ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್‍ಎಸ್‍ಎಲ್‍ಸಿ,ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಎಸ್‍ಎಸ್‍ಎಲ್‍ಸಿ,ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

June 30, 2019

ಮೈಸೂರು,ಜೂ.29(ಎಸ್‍ಪಿಎನ್)- ಭಗವಂತ ಕರುಣಿಸಿರುವ ಜ್ಞಾಪಕ ಶಕ್ತಿ ಯನ್ನು ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು. ಈ ಅಂಶವನ್ನು ಯುವಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಹಿರಿಯರದ್ದು ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಕುವೆಂಪುನಗರದ ಗಾನಭಾರತೀ ಸಭಾಂ ಗಣದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಮಾತನಾಡಿದರು. ವಿಶ್ವಸಂಸ್ಥೆ ಅಂಕಿ-ಅಂಶಗಳ ಪ್ರಕಾರ ಪ್ರಪಂಚದ ಬುದ್ಧಿ ವಂತ ಮಕ್ಕಳಿಗೆ ಅತೀ ಹೆಚ್ಚು ಜ್ಞಾಪಕಶಕ್ತಿ ಇರುವುದು ವಿಪ್ರರ ಮಕ್ಕಳಲ್ಲಿ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಸಮಾಜ ದಿಂದ ಪಡೆದ ಸಂಪತ್ತನ್ನು ಸಮಾಜದ ಬೆಳವಣಿಗೆ ಉಪಯೋಗಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಸ್‍ಎಸ್‍ಎಲ್‍ಸಿ ಅಥವಾ ಪಿಯುಸಿ ಯಲ್ಲಿ ನೂರಕ್ಕೆ ಶೇ.90ರಷ್ಟು ಅಂಕ ಗಳಿಸು ವುದು ಸುಲಭದ ಮಾತಲ್ಲ. ಇಂದಿನ ಮಕ್ಕಳು ಎಲ್ಲಾ ಸ್ಪರ್ಧೆಗಳನ್ನು ಎದುರಿಸಿ, ಶೇ.90 ಅಂಕಗಳಿಸುತ್ತಾರೆ. ಇದರಲ್ಲೂ ಪೈಪೋಟಿ ಯಿದೆ. ಆದ್ದರಿಂದ ಅಂಕಿಗಳಿಗೆ ವಿದ್ಯಾ ಭ್ಯಾಸವನ್ನು ಸೀಮಿತಗೊಳಿಸದೆ, ದೇಶ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಲಿತ ವಿದ್ಯೆಯನ್ನು ಸಾರ್ಥಕಗೊಳಿಸುವ ನಿಟ್ಟಿ ನಲ್ಲಿ ಗಮನಹರಿಸಬೇಕು ಎಂದರು.

ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎನ್.ಐಶ್ವರ್ಯ, ವಿನಯ್ ಶ್ರೀವತ್ಸ, ವಿ.ಚಂದನ, ಬಿ.ಎಸ್.ಕೃತಿಕ್, ಬಿ.ಎನ್. ದೀಪ್ತಿ, ಆರ್.ನಂದನ್, ಎಸ್.ಎನ್.ಮನೋ ಹರ್, ದೀಕ್ಷಾ, ಸುಮುಖ ಎಸ್.ಆರ್. ಕಶ್ಯಪ್ ಅವರನ್ನು ಅಭಿನಂದಿಸಲಾಯಿತು. ಎಸ್ ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿ ಸಿದ ಆರ್.ರಣ್‍ಜಿತ್, ಆರ್.ವರ್ಷಿತ, ಹೆಚ್. ವಿ.ಸಾಗರ್, ಎಸ್.ಸಹನ, ವಿ.ಹಿಮಾನಿ, ರಚನಾ ಎಂ.ಭಾರದ್ವಾಜ್, ಜೆ.ಸಿಂಚನಾ ಇ.ನಂದನ್, ಶ್ಯಾಮ್‍ಭಾರಧ್ವಜ್, ವಿ.ವಿಭಾ, ಸಂಜನಾ ಮೂರ್ತಿ, ತೇಜಸ್ ಕೌಂಡಿನ್ಯ, ಎಂ.ಸುಹಾಸ್, ಎಸ್.ಆರ್.ಶ್ರೇಯಸ್, ಸುಕಲ್ಪ, ಟಿ.ಎಸ್. ಆದ್ಯಶ್ರೀ ಅವರನ್ನು ಅಭಿನಂದಿಸಲಾಯಿತು. ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತ ರಾದ ಟಿ.ಎಸ್.ಶಿವಪ್ರಸಾದ್, ಎನ್. ಕೃಷ್ಣಾವೇಣಿ, ಬಿ.ಎಂ.ಲಲಿತಾಂಭ, ಎಂ.ವಿ. ಮಂಜುಳ, ಎಸ್.ಭಾರತೀಶಂಕರ್, ಸಮಾಜ ಸೇವಕರಾದ ಕೆ.ಎಸ್.ಶಿವಕುಮಾರ್, ವೆಂಕ ಟಾಚಲ, ಪಾಲಿಕೆ ಸದಸ್ಯ ಮಾ.ವಿ.ರಾಮ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ವಿಪ್ರ ಮುಖಂಡರಾದ ರಾಘವನ್, ಶ್ರೀನಿವಾಸಭಟ್, ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಗಳಾದ ಕೃಷ್ಣ, ನಾಗೇಶ್, ದಯಾನಂದ್, ಸುಮತಿ, ವೆಂಕಟೇಶ್, ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Translate »