ಮೈತ್ರಿ ಸರ್ಕಾರದ ನಡೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರ ಸಭೆ: ಶಾಸಕ ತನ್ವೀರ್ ಸೇಠ್
ಮೈಸೂರು

ಮೈತ್ರಿ ಸರ್ಕಾರದ ನಡೆ ಬಗ್ಗೆ ಚರ್ಚಿಸಲು ಸಮಾನ ಮನಸ್ಕರ ಸಭೆ: ಶಾಸಕ ತನ್ವೀರ್ ಸೇಠ್

June 16, 2019

ಮೈಸೂರು: ಸಮ್ಮಿಶ್ರ ಸರ್ಕಾರ ನಡೆ, ಕಾಂಗ್ರೆಸ್ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿ ಸಲು ಶೀಘ್ರದಲ್ಲಿಯೇ ಸಮಾನ ಮನಸ್ಕರೊಂದಿಗೆ ಸಭೆ ನಡೆಸುವುದಾಗಿ ಮಾಜಿ ಸಚಿವರೂ ಆದ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಮೈಸೂರಿನ ರಾಜೇಂದ್ರ ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರು ವುದನ್ನು ಗಮನಿಸಿದರೆ ಸಂಘಟನೆಗೆ ಕ್ರಮ ಕೈಗೊಳ್ಳು ವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯರು, ಶಾಸಕರು ಹಾಗೂ ಸಮನ ಮನಸ್ಕರು ಸೇರಿ ಚರ್ಚಿಸಲು ನಿರ್ದರಿಸಿದ್ದೇವೆ. ಈ ಸಭೆಯಲ್ಲಿ ಸಚಿವರ ಕಾರ್ಯವೈಖರಿ, ಸರ್ಕಾರದ ನಡೆ ಹಾಗೂ ಮೈತ್ರಿ ಸರ್ಕಾರ ಎಡವಿರುವುದರ ಬಗ್ಗೆ ಚರ್ಚಿಸ ಲಾಗುತ್ತದೆ. ಆ ನಂತರ ಪಕ್ಷದ ಹೈಕಮಾಂಡ್‍ಗೆ ವರದಿ ನೀಡುತ್ತೇವೆ. ಈ ಮೂಲಕ ಪಕ್ಷ ಸಂಘಟನೆ ಮಾಡುವುದರೊಂದಿಗೆ ಮೈತ್ರಿ ಸರ್ಕಾರ ಭದ್ರಗೊಳಿಸಲು ಪ್ರಯತ್ನಿಸುತ್ತೇವೆ. ಸಮಾನ ಮನಸ್ಕರು ಸೇರುವುದು ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಕ್ಕಲ್ಲ, ಬದಲಾಗಿ ಪಕ್ಷ ಸಂಘಟನೆ ದೃಷ್ಟಿ ಹೊಂದಿದೆ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರದ ಯೋಜನೆ ಜನರನ್ನು ತಲುಪಿಲ್ಲ: ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭೆ ಚುನಾವಣೆ ಹಾಗೂ ಅಪರೇಷನ್ ಕಮಲದ ಹಿನ್ನೆಲೆಯಿಂದ ಒಂದು ವರ್ಷದ ಅವಧಿಯಲ್ಲಿ ಮೈತ್ರಿ ಸರ್ಕಾರ ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಇದನ್ನು ನಾವು ಒಪ್ಪಿಕೊಳ್ಳಬೇಕು. ಸರ್ಕಾ ರದ ಕಾರ್ಯಕ್ರಮಗಳ ಫÀಲಿತಾಂಶ ಹೊರ ಬರುತ್ತಿಲ್ಲ. ಮೈತ್ರಿ ಸರ್ಕಾ ರದ ಹಲವು ಯೋಜನೆಗಳು ಸಮರ್ಪಕವಾಗಿ ಜಾರಿ ಗೊಂಡಿಲ್ಲ. ಇನ್ನು ಮುಂದೆ ಆದರೂ ಕೆಲಸ ಮಾಡು ವುದಕ್ಕಾಗಿ ಸಚಿವ ಸಂಪುಟವನ್ನು ಪುನರ್ ರಚಿಸಿ, ಸಮರ್ಥರನ್ನು ನಿಯೋಜಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಪುಟ ಪುನರ್ರಚಿಸಬೇಕು: ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕಾರ್ಯನಿರ್ವ ಹಿಸುವ ನಿಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚಿಸುವ ಅಗತ್ಯವಿದ್ದು, ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು. ನಾನು ಪಕ್ಷದ ಹಿರಿಯ ನಾಯಕನಾಗಿದ್ದು, ಸಚಿವ ಸ್ಥಾನ ಪ್ರಬಲ ಆಕಾಂಕ್ಷಿಯಾಗಿದ್ದೆ. ಸಹಜ ವಾಗಿಯೇ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನಿರೀಕ್ಷೆ ಮಾಡಿದ್ದೆ. ನಮ್ಮ ಮುಂದೆ ಹಲವು ಅನಿವಾ ರ್ಯತೆಗಳಿವೆ. ಲೋಕಸಭೆ ಚುನಾ ವಣೆ ಫÀಲಿತಾಂಶ ಗಮನಿಸಿದಾಗ ಪಕ್ಷದ ಉಳಿವಿಗೆ ಹಾಗೂ ಪಕ್ಷಕ್ಕೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಬೇಕು. ಕೆಲಸ ಮಾಡುವವರಿಗೆ ಅವಕಾಶ ನೀಡಬೇಕು. ಈ ಮೂಲಕ ಪಕ್ಷ ಮತ್ತು ಸರ್ಕಾರ ಇವೆರಡನ್ನು ಸಂಘಟಿಸುವ ಹಾಗೂ ಉಳಿಸುವ ಕೆಲಸ ಮಾಡುವ ತುರ್ತು ಎದುರಾಗಿದೆ ಎಂದರು.

ಅಪಮಾನ ಮಾಡಿದ್ದು ಮೂರ್ಖತನದ ಪರಮಾವಧಿ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾಫಿಯಾ ನಡೆಯುತ್ತಿದೆ ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಮೂರ್ಖತನ ಪ್ರದರ್ಶಿಸಿದ್ದಾರೆ. 14ನೇ ಹಣಕಾಸು ಯೋಜನೆಯ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರು ಸೇರಿ ಕ್ರಮ ಕೈಗೊಂಡಿದ್ದಾರೆ. ಪಾಲಿಕೆಯಲ್ಲಿ ಸಂಸದರ ಪಕ್ಷಕ್ಕೆ ಸೇರಿರುವ ಪಾಲಿಕೆ ಸದಸ್ಯರೂ ಇದ್ದಾರೆ.

ಸ್ವತಃ ಸಂಸದರೇ ಪಾಲಿಕೆ ಸದಸ್ಯತ್ವ ಹೊಂದಿದ್ದಾರೆ. ನಿಯಮ ತಿಳಿಯದೇ ಏಕಾಏಕಿ ಮಾಫಿಯಾ ನಡೆ ಯುತ್ತಿದೆ ಎನ್ನುವ ಮೂಲಕ ಸಂಸದ ಪ್ರತಾಪಸಿಂಹ ಮೈಸೂರಿನ ಜನತೆ ಹಾಗೂ ಪಾಲಿಕೆ ವ್ಯವಸ್ಥೆಯನ್ನು ಅಪಮಾನಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ರುವವರು ಇಂತಹ ಮೂರ್ಖತನದ ಹೇಳಿಕೆ ನೀಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Translate »