ಸಾಲಮನ್ನಾ ನೀತಿಯಿಂದ ಕೃಷಿ ಪತ್ತಿನ ಸಂಘಗಳು ದಿವಾಳಿ
ಮಂಡ್ಯ

ಸಾಲಮನ್ನಾ ನೀತಿಯಿಂದ ಕೃಷಿ ಪತ್ತಿನ ಸಂಘಗಳು ದಿವಾಳಿ

September 20, 2018

ದೇಶಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಂಘದ ಅಧ್ಯಕ್ಷ ಮೋಹನಕುಮಾರ್ ಆರೋಪ
ಮದ್ದೂರು:  ‘ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಸಾಲಮನ್ನಾ ನೀತಿಯಿಂದ ರೈತರಷ್ಟೆ ಅಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ದಿವಾಳಿ ಹಂತ ತಲುಪಿದೆ’ ಎಂದು ದೇಶಹಳ್ಳಿ ಪ್ರಾಥ ಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇಶ ಹಳ್ಳಿ ಆರ್.ಮೋಹನಕುಮಾರ್ ಹೇಳಿದರು.

ಸಂಘದ ವಾರ್ಷಿಕ ಮಹಾಸಭೆಯ ಅಧ್ಯ ಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ರೈತ ಸಾಲವನ್ನು ಸಂಪೂರ್ಣ ಮನ್ನಾ ಮಾಡು ತ್ತಿಲ್ಲ. ರೈತರು ಸಾಲವನ್ನು ಕಟ್ಟುವ ಸ್ಥಿತಿಯೂ ಇಲ್ಲ. ಇದರಿಂದ ಸಹಕಾರ ಸಂಘಗಳು ಮುಳು ಗುವ ಸ್ಥಿತಿ ತಲುಪಿದೆ. ಜೊತೆಗೆ, ಮುಖ್ಯ ಮಂತ್ರಿ ರೈತರಿಗೆ ನೀಡಿರುವ ಸಾಲ ಮನ್ನಾದ ಭರವಸೆ ಈಡೇರುವ ಯಾವ ನಿರೀಕ್ಷೆ ಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡುವುದಾಗಿ ತಿಳಿಸಿದ್ದ ಅವರು, ಖಾಸಗಿ ಸಾಲ ವನ್ನು ಮನ್ನಾ ಮಾಡಿ ರೈತರನ್ನು ಸಂಪೂರ್ಣ ವಾಗಿ ಋಣ ಮುಕ್ತರಾಗಿಸುವ ಭರವಸೆ ನೀಡಲಾ ಗಿತ್ತು. ಆದರೆ, ಕುಮಾರಸ್ವಾಮಿ ಅವರ ಸಾಲ ಮನ್ನಾದ ಸುತೋಲೆ ಅವರ ಹೇಳಿಕೆಗೆ ತದ್ವಿರು ದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಸಾಲದ ಪೂರ್ಣ ಮೊತ್ತವನ್ನು ಪಾವತಿ ಮಾಡಿದ್ದಲ್ಲಿ, ಮನ್ನಾವಾಗುವ ಮೊತ್ತ ವನ್ನು ರೈತರ ಉಳಿತಾಯ ಖಾತೆ ಜಮಾ ಮಾಡ ಲಾಗುವುದು ಎಂದು ಸುತ್ತೋಲೆ ಹೇಳಿದೆ. ಆದಾಯ ತೆರಿಗೆ ಪಾವತಿಸುವ ರೈತರಿಗೆ ಸಾಲ ಮನ್ನಾ ಇಲ್ಲ. ಒಂದು ಕುಟುಂಬ ದವರಿಗೆ ಮಾತ್ರ ಸಾಲಮನ್ನಾ ಎಂಬ ಷರತ್ತು ಗಳನ್ನು ಕೈಬಿಡ ಬೇಕು. ಸಂಪೂರ್ಣ ಸಾಲ ಮನ್ನಾ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘದ ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕ ರಾದ ಚಲುವೇಗೌಡ, ಸುದೀಪ್ ಕುಮಾರ್, ಮುನಿಯಪ್ಪ, ಬಿ.ಶಿವಣ್ಣ, ಕಾಳಯ್ಯ, ಗಾಯತ್ರಿ ಶಿವರಾಮು, ಸುಜಾತ ಎಂ. ನಾಗೇಶ್, ಸಿಇಓ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »