ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ
ಮೈಸೂರು

ಅಶ್ವದಳ ಅಧಿಕಾರಿ ಭುಜಂಗರಾವ್ ಪ್ರತಿಮೆ ಸುರಕ್ಷಿತ ಸ್ಥಳಾಂತರ

May 9, 2019

ಮೈಸೂರು: ಶತ ಮಾನದಷ್ಟು ಹಳೆಯ ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಂದಿನ ಮೈಸೂರು ಸಂಸ್ಥಾನದ ಅಶ್ವದಳದ ಅಧಿಕಾರಿ ಭುಜಂಗರಾವ್ ಅವರ ಪ್ರತಿಮೆ ಬುಧವಾರ ಸುರಕ್ಷಿತವಾಗಿ ಸ್ಥಳಾಂತರಗೊಂಡಿತು.

ಸುರಕ್ಷಿತ-ಸಂಪ್ರದಾಯಿಕ ವಿಧಾನದ ಮೂಲಕ ಮಂಗಳವಾರ ಅಂಚೆ ವಿತರಕ ಬಸಪ್ಪ ಪ್ರತಿಮೆ ಸ್ಥಳಾಂತರ ಯಶಸ್ವಿಗೊಂಡಿತ್ತು. ಇಂದು ಅದೇ ವಿಧಾನದಲ್ಲಿ ಭುಜಂಗರಾವ್ ಪ್ರತಿಮೆ ಸ್ಥಳಾಂತರಗೊಳಿ ಸಲಾಯಿತು. ಇದೀಗ ಎರಡೂ ಪ್ರತಿಮೆ ಗಳು ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್‍ನ (ಕೆಎಆರ್‍ಪಿ) ಅಶ್ವಾರೋಹಿ ದಳದ ಆವರಣದಲ್ಲಿ ಸುರಕ್ಷಿತಗೊಂಡಂತಾಗಿದೆ.

ಈ ಮೊದಲೇ ಭುಜಂಗರಾವ್ ಪ್ರತಿಮೆಗೆ ಪೇಪರ್ ಹುಲ್ಲು, ಒಣಹುಲ್ಲು, ಥರ್ಮಾ ಕೋಲ್ ಹಾಗೂ ಗೋಣಿ ಚೀಲವನ್ನು ಕ್ರಮವಾಗಿ ಒಂದಾದ ಮೇಲೆ ಒಂದರಂತೆ ಸುತ್ತಿ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಲಾಗಿತ್ತು. ಜೊತೆಗೆ ಮಾನವ ಸಂಪನ್ಮೂಲ ಬಳಸಿ ಕೊಂಡು ಸ್ಥಳಾಂತರ ಮಾಡಲು ಪ್ರತಿಮೆಗೆ ಮರದ ಪಟ್ಟಿಗಳನ್ನು ಅಳವಡಿಸಿಕೊಂಡು ಅದಕ್ಕೆ ಮರದ ಕಂಬಗಳನ್ನು ಕಟ್ಟಲಾಗಿತ್ತು.

