ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನವಿರೋಧಿ ನೀತಿ ಗಳನ್ನು ಟೀಕಿಸುತ್ತಿದ್ದ ಬಹುಭಾಷಾ ನಟ ಪ್ರಕಾಶ್ ರೈ ಬೆಂಗಳೂರಿನ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸಂಸತ್‍ಗೆ ಆಯ್ಕೆ ಬಯಸಿ ರೈ ಅವರು ಇಂದು ತಮ್ಮ ನಾಮಪತ್ರವನ್ನು ಸಲ್ಲಿಸಿ ದರು. ಆಸ್ಟಿನ್ ಟೌನ್‍ನಲ್ಲಿರುವ ನಂದ ಕ್ರಿಡಾಂಗಣದಿಂದ ತಮ್ಮ ಬೆಂಬಲಿಗರು ಮತ್ತು ಹಿತೈಷಿಗಳೊಂದಿಗೆ ಮೆರವಣಿಗೆ ಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ನನಗೆ ಸಿನಿಮಾ ಚಿತ್ರರಂಗ ದವರು ಪ್ರಚಾರಕ್ಕೆ ಬರುವ ಅಗತ್ಯವಿಲ್ಲ. ಇದು ನನ್ನ ಮತ್ತು ಮತದಾರನ ನಡುವೆ ನಡೆಯುವ ಸಂವಾದವಾಗಿದೆ.
ನಾನು ಯಾರ ಪ್ರತಿಸ್ಪರ್ಧಿಯೂ ಅಲ್ಲ. ಕಾಂಗ್ರೆಸ್ ಕೂಡ ಜಾತಿವಾದಿ ಪಕ್ಷವಾಗಿ ಕೇವಲ ಮುಸ್ಲಿಂ, ದಲಿತರ ಪರ ಎಂದು ಹೇಳುತ್ತಾರೆ. ಬಿಜೆಪಿಯವರು ಸಾವಿನ ಮನೆಯಲ್ಲೂ ಮೋದಿ ಮೋದಿ ಎಂದು ಕೂಗುತ್ತಾರೆ. ಅದಕ್ಕೆ ಅರ್ಥವಿಲ್ಲ. ಒಂದು ವೇಳೆ ನಾನು ಗೆದ್ದುಬಂದರೆ ಬಿಜೆಪಿಗೆ ಬೆಂಬಲ ನೀಡಲ್ಲ ಎಂದು ಹೇಳಿದರು.
ಬೆಂಗಳೂರು ಸೆಂಟ್ರಲ್ ಕ್ಷೇತ್ರ ರಾಷ್ಟ್ರದ ಎಲ್ಲಾ ಜನಾಂಗಗಳನ್ನು ಒಳಗೊಂಡಿರುವ ಕ್ಷೇತ್ರವಾಗಿದೆ. ಜೊತೆಗೆ ಅತೀ ಹೆಚ್ಚು ಅಲ್ಪ ಸಂಖ್ಯಾತ ಮತದಾರರನ್ನು ಹೊಂದಿರುವ ಕ್ಷೇತ್ರ. ಆಂಧ್ರ ಮತ್ತು ತಮಿಳುನಾಡಿಗೆ ತುಂಬಾ ನಂಟಿರುವಂತೆ ಕಂಡುಬಂದರೂ ಕ್ಷೇತ್ರದಲ್ಲಿ ತಮಿಳು ಮತ್ತು ತೆಲುಗು ಭಾಷೆ ಜನರು ಹೆಚ್ಚು. ಈ ಭಾಷೆಗಳ ಚಿತ್ರ ರಂಗದಲ್ಲಿ ರೈ ಉನ್ನತ ಸ್ಥಾನದಲ್ಲಿದ್ದಾರೆ. ಅದನ್ನು ಗಮನ ದಲ್ಲಿಟ್ಟುಕೊಂಡೇ ಅವರು ಚುನಾವಣಾ ಕಣಕ್ಕಿಳಿದಿರಬಹುದು.
ಕಳೆದ 3 ತಿಂಗಳಿನಿಂದಲೇ ಸಕ್ರಿಯವಾಗಿ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿನಿತ್ಯ ಸಭೆ ಮತ್ತು ಪ್ರಚಾರಗಳನ್ನು ಮಾಡಿ, ಜನರ ಸಮೀಪಕ್ಕೆ ಹೋಗುವ ಪ್ರಯತ್ನ ಮಾಡಿದ್ದರು.