ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮ ಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡರಿಂದ ಗುದ್ದಲಿ ಪೂಜೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮ ಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡರಿಂದ ಗುದ್ದಲಿ ಪೂಜೆ

December 28, 2019

ಮೈಸೂರು, ಡಿ.27(ಆರ್‍ಕೆ)- ಚಾಮುಂ ಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿಜಯನಗರ 3, 4ನೇ ಹಂತ ಹಾಗೂ ಹಿನಕಲ್ ಗ್ರಾಮದ ಸುತ್ತಮುತ್ತ ಕೈಗೊಂಡಿರುವ ವಿವಿಧ ಕಾಮ ಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.

ಮುಡಾ ಹಾಗೂ ನಗರಪಾಲಿಕೆ, ವಾಣಿ ವಿಲಾಸ ವಾಟರ್ ವಕ್ರ್ಸ್, ಒಳಚರಂಡಿ ಮಂಡಳಿ, ಚೆಸ್ಕಾಂ ಅಧಿಕಾರಿಗಳೊಂದಿಗೆ ವಿಜಯನಗರ 3ನೇ ಹಂತದ ಐಶ್ವರ್ಯ ಆಸ್ಪತ್ರೆ ಎದುರಿನ ಬಂಟರ ಸಂಘದ ಸಮು ದಾಯ ಭವನದ ಆಸುಪಾಸಿನ ಒಳ ಚರಂಡಿ ಸಮಸ್ಯೆ ವೀಕ್ಷಿಸಿದ ಶಾಸಕರು, ಅಲ್ಲಿ ಶೇಖರಣೆಯಾಗಿರುವ ಕಸ ತೆಗೆಸಿ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಸಂಪರ್ಕ ಕಲ್ಪಿಸುವಂತೆ ಅಧಿ ಕಾರಿಗಳಿಗೆ ಸೂಚಿಸಿದರು.

3ನೇ ಹಂತದಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಸೂಚಿಸಿದ ಅವರು ‘ಎ’ ಬ್ಲಾಕಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಬಳಿಯ ಮಳೆ ನೀರು ಚರಂಡಿಗೆ ಆರ್‍ಸಿಸಿ ಡ್ರೈನ್ ಮತ್ತು ಡೆಕ್‍ಸ್ಲ್ಯಾಬ್ ಅಳವಡಿಸುವ 25 ಲಕ್ಷ ರೂ. ಕಾಮಗಾರಿಗೂ ಚಾಲನೆ ನೀಡಿದರು.

‘ಬಿ’ ಬ್ಲಾಕ್‍ನಲ್ಲಿ ಮೋರಿ ನಿರ್ಮಾಣ, ನಿರ್ಮಿತಿ ಕೇಂದ್ರದ ಸಮೀಪ ಜಂಕ್ಷನ್ ಅಭಿ ವೃದ್ಧಿಪಡಿಸುವ ಮುಡಾ ಕಾಮಗಾರಿ ಹಾಗೂ ಪಾರ್ಕ್ ಅಭಿವೃದ್ಧಿ ಕಾಮಗಾರಿಗೂ ಶಾಸಕ ಜಿ.ಟಿ.ದೇವೇಗೌಡರು ಗುದ್ದಲಿಪೂಜೆ ನೆರ ವೇರಿಸಿದರು. ಹಿನಕಲ್ ಸರ್ವೇ ನಂಬರ್ 305ರಲ್ಲಿ ಬೆಳೆದು ನಿಂತಿರುವ ಗಿಡಗಂಟಿ ಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವುದು, ವಿಜಯನಗರ 3ನೇ ಹಂತದ ‘ಜಿ’ ಬ್ಲಾಕ್ ನಲ್ಲಿ ಮಳೆ ನೀರು ಚರಂಡಿ ನಿರ್ಮಾಣ, ವಿಜಯನಗರ 4ನೇ ಹಂತದ 2ನೇ ಫೇಸ್‍ನಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಮುಡಾ ಆಯುಕ್ತ ಪಿ.ಎಸ್.ಕಾಂತರಾಜುಗೆ ಶಾಸಕರು ಸೂಚಿಸಿದರು.

ವಿಜಯನಗರ 4ನೇ ಹಂತದ ವಿವಿಧ ಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಮಾಡು ವಂತೆ ಸೂಚಿಸಿದ ಜಿಟಿಡಿ, 50 ಲಕ್ಷ ರೂ. ಗಳ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೂ ಚಾಲನೆ ನೀಡಿದರು. ಹಿನಕಲ್ ಗ್ರಾಮದ ಪರಿಶಿಷ್ಟ ಜಾತಿಯವರ ಕಾಲೋನಿಯಲ್ಲಿ ಬಾಕ್ಸ್ ಡ್ರೈನ್ ಸಮೇತ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ, ಆಶ್ರಮದ ಎದುರಿನ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ರೆವಿನ್ಯೂ ನಿವೇಶನಗಳು, ಮನೆಗಳ ಖಾತೆ-ಕಂದಾಯ ಸಮಸ್ಯೆಗಳ ಬಗ್ಗೆ ನಿವಾಸಿಗಳು ಜಿ.ಟಿ.ದೇವೇಗೌಡರ ಮುಂದೆ ಅಳಲು ತೋಡಿಕೊಂಡು, ತಾವು ಆಗಿಂದಾಗ್ಗೆ ಅಧಿಕಾರಿಗಳೊಂದಿಗೆ ಬಂದು ನಮ್ಮ ಊರಲ್ಲೇ ಸಭೆ ನಡೆಸಿ ಇತ್ಯರ್ಥ ಗೊಳಿಸಿ ಎಂದು ಮನವಿ ಮಾಡಿದರು.

ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ, ಮುಡಾ ಆಯುಕ್ತ ಪಿ.ಎಸ್. ಕಾಂತರಾಜು, ಸೂಪರಿಂಟೆಂಡಿಂಗ್ ಇಂಜಿನಿ ಯರ್ ಪ್ರಭಾಕರ್, ಪಾಲಿಕೆ ಕಮೀಷನರ್ ಗುರುದತ್ ಹೆಗ್ಡೆ, ಸೂಪರಿಂಟೆಂಡಿಂಗ್ ಇಂಜಿನಿಯರ್ ನಾಗರಾಜು ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಸಂದರ್ಭ ಉಪಸ್ಥಿತರಿದ್ದರು.

Translate »