ಬೆಂಗಳೂರಲ್ಲಿ ಮೈಸೂರು ಮೂಲದ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಸೆರೆ
ಮೈಸೂರು

ಬೆಂಗಳೂರಲ್ಲಿ ಮೈಸೂರು ಮೂಲದ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಸೆರೆ

June 28, 2019

ಮೈಸೂರು, ಜೂ.27(ಆರ್‍ಕೆ)-ಮಗುವಿಗೆ ಶಾಲೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮೈಸೂರು ಮೂಲದ ಸಂಘಟನೆಯೊಂ ದರ ರಾಜ್ಯಾಧ್ಯಕ್ಷನನ್ನು ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬುಧ ವಾರ ಬಂಧಿಸಿದ್ದಾರೆ. ಬೆಂಗಳೂರಿನ ಬ್ಯಾಡರ ಹಳ್ಳಿಯಲ್ಲಿರುವ ಡಿ-ಗ್ರೂಪ್ ಲೇಔಟ್ ನಿವಾಸಿ ಯಾದ ಕನ್ನಡ ಸಿರಿ ಸಂಘಟನೆ ರಾಜ್ಯಾ ಧ್ಯಕ್ಷ ಎಂ.ಆನಂದಕುಮಾರ್ ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂಲತಃ ಮೈಸೂರಿನವನಾದ ಆನಂದಕುಮಾರ್, ಕನ್ನಡ ಸಂಘಟನೆ ಕಟ್ಟಿ ಕೊಂಡು ರಾಜ್ಯಾದ್ಯಂತ ಓಡಾಡಿ ಸಾಮಾಜಿಕ ಸೇವಾ ಕಾರ್ಯಗಳ ನೆಪದಲ್ಲಿ ಧಮಕಿ ಹಾಕಿಕೊಂಡು ಅಕ್ರಮ ಹಣ ಸಂಪಾದಿಸಿ ಬೆಂಗ ಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಎಂದು ದೂರಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿ ಮಹಿಳೆಯೊಬ್ಬರಿಗೆ ಆಕೆಯ ಮಗುವಿಗೆ ಆರ್‍ಟಿಇಯಡಿ ಶಾಲೆಯೊಂದರಲ್ಲಿ ಸೀಟು ಕೊಡಿಸಿ, ಶುಲ್ಕವನ್ನು ತಾನೇ ಪಾವತಿಸುವುದಾಗಿ ನಂಬಿಸಿದ್ದ ಆನಂದ್, ಜೂನ್ 16ರಂದು ತನ್ನ ಮನೆಗೆ ಕರೆಸಿಕೊಂಡು ಮಗುವಿನ ತಾಯಿ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆಗೆ ಲಿಖಿತ ದೂರು ನೀಡಿರುವ ಮಹಿಳೆಯು, ತನಗೆ ಅರಿವಿಲ್ಲದಂತೆ ಅತ್ಯಾ ಚಾರದ ಮೊಬೈಲ್ ವೀಡಿಯೋ ಮಾಡಿದ್ದ ಆತ, ಮತ್ತೆ ಮತ್ತೆ ಸಹ ಕರಿಸದಿದ್ದರೆ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಕೆವೊಡ್ಡಿ ದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಇನ್ಸ್‍ಪೆಕ್ಟರ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನನ್ವಯ ಅತ್ಯಾ ಚಾರ ಪ್ರಕರಣ ದಾಖಲಿಸಿಕೊಂಡು ಬುಧವಾರ ಆರೋಪಿ ಆನಂದ ಕುಮಾರ್‍ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸ ಲಾಗಿ, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ. ಈ ಹಿಂದೆ ಮೈಸೂರಿನ ಮೇಟಗಳ್ಳಿ ಕೈಗಾರಿಕಾ ಪ್ರದೇಶವೊಂದರ ಕಾರ್ಖಾನೆಯೊಂದರ ವಾಚ್‍ಮನ್ ಆತ್ಮಹತ್ಯೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮೃತನ ಕುಟುಂ ಬಕ್ಕೆ ಪರಿಹಾರ ಕೊಡಿಸುವ ನೆಪದಲ್ಲಿ ಧಮಕಿ ಹಾಕಿದ್ದ ಆನಂದ ಕುಮಾರ್, ಕಾರ್ಖಾನೆ ಮಾಲೀಕನಿಂದ ಹಣ ವಸೂಲಿ ಮಾಡ ಲೆತ್ನಿಸಿದ್ದ. ಬೆದರಿಕೆವೊಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದನೆಂದು ಮಾಲೀಕ ನೀಡಿದ ದೂರಿನ ನ್ವಯ ಪ್ರಕರಣ ದಾಖಲಿಸಿ ಕೊಂಡಿದ್ದ ಅಂದಿನ ಮೇಟ ಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಹ ದೇವಪ್ಪ ಅವರು ಆನಂದ ಕುಮಾರ್‍ನನ್ನು ಬಂಧಿಸಿದ್ದರು. ಆತನ ವಿರುದ್ಧ ಮೇಟಗಳ್ಳಿ ಠಾಣೆ ಯಲ್ಲಿ ರೌಡಿಶೀಟ್ ತೆರೆಯ ಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಆತ, ನಂತರ ಮೈಸೂರಿನಿಂದ ಕಾಲ್ಕಿತ್ತು ಬೆಂಗ ಳೂರಲ್ಲಿ ಕನ್ನಡ ಸಿರಿ ಎಂಬ ಸಂಘಟನೆಯಲ್ಲಿ ಸಕ್ರಿಯನಾಗಿದ್ದ.

Translate »