ಚಾಮುಂಡಿಬೆಟ್ಟದ ನಂದಿ ರಸ್ತೆಯ ವ್ಯೂ ಪಾಯಿಂಟ್‍ನಲ್ಲಿಕೋತಿಗಳದ್ದೇ ಕಾರುಬಾರು
ಮೈಸೂರು

ಚಾಮುಂಡಿಬೆಟ್ಟದ ನಂದಿ ರಸ್ತೆಯ ವ್ಯೂ ಪಾಯಿಂಟ್‍ನಲ್ಲಿಕೋತಿಗಳದ್ದೇ ಕಾರುಬಾರು

June 16, 2019

ಮೈಸೂರು: ಚಾಮುಂಡಿಬೆಟ್ಟದ ನಂದಿ ರಸ್ತೆಯಲ್ಲಿ ರುವ ವ್ಯೂ ಪಾಯಿಂಟ್ ಬಳಿ ಕೋತಿ ಗಳ ಹಿಂಡೊಂದು ಪ್ರವಾಸಿಗರ ಮೇಲೆ ದಾಳಿ ನಡೆಸಿ ಭಯದ ವಾತಾವರಣ ಸೃಷ್ಟಿ ಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ನಂದಿ ರಸ್ತೆಯಲ್ಲಿ ನಿರ್ಮಿಸಿರುವ ವ್ಯೂ ಪಾಯಿಂಟ್ ಬಳಿ ಇಂದು ಬೆಳಿಗ್ಗೆ 8ಗಂಟೆಯಲ್ಲಿ 30ಕ್ಕೂ ಹೆಚ್ಚು ಕೋತಿ ಗಳಿದ್ದ ಹಿಂಡೊಂದು ಪ್ರತ್ಯಕ್ಷವಾಗಿದೆ. ವಾಯುವಿಹಾರ ಹಾಗೂ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗರು ವ್ಯೂ ಪಾಯಿಂಟ್‍ನಲ್ಲಿ ನಿಂತು ಮೈಸೂರಿನ ಸೌಂದರ್ಯವನ್ನು ಸವಿಯಲು ಮುಂದಾಗುತ್ತಿದ್ದಂತೆ, ಅಲ್ಲಿಯೇ ರೇಲಿಂಗ್ಸ್ ಮೇಲೆ ಕುಳಿತಿದ್ದ ಕೋತಿಗಳು ದಾಳಿ ಮಾಡುವುದಕ್ಕೆ ಯತ್ನಿಸಿವೆ. ಇದರಿಂದ ಗಾಬರಿಗೊಂಡ ಪ್ರವಾಸಿಗರು ತಮ್ಮ ವಾಹನದಲ್ಲಿ ಸ್ಥಳ ದಿಂದ ಕಾಲ್ಕಿತ್ತಿದ್ದಾರೆ. ಇದಾದ ಬಳಿಕ ವಾಯುವಿಹಾರಿಗಳು ವ್ಯೂ ಪಾಯಿಂಟ್ ನತ್ತ ಬರುತ್ತಿದ್ದಂತೆ ಕೋತಿಗಳು ದಾಳಿ ನಡೆಸುವಂತೆ ವರ್ತಿಸಿವೆ. ಇದರಿಂದ ಬೆಳಿಗ್ಗೆ 10 ಗಂಟೆವರೆಗೂ ನಂದಿ ರಸ್ತೆ ಯಲ್ಲಿರುವ ವ್ಯೂ ಪಾಯಿಂಟ್‍ನತ್ತ ಯಾರೂ ಸುಳಿಯದೆ ವಾಪಸ್ಸಾಗಿದ್ದಾರೆ. ಆ ನಂತರವಷ್ಟೇ ಕೋತಿಗಳು ಆ ಸ್ಥಳ ದಿಂದ ಬೇರೆಡೆಗೆ ಹೋಗಿವೆ.

ಬೆಟ್ಟಕ್ಕೆ ಬರುವ ಕೆಲವು ಪ್ರವಾಸಿಗರು ಕೋತಿಗಳಿಗೆ ಆಹಾರ ಪದಾರ್ಥ ನೀಡುವ ಪರಿಪಾಠ ಹೊಂದಿದ್ದಾರೆ. ಇದ ರಿಂದ ಕೋತಿಗಳು ಜನರ ಕೈಯಲ್ಲಿರುವ ಬ್ಯಾಗ್, ಕವರ್‍ನಲ್ಲಿರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದಕ್ಕೆ ಪ್ರಯತ್ನಿ ಸುತ್ತವೆ. ಚಾಮುಂಡಿಬೆಟ್ಟ ಅರಣ್ಯವಾಗಿರು ವುದರಿಂದ ಕೋತಿಗಳನ್ನು ಅಲ್ಲಿಂದ ಓಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಪ್ರವಾಸಿಗರು ಕೋತಿಗಳಿಗೆ ಭಯ ಉಂಟಾಗುವಂತೆ ವರ್ತಿಸಬಾರದು. ಯಾರಾದರೂ ಒಬ್ಬರು ಕೋತಿಗಳಿಗೆ ಭಯ ಉಂಟು ಮಾಡಿದರೆ, ಅವುಗಳು ಇತರರನ್ನು ನೋಡಿ ಆತಂಕಕ್ಕೊಳ ಗಾಗುತ್ತವೆ. ಸುಮ್ಮನೆ ಹೋದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಂದು ಬೆಳಿಗ್ಗೆ ಕೋತಿಗಳು ದಾಳಿ ನಡೆಸಿರುವ ಬಗ್ಗೆ ಯಾರಿಂದಲೂ ದೂರು ಬಂದಿಲ್ಲ. ಬೆಳಿಗ್ಗೆ ಹೊತ್ತು ಬಿಸಿಲು ಕಾಯಲು ರೇಲಿಂಗ್ಸ್ ಮೇಲೆ ಕೋತಿಗಳು ಕೂರುವುದನ್ನು ಅಭ್ಯಾಸ ಮಾಡಿಕೊಂಡಿವೆ. ಈ ವೇಳೆ ಕೆಲವರು ಅಲ್ಲಿಗೆ ಹೋದಾಗ ಕೋತಿಗಳು ಹೆದರಿ ಕಿರುಚಾಡಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

Translate »