ಏ.8ರಂದು ಮೈಸೂರಲ್ಲಿ ಪ್ರಧಾನಿ ಮೋದಿ ಪ್ರಚಾರ
ಮೈಸೂರು

ಏ.8ರಂದು ಮೈಸೂರಲ್ಲಿ ಪ್ರಧಾನಿ ಮೋದಿ ಪ್ರಚಾರ

April 4, 2019

ಮೈಸೂರು: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಏ.8ರಂದು ಆಯೋಜಿಸಿರುವ ಬೃಹತ್ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಬುಧವಾರ ಸಂಜೆ ಬಿಜೆಪಿ ಮುಖಂ ಡರು ಭೂಮಿ ಪೂಜೆ ನೆರವೇರಿಸಿದರು. ನಂತರ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.8ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ಚಿತ್ರದುರ್ಗದಿಂದ ಪ್ರಚಾರ ರ್ಯಾಲಿ ಆರಂಭಿಸಲಿದ್ದಾರೆ. ಅಂದು ಸಂಜೆ 4.15ಕ್ಕೆ ಮೈಸೂರಿಗೆ ಆಗಮಿಸಿ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ ಎಂದರು.

ಅದಕ್ಕಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಸಿದ್ಧತೆ ಆರಂಭಗೊಂ ಡಿದ್ದು, ಈ ಸಮಾವೇಶದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪಸಿಂಹ, ಚಾಮರಾಜನಗರ ಅಭ್ಯರ್ಥಿ ವಿ.ಶ್ರೀನಿ ವಾಸಪ್ರಸಾದ್ ಉಪಸ್ಥಿತರಿರುವರು. ಹಾಗೆಯೇ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮ ಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಿದ್ದು, ಮಂಡ್ಯದ ಬಿಜೆಪಿ ಕಾರ್ಯ ಕರ್ತರು ಸೇರಿದಂತೆ ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯಿಂದ ಸುಮಾರು 75 ರಿಂದ 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಏ.8ರಂದು ಬೆಳಿಗ್ಗೆ ಚಿತ್ರದುರ್ಗದಲ್ಲಿ ಬಹಿರಂಗ ಸಭೆ ಬಳಿಕ ಮೈಸೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ತಮಿಳುನಾಡಿನ ಕೊಯಮತ್ತೂರಿಗೆ ಮೋದಿ ತೆರಳಲಿದ್ದಾರೆ ಎಂದು ವಿವರಿಸಿದರು.

ಮುಖ್ಯವಾಗಿ ಅಭಿವೃದ್ಧಿ ವಿಷಯವಿಟ್ಟು ಕೊಂಡು ಪ್ರಚಾರ ನಡೆಸುತ್ತಿರುವುದರಿಂದ ಪ್ರಧಾನಮಂತ್ರಿ ಅವಾಸ್ ಯೋಜನೆ, ಉಜ್ವಲ ಯೋಜನೆ ಸೇರಿದಂತೆ ಹಿರಿಯ ನಾಗರಿಕರು ಮತ್ತು ಇದೇ ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೆ ಉದ್ದೇಶಿಸಲಾಗಿದೆ ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಹಾಸನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಾದ ಕಾರ್ಯಕ್ರಮ ಆಯೋಜಿಸಲು ಉz್ದÉೀಶಿಸಲಾಗಿದ್ದು, ದಿನಾಂಕವನ್ನು ನಾಯಕರು ಮುಂದೆ ತಿಳಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಹೆಚ್.ವಿ. ರಾಜೀವ್, ವಾಮನಾಚಾರ್ಯ, ಬಿ.ಪಿ.ಮಂಜುನಾಥ್, ಸಿದ್ದರಾಜು, ಫಣೀಶ್, ಸಂದೇಶ್‍ಸ್ವಾಮಿ, ಕಿರಣ್ ಗೌಡ, ದೇವನೂರು ಪ್ರತಾಪ್, ಪ್ರಭಾಕರರಾವ್ ಸಿಂಧೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »