ಶ್ರೀಲಂಕಾದಲ್ಲಿ ಪ್ರಧಾನಿ ಮೋದಿ
ಮೈಸೂರು

ಶ್ರೀಲಂಕಾದಲ್ಲಿ ಪ್ರಧಾನಿ ಮೋದಿ

June 10, 2019

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯವರು ಕೊಲಂಬೋದಲ್ಲಿರುವ ಇಂಡಿಯಾ ಹೌಸ್‍ನಲ್ಲಿ ಭಾರತೀಯ ಸಮುದಾಯವನ್ನು ದ್ದೇಶಿಸಿ ಮಾತನಾಡಿದರು. ಅಲ್ಲದೆ ಕಳೆದ ಏಪ್ರಿಲ್‍ನಲ್ಲಿ ಉಗ್ರಗಾಮಿಗಳ ಬಾಂಬ್ ಸ್ಫೋಟ ದಿಂದ 253 ಮಂದಿ ನಾಗರಿಕರು ಅಸುನೀ ಗಿದ ಸ್ಥಳದಲ್ಲಿ ಗಿಡ ನೆಟ್ಟು ಶಾಂತಿ ಸೌಹಾರ್ದತೆ ಸಂದೇಶ ಸಾರಿದರು. ಜೊತೆಗೆ ಅಸುನೀಗಿದ ನಾಗರಿಕರಿಗೆ ಗೌರವ ನಮನ ಸಲ್ಲಿಸಿದರು.

ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಜಗತ್ತಿನಲ್ಲಿ ಭಾರತೀಯರ ಸ್ಥಾನ ಪ್ರಬಲವಾಗಿದೆ. ಈ ಕ್ರೆಡಿಟ್‍ನ ಹೆಚ್ಚು ಭಾಗ ಭಾರತೀಯ ವಲಸಿಗರಿಗೆ ಸಲ್ಲಬೇಕು. ಭಾರತೀಯ ವಲಸಿ ಗರ ಯಶಸ್ಸು ಮತ್ತು ಸಾಧನೆಗಳನ್ನು ಕುರಿತು ನಾನು ಎಲ್ಲಿಗೆ ಹೋದರೂ ಮಾತನಾಡು ತ್ತೇನೆ. ಕಳೆದ ಐದು ವರ್ಷಗಳಲ್ಲಿ ನಾವು ಹೆಚ್ಚು ಸಾಧಿಸಿದ್ದೇವೆ. ಮುಂಬರುವ ವರ್ಷ ಗಳಲ್ಲಿ ಸಾಧಿಸಬೇಕಾಗಿರುವುದು ಬಹಳ ಷ್ಟಿದೆ. ಜನರ ಅಭಿವೃದ್ಧಿಗಾಗಿ ಶ್ರಮ ವಹಿ ಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಇದಕ್ಕೂ ಮುನ್ನ ಶ್ರೀಲಂಕಾದ ಕೊಲಂ ಬೋಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವವಾಗಿ ಸ್ವಾಗತಿಸಿದರು. ನಂತರ ಮೋದಿಯವರು ಕಳೆದ ಏಪ್ರಿಲ್‍ನಲ್ಲಿ ಭಯೋತ್ಪಾದಕರ ದಾಳಿ ನಡೆದ ಸ್ಥಳಕ್ಕೆ ತೆರಳಿ ಗಿಡ ನೆಟ್ಟು ಶಾಂತಿ ಸೌಹಾರ್ದತೆಯ ಸಂದೇಶ ಸಾರಿದರು. ಶ್ರೀಲಂಕಾದ ಪ್ರೆಸಿಡೆನ್ಶಿಯಲ್ ಸೆಕ್ರೆಟ್ರಿಯೆಟ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಶಿವಸೇನಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ದರು. ಅಲ್ಲದೇ, ಶ್ರೀಲಂಕಾದ ಮಾಜಿ ಪ್ರಧಾನಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಮಹಿಂದಾ ರಾಜಪಕ್ಷೆ ಅವರ ಜೊತೆಗೂ ಮೋದಿ ಮಾತುಕತೆ ನಡೆಸಿದರು. ತಮ್ಮ ಶ್ರೀಲಂಕಾ ಭೇಟಿ ಸಂದರ್ಭ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ಇಂದು ಶ್ರೀಲಂಕಾದ ಕೊಚ್ಚಿಕೋಡ್‍ನ ಸೆಂಟ್ ಆಂಥೋಣಿ ಚರ್ಚ್‍ಗೆ ಭೇಟಿ ನೀಡಿ ಅಗಲಿದ ನಾಗರಿಕರಿಗೆ ಗೌರವ ನಮನ ಸಲ್ಲಿಸುವ ಮೂಲಕ ಶ್ರೀಲಂಕಾ ಪ್ರವಾಸವನ್ನು ಪ್ರಾರಂಭಿಸಿದ್ದೇನೆ. ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೇದುಕೊಂಡ ಜನರಿಗೆ ನನ್ನ ಸಂತಾಪಗಳು ಮತ್ತು ಅವರ ಕುಟುಂಬವರ್ಗದವರಿಗೆ ಸಾಂತ್ವನಗಳು. ಭಯೋತ್ಪಾದಕರು ಈ ರೀತಿಯ ಹೇಡಿ ಕೃತ್ಯಗಳಿಂದ ಶ್ರೀಲಂಕರನ್ನು ಭಯಪಡಿಸಲು ಸಾಧ್ಯವಿಲ್ಲ. ಇಂತಹ ಭಯೋತ್ಪಾದನೆ ವಿರುದ್ಧ ಶ್ರೀಲಂಕಾ ಜನರು ಧೈರ್ಯದಿಂದ ಪುಟಿದೆದ್ದು ಬರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ.

Translate »