇಷ, ಅಸೂಯೆ ವಾತಾವರಣ ಹೆಚ್ಚಾಗುತ್ತಿರುವುದರಿಂದ ಸೇವಾ ಕ್ಷೇತ್ರ ಮಹತ್ವ ಕಳೆದುಕೊಳ್ಳುತ್ತಿದೆ ಬೇಸರ ವ್ಯಕ್ತ ಪಡಿಸಿದರಲ್ಲದೆ, ಸಂಗೀತ-ಸಾಹಿತ್ಯ ಆಲಿಸಿ ದರೆ, ಮನಸ್ಸಿಗೆ ಮುದ ನೀಡುತ್ತದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಸರ್ವಮಂಗಳ ಅವರು `ನಾ ನಿನ್ನ ಬಿಡಲಾರೆ’ ಚಿತ್ರದ `ರಾಘವೇಂದ್ರ ನೀ ಮೌನವಾದರೆ’ ಹಾಡನ್ನು ಸೊಗಸಾಗಿ ಹಾಡಿದರು. `ಹುಲಿ ಹಾಲಿನ ಮೇವು’ ಚಿತ್ರದ `ಬೆಳದಿಂಗಳಾಗಿ ಬಾ’ ಗೀತೆಯನ್ನು ಡಾ.ಟಿ.ಶ್ರೀನಿವಾಸಮೂರ್ತಿ ಕೇಳುಗರ ಮನ ತಣಿಸಿದರು. `ಹಾಡು ಕೋಗಿಲೆ’ ಹಾಡಿಗೆ ಗಾಯಕ ಕೋಟೆ ಸಿದ್ದರಾಜು ದನಿಗೂಡಿಸಿದರು. `ಪಲ್ಲವಿ ಅನುಪಲ್ಲವಿ’ ಚಿತ್ರದ `ನಗು ಎಂದಿದೆ’ ಹಾಡನ್ನು ಗಾಯಕಿ ಅಶ್ವಿನಿ ಚಂದ್ರು ಹಾಡಿ, ಸಭಿಕರ ಮನಗೆದ್ದರು.

ರಾಷ್ಟ್ರಕವಿ ಕುವೆಂಪು ರಚಿತ, `ಹೊಸಬೆಳಕು’ ಚಿತ್ರದ `ತೆರೆದಿದೆ ಮನೆ ಓ ಬಾ ಅತಿಥಿ’ ಹಾಡನ್ನು ಗಾಯಕಿಯರಾದ ಅಶ್ವಿನಿ ಮತ್ತು ಸರ್ವಮಂಗಳ, `ಟೋನಿ’ ಚಿತ್ರದ `ಚಲುವಾ ಪ್ರತಿಮ ನೀನು’ ಹಾಡನ್ನು ಗಾಯಕ ರೇವಣ್ಣ, ಚಂದನಗೊಂಬೆ ಚಿತ್ರದ `ಮನೆ ಯನು ಬೆಳಗಿದೆ ಇಂದು’ ಹಾಡಿಗೆ ಗಾಯಕ ರೇವಣ್ಣ ಮತ್ತು ಸರ್ವಮಂಗಳ ಸೊಗ ಸಾಗಿ ಹಾಡಿದರು. ತದನಂತರ ಖ್ಯಾತ ಚಲನಚಿತ್ರ ಹಿನ್ನೆಲೆಗಾಯಕ ರಾಜೇಶ್‍ಕೃಷ್ಣ ಹಾಗೂ ಗಾಯಕಿ ವೇದಶ್ರೀ ಹಲವು ಗೀತೆಗಳನ್ನು ಹಾಡಿ ಮೈಸೂರಿಗರ ಮನಸೂರೆಗೊಂಡರು.

