ಆಗಸ್ಟ್ 6ರಂದು `ಮತ್ತೆ ಕಲ್ಯಾಣ’
ಮೈಸೂರು

ಆಗಸ್ಟ್ 6ರಂದು `ಮತ್ತೆ ಕಲ್ಯಾಣ’

June 30, 2019

ಮೈಸೂರು, ಜೂ. 29(ಎಸ್‍ಪಿಎನ್)-ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ್ದ ಕಲ್ಯಾಣ ಕ್ರಾಂತಿಯನ್ನು 21ನೇ ಶತಮಾನದಲ್ಲೂ `ಮತ್ತೆ ಕಲ್ಯಾಣ’ ಶೀರ್ಷಿಕೆಯಡಿ ಮೈಸೂರಿನಲ್ಲಿ ಆ.6ರಂದು ನಡೆಸುವ ಬಗ್ಗೆ ಶನಿವಾರ ಬಸವಾದಿ ಚಿಂತಕರು ಪೂರ್ವಭಾವಿ ಸಭೆ ನಡೆಸಿದರು. ಮೈಸೂರು ರಂಗಾಯಣ ಆವ ರಣದ ಶ್ರೀರಂಗ ವೇದಿಕೆಯಲ್ಲಿ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಮಠದ ವತಿ ಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಿರುವ `ಮತ್ತೆ ಕಲ್ಯಾಣ’ ಕಾರ್ಯಾಗಾರವನ್ನು ಮೈಸೂರಿನಲ್ಲಿ ಆಯೋಜಿಸುವ ಕುರಿತು ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ವಿವರಗಳನ್ನು ತಿಳಿಸಿದ ಸಾಣೇಹಳ್ಳಿ ಮಠದ ಧ್ಯಾನೇಶ್, ಆ.1ರಿಂದ 30ರವರೆಗೆ ರಾಜ್ಯದ ಪ್ರತಿಯೊಂದು ಜಿ¯್ಲÉಯಲ್ಲಿ `ಮತ್ತೆ ಕಲ್ಯಾಣ’ ಶೀರ್ಷಿಕೆ ಯಡಿ ಕಾರ್ಯಕ್ರಮ ನಡೆಯಲಿದ್ದು, ಮೈಸೂರಿನಲ್ಲಿ ಆ.6ರಂದು ನಡೆಯಲಿದೆ. ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ತಂಡ ಬಸವಾದಿ ಶರಣರ ಜೊತೆ ಸಂವಾದದಲ್ಲಿ ಭಾಗ ವಹಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಮುಕ್ತ ಸಂವಾದವನ್ನು ಇಬ್ಬರು ಚಿಂತಕರು ಮತ್ತು ಪಂಡಿತಾರಾಧ್ಯಶ್ರೀಗಳು ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿಕೊಡಲಿz್ದÁರೆ. ಸಂಜೆಗೆ ಸಕಲ ಜಾತಿ, ಧರ್ಮ ಜನರೊಂದಿಗೆ ಸಾಮರಸ್ಯ ನಡಿಗೆ ಇರುತ್ತದೆ ಮತ್ತು ಸಾರ್ವಜನಿಕ ಸಮಾವೇಶ ಒಳ ಗೊಂಡಿರುತ್ತದೆ. ರಾತ್ರಿ 8.30ಕ್ಕೆ ಸಾಣೇಹಳ್ಳಿ ಶಿವ ಸಂಚಾರ ನಾಟಕ ಆಯೋಜಿಸಲಾಗಿದೆ. 10ಕ್ಕೆ ಸಹಮತ ಭೋಜನ ಏರ್ಪಡಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು. ಸಭೆಯನ್ನುz್ದÉೀಶಿಸಿ ಮಾತನಾಡಿದ ರಂಗ ಕರ್ಮಿ ಜನಾರ್ಧನ್, ಸಹಮತ ವೇದಿಕೆ ಸಮಾನ ಮನಸ್ಕರ ವೇದಿಕೆಯಾಗಿದ್ದು, ಕಲ್ಯಾಣ ಕನಸು ಕಾಣುತ್ತಿರುವ ಸಹೃದಯ ರನ್ನು ಒಳಗೊಂಡಿದೆ. ಕೆಟ್ಟ ವಿಚಾರಗಳನ್ನು ಕೆಡವಿ, ಒಳ್ಳೆಯ ವಿಚಾರಗಳನ್ನೊಳಗೊಂಡ ಕಲ್ಯಾಣದ ಕನಸು ಕಾಣುವ ಚಳುವಳಿಯನ್ನು ಪ್ರಸ್ತುತ ಆರಂಭಿಸುವ ಧ್ಯೇಯವಾಗಬೇಕು. ಇಂದು ಜಾತಿಭೇದ, ಲಿಂಗಭೇದ, ವರ್ಣಭೇದಗಳೆಂಬ ಸಾಮಾಜಿಕ ಪಿಡುಗಿನಿಂದ ಕಲ್ಯಾಣ ಚೂರಾಗಿದ್ದು, ಮತ್ತೆ ಕಲ್ಯಾಣದ ಮೂಲಕ ವಚನ ಚಳವಳಿ ನಿರ್ಮಾಣ ಮಾಡಬೇಕು ಎಂದರು. ಚಿಂತಕ ರಾದ ಓ.ಎಲ್.ನಾಗಭೂಷಣ್, ಎಲ್.ಶಿವ ಲಿಂಗಪ್ಪ, ಉಡಿಗಾಲ ಮಹದೇವಪ್ಪ, ಸದಸ್ಯರಾದ ಗೋಪಾಲ ಕೃಷ್ಣ, ಬಾರಕೋಲು ರಂಗಸ್ವಾಮಿ, ಪ್ರಸನ್ನ ಕುಮಾರ್ ಕೆರಗೂಡು, ಲತಾ ಮೈಸೂರು, ಲಕ್ಷ್ಮೀರಾಮ್, ಡಾ. ಕೃಷ್ಣ ಮೂರ್ತಿ ಚಮರಂ, ಶರಣ ಮಹಾದೇವಪ್ಪ, ಬನ್ನೂರು ಕೆ.ರಾಜು, ಎಸ್.ಬಾಲಕೃಷ್ಣ ಮತ್ತಿತರರು ಹಾಜರಿದ್ದರು.

Translate »