ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸಕ್ಕೆ ಮೈಸೂರಲ್ಲಿ ಗೌರವ ನಮನ
ಮೈಸೂರು

ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸಕ್ಕೆ ಮೈಸೂರಲ್ಲಿ ಗೌರವ ನಮನ

June 16, 2019

ಮೈಸೂರು: ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ದೇಶದ ವಿವಿಧ ನಗರದಲ್ಲಿ ಸಂಚರಿಸುತ್ತಿರುವ `ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸ’ ಶನಿವಾರ ಮೈಸೂರಿಗೆ ಆಗಮಿಸಿತು.

ಬೆಂಗಳೂರಿನ ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಕಾರ್ಗಿಲ್ ವಿಜಯೋತ್ಸವದ 20ನೇ ವರ್ಷಾಚರಣೆ ಅಂಗವಾಗಿ ಜನರಲ್ಲಿ ದೇಶಾಭಿಮಾನ ಮೂಡಿಸಲು ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, ಶನಿವಾರ ಸಂಜೆ ಮೈಸೂರಿಗೆ ಆಗಮಿಸಿದ ಶ್ರದ್ಧಾ ಕಳಸ ಯಾತ್ರೆಗೆ ಮೈಸೂರು ಮಹಾನಗರ ಪಾಲಿಕೆ ಆವರಣ ಮತ್ತು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.

ಈ ವೇಳೆ ಕ್ಯಾಪ್ಟನ್ ಎಸ್.ಸಿ.ಭಂಡಾರಿ ಮಾತನಾಡಿ, ಕಾರ್ಗಿಲ್ ಯುದ್ದದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸುವುದು ಮತ್ತು ದೇಶ ಯೋಧರ ಜತೆಗಿದೆ ಎಂಬ ಸಂದೇಶ ವನ್ನು ಸಾರುವುದು ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸ ಯಾತ್ರೆಯ ಉದ್ದೇಶ ವಾಗಿದೆ. 2019ರ ಜ.25ರಂದು ಬೆಂಗ ಳೂರಿನಿಂದ ಹೊರಟು ಇದುವರೆಗೆ 168 ನಗರಗಳಲ್ಲಿ ಸಂಚರಿಸಿ ಕಳಸ ಯಾತ್ರೆಯ ಉದ್ದೇಶವನ್ನು ರವಾನಿಸಲಾಗಿದೆ. ಉಳಿದ ನಗರಗಳಲ್ಲಿ ಸಂಚರಿಸಿ ಜು.26ರಂದು ದೆಹಲಿಯ ಇಂಡಿಯಾ ಗೇಟ್ ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ತಲುಪ ಲಿದ್ದು, ಜು.27ರಂದು ದೆಹಲಿಯ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಳಸವನ್ನು ಇರಿಸಲಾಗುವುದು ಎಂದು ಹೇಳಿದರು.

ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ ಮಾತನಾಡಿ, ಜನರಲ್ಲಿ ದೇಶಾಭಿಮಾನದ ಬಗ್ಗೆ ಅರಿವು ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಪ್ರತಿ ವರ್ಷ ಶ್ರದ್ಧಾಂಜಲಿ ಕಳಶ ಯಾತ್ರೆ ನಡೆಸಿ ಕೊಂಡು ಬರುತ್ತಿದ್ದು, ಇಂದು ಶ್ರದ್ಧಾಂಜಲಿ ಕಳಶವನ್ನು ಪಾಲಿಕೆಯ ಆವರಣಕ್ಕೆ ತರುವ ಮೂಲಕ ಎಲ್ಲರೂ ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಸಲು ಸಾಧ್ಯ ವಾಯಿತು ಎಂದರು.

ಇದೇ ಸಂದರ್ಭದಲ್ಲಿ ಯುವರಾಜ ಯದುವೀರ್, ಉಪ ಮೇಯರ್ ಶಫಿ ಅಹಮದ್, ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ ಅವರು `ಶ್ರದ್ಧಾ ಸುಮನ್ ಶ್ರದ್ಧಾಂಜಲಿ ಕಳಸ’ಕ್ಕೆ ಪುಷ್ಪಾ ರ್ಚನೆ ಮಾಡಿ ಗೌರವ ಸಲ್ಲಿಸಿದರು.ಸಿಟಿಜನ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯ ಬಿ.ಪಿ.ಶಿವಕುಮಾರ್, ದಿನೇಶ್, ಶೇಷಾದ್ರಿ, ನಾರಾಯಣ, ಬಾಬು, ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

Translate »