ಇಂದು ಮೈಸೂರು ಜಿಲ್ಲಾ ಪರಂಪರೆ ತಜ್ಞರ ಸಮಿತಿ ಸದಸ್ಯ ಡಾ.ಎನ್.ಎಸ್. ರಂಗರಾಜು ಮಾರ್ಗದರ್ಶದಲ್ಲಿ ಸ್ಥಳಾಂ ತರ ಕಾರ್ಯ ಆರಂಭಗೊಂಡು ಸುಮಾರು 6 ಗಂಟೆ ಅವಧಿಯಲ್ಲಿ ಪೂರ್ಣಗೊಂಡಿತು. ಮೊದಲಿಗೆ ಹಳೆ ಮಂಟಪವನ್ನು ಎಚ್ಚರಿಕೆ ಯಿಂದ ಒಡೆದು ಪ್ರತಿಮೆಯನ್ನು ಬೇರ್ಪ ಡಿಸಿಕೊಳ್ಳಲಾಯಿತು. ಬಸಪ್ಪರ ಪ್ರತಿಮೆ ಯಲ್ಲಿ ಇದ್ದಂತೆ ಈ ಪ್ರತಿಮೆ ತಳಭಾಗ ದಲ್ಲಿ `ಎಲ್’ ಆಕಾರದ ಸಲಾಕೆ ಇರಲಿಲ್ಲ. ಬಳಿಕ 20ಕ್ಕೂ ಹೆಚ್ಚು ಮಂದಿ ಪ್ರತಿಮೆಗೆ ಅಳವಡಿಸಿದ್ದ ಮರದ ಕಂಬಗಳನ್ನು ಹಿಡಿದು ಎತ್ತುವ ಮೂಲಕ ಹಳೆ ಮಂಟಪ ದಿಂದ ಸುಮಾರು ಐದು ಅಡಿ ಹಿಂದಕ್ಕೆ ನಿರ್ಮಿಸಿ ರುವ ಹೊಸ ಮಂಟಪಕ್ಕೆ ಸ್ಥಳಾಂತರಿಸಿದರು.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಾ.ಎನ್.ಎಸ್.ರಂಗ ರಾಜು, ಯಾವುದೇ ಅಡೆತಡೆ ಇಲ್ಲದೇ ಸುರಕ್ಷಿತವಾಗಿ ಪ್ರತಿಮೆ ಸ್ಥಳಾಂತರ ಮಾಡ ಲಾಗಿದೆ. ನಿನ್ನೆಯಷ್ಟೇ ಸ್ಥಳಾಂತರ ಮಾಡಿದ ಬಸಪ್ಪರ ಪ್ರತಿಮೆ ಸುಮಾರು ಒಂದೂವರೆ ಟನ್ ತೂಕ ಇದ್ದಿತು. ಹೀಗಾಗಿ ಅದನ್ನು ಮೇಲೆತ್ತಿಕೊಂಡು ಮುಂದೆ ಸಾಗುವುದು ತ್ರಾಸದಾಯಕ ಎನ್ನಿಸಲಿಲ್ಲ. ಆದರೆ ಭುಜಂಗ ರಾವ್ ಪ್ರತಿಮೆ ಸುಮಾರು ಎರಡೂವರೆ ಟನ್ ತೂಕವಿದ್ದು, ಸ್ಥಳಾಂತರಕ್ಕಾಗಿ ಎತ್ತಿ ಸಾಗುವುದು ಕ್ಲಿಷ್ಟಕರ. ಇದೀಗ ಪ್ರತಿಮೆ ಸುರಕ್ಷಿತವಾಗಿ ಹೊಸ ಮಂಟಪದಲ್ಲಿ ಕೂರಿಸಿ ಕಾಂಕ್ರಿಟ್ ಹಾಗೂ ಗಾರೆ ಹಾಕಿ ಪ್ರತಿಷ್ಠಾಪಿಸಲಾಗಿದೆ ಎಂದು ವಿವರಿಸಿದರು.

ಪ್ರತಿಮೆಗಳಲ್ಲಿ ಬಣ್ಣ ಮಾಸಿ ಹೋಗಿ ರುವುದು ಸೇರಿದಂತೆ ಸುಣ್ಣಪುಟ್ಟ ಹಾನಿ ಗಳು ಉಂಟಾಗಿವೆ. ಹೀಗಾಗಿ ಮೈಸೂರಿ ನಲ್ಲೇ ಇರುವ ಪ್ರಾದೇಶಿಕ ಸಂರಕ್ಷಣಾ ಪ್ರಯೋಗಾಲಯ (ಆರ್‍ಸಿಎಲ್) ಸಂಪರ್ಕಿಸಿ ಪ್ರತಿಮೆಗಳಿಗೆ ಮರುರೂಪ ಕೊಡುವ ಸಂಬಂಧ ಮಾರ್ಗದರ್ಶನ ಪಡೆಯಲು ಉದ್ದೇಶಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳ ಬಳಿಕ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಪರಂಪರೆ ಇಲಾಖೆಯ ಎಸಿಎ ಕೆ.ಎಂ.ಕುಬೇರಪ್ಪ ಸೇರಿದಂತೆ `ನಮ್ಮ ಮೈಸೂರು ಫೌಂಡೇ ಶನ್’ ಕಾರ್ಯಕರ್ತರು ಹಾಗೂ ಕಾರ್ಮಿಕರು ಸ್ಥಳಾಂತರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಈ ಮೊದಲೇ ಪ್ರತಿಮೆ ಸಂರಕ್ಷಣೆ ಪ್ರಯತ್ನ ನಡೆದಿತ್ತು…!

ಮೈಸೂರು: ಅಂದಿನ ಮೈಸೂರು ಸಂಸ್ಥಾನದ ಅಂಚೆ ವಿತರಕ ಬಸಪ್ಪ ಹಾಗೂ ಅಶ್ವದಳದ ಅಧಿಕಾರಿ ಭುಜಂಗರಾವ್ ಅವರ ಪ್ರತಿಮೆಗಳ ಸ್ಥಳಾಂತರ ಪ್ರಕ್ರಿಯೆ ಪರಂಪರೆ ತಜ್ಞರ ಸಮಿತಿ ಶಿಫಾರಸ್ಸಿನಂತೆ ಪೂರ್ಣಗೊಂಡಿದೆ. ಇದಕ್ಕೂ ಮುನ್ನವೇ ಮೈಸೂರಿನ ನಾಗರಿಕ ರೊಬ್ಬರು ತಮ್ಮ ಸ್ವಂತ ಹಣ 26 ಸಾವಿರ ರೂ. ವೆಚ್ಚದಲ್ಲಿ ಅವುಗಳ ಸಂರ ಕ್ಷಿಸಲು ನೆರವಾಗಿದ್ದರು.

2006ರಲ್ಲಿ ಈ ಎರಡೂ ಪ್ರತಿಮೆಗಳು ಶಿಥಿಲವಾಗುತ್ತಿರುವುದನ್ನು ಕಂಡ ಎಸಿಐಸಿಎಂ ಸಂಚಾಲಕ ಎಂ.ಲಕ್ಷ್ಮಣ್ ತಮ್ಮ ಸ್ವಂತ ಹಣದಲ್ಲಿ ಸಂರಕ್ಷಣೆಗೆ ಅಂದು ನೆರವಾಗಿದ್ದರು. ಅವುಗಳ ಸುರ ಕ್ಷತೆಗಾಗಿ ಸುತ್ತಲು ಕಬ್ಬಿಣದ ಗ್ರಿಲ್ ಸಹ ಅಳವಡಿಸಿ ಅವು ಹಾನಿ ಆಗದಂತೆ ಕ್ರಮ ವಹಿಸಲಾಗಿತ್ತು. ಪರಂಪರೆ ಹಾಗೂ ತಾಂತ್ರಿಕ ತಜ್ಞರ ಮಾರ್ಗದರ್ಶ ನದಲ್ಲಿ ಅಂದು ಈ ಪ್ರತಿಮೆ ಗಳನ್ನು ಪುನರ್ ಸ್ಥಾಪಿಸುವ ಮೂಲಕ ತಮ್ಮ ಕಳಕಳಿ ತೋರಿಸಿದ್ದರು ಎಂ.ಲಕ್ಷ್ಮಣ್.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, 2006ರಲ್ಲಿ ಒಂದು ಪ್ರತಿಮೆ ಕೆಳಗೆ ಬಿದ್ದೇ ಹೋಗಿತ್ತು. ಹೀಗಾಗಿ ಅದನ್ನು ಎಲ್ಲೋ ಮೂಲೆಯಲ್ಲಿ ಇಟ್ಟಿದ್ದರು. ಅದನ್ನು ತಂದು ಮತ್ತೆ ಪ್ರತಿಷ್ಠಾಪಿಸುವ ಜೊತೆಗೆ ಎರಡೂ ಪ್ರತಿಮೆಗಳ ಸುತ್ತಲು ಕಬ್ಬಿಣದ ಗ್ರಿಲ್ ಗಳನ್ನು ಅಳವಡಿಸಲಾಯಿತು. ಇದರ ಮರು ಸ್ಥಾಪನೆಯ ಉದ್ಘಾಟನಾ ಸಮಾ ರಂಭದಲ್ಲಿ ಅಂದಿನ ಮೌಂಟೆಡ್ ಪೊಲೀಸ್ ಕಮಾಂಡೆಂಟ್ ಮರಿಬಾ ಶೆಟ್ಟಿ, ಮೈಸೂರು ನಗರ ಪೊಲೀಸ್ ಆಯುಕ್ತ ಬಿಪಿನ್ ಗೋಪಾಲಕೃಷ್ಣ (ದಿವಂಗತ) ಹಾಗೂ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಪಾಲ್ಗೊಂಡಿದ್ದನ್ನು ನೆನಪಿಸಿಕೊಂಡರು.

2006ರಲ್ಲೇ ಆ ಸ್ಥಳವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದ್ದೆ. ಆದರೆ ಪ್ರಯೋಜನವಾಗ ಲಿಲ್ಲ. ಈಗಲಾದರೂ ಆ ಜಾಗವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿ¸ Àಬೇಕು ಎಂದು ಲಕ್ಷ್ಮಣ್ ಒತ್ತಾಯಿಸಿದರು.

Translate »