`ಪುಟಗೋಸಿ ಜೆಡಿಎಸ್’ ಹೇಳಿಕೆಗೆ ಖಂಡನೆ
ಮಂಡ್ಯ

`ಪುಟಗೋಸಿ ಜೆಡಿಎಸ್’ ಹೇಳಿಕೆಗೆ ಖಂಡನೆ

June 5, 2018

ಮಂಡ್ಯ: `ಪುಟಗೋಸಿ ಜೆಡಿಎಸ್’ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ನಗರದಲ್ಲಿಂದು ಜೆಡಿಎಸ್ ಕಾರ್ಯಕರ್ತರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಕಳುಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬೆಳಿಗ್ಗೆ ನಗರದ ಮುಖ್ಯ ಅಂಚೆ ಕಚೇರಿ ಬಳಿ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಅನಂತ ಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಗಳನ್ನು ಕೊರಿಯರ್ ಮಾಡಿದರು.

ಈ ಹಿಂದೆ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭ ದಲ್ಲಿ `ಪುಟಗೋಸಿ ಜೆಡಿಎಸ್ ಪಕ್ಷ ದೊಂದಿಗೆ ಕಾಂಗ್ರೆಸ್ ಕೈ ಜೋಡಿಸಿರುವುದು ನಾಚಿಕೆಗೇಡು’ ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ’ ಎಂದು ಲೇವಡಿ ಮಾಡಿದ್ದರು. ಇದನ್ನು ಖಂಡಿಸಿ ಮಂಡ್ಯದ ಕಾರ್ಯಕರ್ತರ ಕೇಂದ್ರ ಸಚಿವರಿಗೆ ಬಣ್ಣ ಬಣ್ಣದ ಪುಟ ಗೋಸಿಗಳನ್ನು ರವಾನಿಸಿದ್ದಾರೆ.

ಅನಂತಕುಮಾರ ಹೆಗಡೆ ಅವರು ಕರ್ನಾ ಟಕದ ಪ್ರಾದೇಶಿಕ ಪಕ್ಷವನ್ನು ಪುಟಗೋಸಿಗೆ ಹೋಲಿಕೆ ಮಾಡಿದ್ದಾರೆ. ಪುಟಗೋಸಿ ಬಳಕೆ ಬಗ್ಗೆ ಸಚಿವರಿಗೆ ಗೊತ್ತೇ ಇಲ್ಲಾ. ಬಹು ತೇಕ ಎಲ್ಲರೂ ಪುಟಗೋಸಿ ಹಾಕಿಕೊಂಡು ಜೀವನ ಮಾಡುತ್ತಿದ್ದು, ಅದು ಜನರ ಮಾನ ವನ್ನು ಮುಚ್ಚುತ್ತದೆ. ಕೇಂದ್ರ ಸಚಿವರಾಗಿ ಇಂತಹ ಪದ ಪ್ರಯೋಗ ಮಾಡಬಾರದು. ಹೇಗೆ ಎಲ್ಲಿ ಇಂತಹ ಪದ ಬಳಕೆ ಮಾಡಬೇಕೆಂಬುದರ ಬಗ್ಗೆಯೂ ಅವರಿಗೆ ಗೊತ್ತಿಲ್ಲ. ಇನ್ನು ಮುಂದೆ ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

Translate »