ವೇದಿಕೆ ಕಾರ್ಯಕ್ರಮದ ನಂತರ `ಕಟೀ ಪತಂಗ್’ ಹಿಂದಿ ಚಿತ್ರದ `ಪ್ಯಾರ್ ದಿವಾನ’ ಹಾಡನ್ನು ಶ್ರೀಕಂಠರಾವ್, `ಸೊಸೆ ತಂದ ಸೌಭಾಗ್ಯ’ ಚಿತ್ರದ `ರವಿ ವರ್ಮನ ಕುಂಚದ’ ಹಾಡಿಗೆ ಕೋಟೆ ಸಿದ್ದರಾಜು ದನಿಗೂಡಿ ಸಿದರೆ, ರಾಮಾಚಾರಿ ಚಿತ್ರದ `ನಮ್ಮೂರ ಯುವರಾಣಿ’ ಹಾಡನ್ನು ಗಾಯಕ ಪ್ರಭು, ದೇವರ ಗುಡಿ ಚಿತ್ರದ `ಚೆಲುವೆಯ ಅಂದದ ಮೊಗಕೆ’ ಹಾಡನ್ನು ಗಾಯಕ ರೇವಣ್ಣ, ನ್ಯಾಯವೇ ದೇವರು ಚಿತ್ರದ `ಆಕಾಶವೇ ಬೀಳಲಿ ಮೇಲೆ’ ಹಾಡಿಗೆ ಗಾಯಕ ದಿನೇಶ್ ದನಿ ಗೂಡಿಸಿದರು.

ನಾ ನಿನ್ನ ಮರೆಯಲಾರೆ ಚಿತ್ರ` ಎಲ್ಲೆಲ್ಲಿ ನೋಡಲಿ, ಒಲವು ಗೆಲವು ಚಿತ್ರದ `ನನ್ನೆದೆ ಕೋಗಿಲೆಯೇ’, ಅವಳ ಹೆಜ್ಜೆ ಚಿತ್ರದ `ಬಂದೆಯ ಬಾಳಿನ ಬೆಳಕಾಗಿ’, ಬಂಗಾರ ಮನುಷ್ಯ ಚಿತ್ರದ `ನಗುನಗುತಾ ನಲಿ’, ಪಾವನ ಗಂಗಾ ಚಿತ್ರದ `ಆಕಾಶ ದೀಪವು ನೀನೆ’, ಮೇರಾ ನಾಮ್ ಜೋಕರ್ ಚಿತ್ರದ `ಜಾನೇ ಕಹಾ’, ಸೀತಾರಾಮ ಚಿತ್ರದ `ಒಂದೇ ಒಂದು ಆಸೆಯು’, ಗುಣ ನೋಡಿ ಹೆಣ್ಣು ಕೊಡಿ ಚಿತ್ರದ `ನೀನಿರಲು ಜೊತೆಯಲ್ಲಿ’, ಪ್ರೇಮ ಲೋಕ ಚಿತ್ರದ `ಚೆಲುವೆ ಒಂದು ಕೇಳ್ತಿನಿ’, ಸಿಂಗಪುರದಲ್ಲಿ ರಾಜಾಕುಳ್ಳ ಚಿತ್ರದ `ಚಿನ್ನದ ರಾಣಿ ಬಾರೆ’, ಚಂದನಗೊಂಬೆ ಚಿತ್ರದ `ಆಕಾಶದಿಂದ ಧರೆಗಿಳಿದ ರಂಬೆ’, ಭಾಗ್ಯ ವಂತರು ಚಿತ್ರದ `ನಿನ್ನ ನನ್ನ ಮನವು’, ಕನಸುಗಾರ ಚಿತ್ರದ `ಕನಸುಗಾರನ ಒಂದು ಕನಸು’, ಗೀತಾ ಚಿತ್ರದ ಜೊತೆಯಲಿ ಜೊತೆ ಜೊತೆಯಲಿ ಹಾಡಿನೊಂದಿಗೆ `ಸಂಗೀತ ಸಂಜೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ವೇದಿಕೆಯಲ್ಲಿ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜೆಡಿಎಸ್ ಮುಖಂಡರಾದ ಎನ್.ನರ ಸಿಂಹಸ್ವಾಮಿ, ಡಾ.ಶ್ರೀನಿವಾಸ ಮೂರ್ತಿ, ವಿಪ್ರಮುಖಂಡ ನಟರಾಜ ಜೋಯಿಸ್ ಸೇರಿದಂತೆ ಇತರರರಿದ್ದರು.

Translate »