ಮೈಸೂರು,ಜೂ.25(ಆರ್‍ಕೆಬಿ)- ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತುಂಬಾ ಮುಖ್ಯ ವಾಗಿರುವ ಗುಣಮಟ್ಟ ಮತ್ತು ಸುರಕ್ಷತೆಗೆ ಗಾರೆ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡು ವವರು ಮೊದಲ ಆದ್ಯತೆ ನೀಡಬೇಕು ಎಂದು ಮೈಸೂರು ಜಿಲ್ಲಾ ಪಂಚಾಯತ್ ಸಿಇಓ ಕೆ.ಜ್ಯೋತಿ ಇಂದಿಲ್ಲಿ ಸಲಹೆ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಹಾಗೂ ನಿರ್ಮಿತಿ ಕೇಂದ್ರಗಳ ಸಹಯೋಗದಲ್ಲಿ ಮಂಗಳವಾರ ಮೈಸೂರಿನ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ `ಶ್ರಮ ಸಾಮಥ್ರ್ಯ ಯೋಜನೆ’ಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತರಬೇತಿ ಕಾರ್ಯಕ್ರಮದಲ್ಲಿ ಗಾರೆ ಕೆಲಸ ಗಾರರ 2 ಮತ್ತು 3ನೇ ಹಾಗೂ ಎಲೆಕ್ಟ್ರಿಕಲ್ ಮೊದಲನೇ ತಂಡದ ಬೀಳ್ಕೊಡುಗೆ ಸಮಾ ರಂಭದಲ್ಲಿ ತರಬೇತಿ ಪಡೆದ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಿ ಅವರು ಮಾತನಾಡಿದರು.
ಒಂದು ತಿಂಗಳ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಳ್ಳ ಬೇಕು. ಜೀವನಮಟ್ಟ ಅಭಿವೃದ್ಧಿ ಮಾಡಿ ಕೊಳ್ಳಬೇಕು. ದುಡಿದ ಹಣವನ್ನು ಪೋಲು ಮಾಡದೇ ನಿಮ್ಮ ಕುಟುಂಬದ ಅಭಿವೃದ್ಧಿಗೆ ಸಮರ್ಪಕ ರೀತಿಯಲ್ಲಿ ವಿನಿಯೋಗಿಸ ಬೇಕು ಎಂದು ಸಲಹೆ ನೀಡಿದರು.
ಗಾರೆ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡುವವರು ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ. ನಂತರ ಗುಣ ಮಟ್ಟದ ಕೆಲಸಕ್ಕೆ ಆದ್ಯತೆ ನೀಡುವ ಮೂಲಕ ತಮ್ಮ ಜೀವನ ಮಟ್ಟ ಹೆಚ್ಚಿಸಿ ಕೊಳ್ಳಬಹುದಾಗಿದೆ. ದುಡಿಯುವ ಹಣ ವನ್ನು ಐಷಾರಾಮಿ ವಸ್ತುಗಳಿಗೆ ಮಾರು ಹೋಗಿ ಖರ್ಚು ಮಾಡಬೇಡಿ. ಕ್ಷಣಿಕ ಖುಷಿ ನೀಡುವ ಧೂಮಪಾನ, ಮದ್ಯಪಾನ ಚಟಕ್ಕೆ ಬಿದ್ದು, ಹಣ ಪೆÇೀಲು ಮಾಡದಿರಿ. ಇದು ನಿಮ್ಮ ದೈಹಿಕ ಸಾಮಥ್ರ್ಯ ಕಸಿದುಕೊಳ್ಳುತ್ತದೆ. ಆರೋಗ್ಯವಂತರಾಗಿ ನಿಮ್ಮ ಗುಣಮಟ್ಟದ ಕೆಲಸ ಹಾಗೂ ಸುರಕ್ಷಿತ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಜೀವನ ನಡೆಸಿ ಎಂದು ಸಲಹೆ ನೀಡಿದರು.
ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಎ.ಸಿ.ತಮ್ಮಣ್ಣ ಮಾತನಾಡಿ, ಅಸಂಘಟಿತ ಕಾರ್ಮಿಕ ವಲಯದಲ್ಲಿರುವ ಕಟ್ಟಡ ಕಾರ್ಮಿ ಕರು ಕಾಲಕಾಲಕ್ಕೆ ಹೊಸ ಆವಿಷ್ಕಾರ, ತಂತ್ರ ಜ್ಞಾನಗಳಿಗೆ ಹೊಂದಿಕೊಂಡು ಬದಲಾ ವಣೆಯತ್ತ ಸಾಗಬೇಕಿದೆ. ಕೌಶಲಗಳಿಂದ ನಿಮ್ಮ ಬೇಡಿಕೆ ಹಾಗೂ ಕೂಲಿಯೂ ಹೆಚ್ಚಾ ಗಲಿದೆ. ನಿಮ್ಮ ವೈಯಕ್ತಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ ಎಂದರು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಂ.ಟಿ.ಮಂಜುನಾಥ್ ಮಾತ ನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತದ ಶ್ರಮ ಸಾಮಥ್ರ್ಯ ಯೋಜನೆಯಡಿ ಕಟ್ಟಡ ಮತ್ತು ಇತರೆ ಕಾರ್ಮಿಕರು ಹಾಗೂ ಎಲೆಕ್ಟ್ರಿಕಲ್ ಕೆಲಸ ಗಾರರಿಗೆ ಒಂದು ತಿಂಗಳ ತರಬೇತಿ ನೀಡ ಲಾಗಿದೆ. 120 ಕಟ್ಟಡ ಕಾರ್ಮಿಕರ ಪೈಕಿ ಮೊದಲ ತಂಡದ 33 ಕಾರ್ಮಿಕರಿಗೆ ಈಗಾ ಗಲೇ ಟೂಲ್ ಕಿಟ್ ಹಾಗೂ ಸೇಫ್ಟಿ ಕಿಟ್ ವಿತರಿಸಲಾಗಿದೆ. ಉಳಿದ 2 ಮತ್ತು 3ನೇ ತಂಡದ 66 ಗಾರೆ ಕಾರ್ಮಿಕರು ಹಾಗೂ 21 ಎಲೆಕ್ಟ್ರಿಕಲ್ ವೈರಿಂಗ್ ವಿಭಾಗದ ಕಾರ್ಮಿಕರಿಗೆ ತರಬೇತಿ ನೀಡಿ ಇಂದು ಕಿಟ್‍ಗಳನ್ನು ವಿತರಿಸಿ ಬೀಳ್ಕೊಡುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗಾರೆ ಕೆಲಸದ ತರಬೇತಿ ಪಡೆದ ವೀರಭದ್ರು ಮತ್ತು ಎಲೆಕ್ಟ್ರಿಕಲ್ ವೈರಿಂಗ್ ತರಬೇತಿ ಪಡೆದ ವಿಜಯಕುಮಾರ್ ಮತ್ತು ತಿಮ್ಮರಾಜು, ತರಬೇತಿಯಿಂದ ತಮಗೆ ಹೆಚ್ಚು ಅನು ಕೂಲವಾಗಿದೆ. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ನಾವೇ ನಾಲ್ಕಾರು ಮಂದಿಗೆ ಕೆಲಸ ನೀಡಿ ಸ್ವಂತವಾಗಿ ಕೆಲಸ ಮಾಡಬಹುದು ಎಂಬಷ್ಟು ಧೈರ್ಯ ಬಂದಿದೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ನಿರ್ಮಿತಿ ಕೇಂದ್ರದ ಯೋಜನಾ ಎಂಜಿನಿಯರ್ ಎಚ್.ಬಿ.ಸತೀಶ್, ಅಲ್ಟ್ರಾ ಟೆಕ್ ಸಿಮೆಂಟ್‍ನ ಸೋಮಶೇಖರ್, ಯೋಗ ತರಬೇತುದಾರರ ನಾಗಭೂಷಣ್ ಇನ್ನಿತರರು ಉಪಸ್ಥಿತರಿದ್ದರು.