ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ
ಮಂಡ್ಯ

ಅಕ್ಕಿಹೆಬ್ಬಾಳು ಗ್ರಾಪಂ ವಿರುದ್ಧ ಕರವೇ ಪ್ರತಿಭಟನೆ

October 27, 2018

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ಕೆಲವು ನೌಕರರು ಮತ್ತು ಪಂಚಾಯಿತಿ ಸದಸ್ಯರು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿ ದ್ದಾರೆ ಎಂದು ಆರೋಪಿಸಿ ಅಕ್ಕಿಹೆಬ್ಬಾಳು ಪಂಚಾಯಿತಿ ಕಚೇರಿಯ ಮುಂಭಾಗ ಶುಕ್ರವಾರ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಗ್ರಾಪಂ ಕಚೇರಿಯ ಮುಂದೆ ಸಮಾ ವೇಶಗೊಂಡ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಧಿಕಾರಿಗಳು ಹಾಗೂ ಸದಸ್ಯರ ವಿರುದ್ಧ ಘೋಷಣೆ ಕೊಗಿದರು. ಪಂಚಾಯಿತಿಯಲ್ಲಿ ಆಶ್ರಯ ಮನೆ, ಇ-ಸ್ವತ್ತು ಖಾತೆ ಬದಲಾವಣೆ, ವಿವಿಧ ಲೈಸೆನ್ಸ್ ದೃಢೀಕರಣ ಪತ್ರ, ಉದ್ಯೋಗಖಾತ್ರಿ ಯೋಜನೆಗಳ ಪ್ರಯೋ ಜನ ಪಡೆಯಲು ಸಾರ್ವಜನಿಕರು ಇಂತಿಷ್ಟು ಹಣ ನೀಡಬೇಕೆಂದು ನೀರು ಗಂಟಿಗಳು, ಬಿಲ್ ಕಲೆಕ್ಟರ್, ಕಾರ್ಯದರ್ಶಿಗಳು ಹಾಗೂ ಕೆಲವು ಸದಸ್ಯರು ಸಾರ್ವಜನಿಕರನ್ನು ಒತ್ತಾಯ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಯಾವುದೇ ಕೆಲಸಗಳು ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.
ಸಾರ್ವಜನಿಕರ ವಿವಿಧ ಕೆಲಸಗಳಿಗೆ ಹಣ ವಸೂಲಿ ಮಾಡುತ್ತಿರುವ ಪಂಚಾ ಯಿತಿಯ ಕೆಲವು ಸದಸ್ಯರು ಹಾಗೂ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕು. ಸರ್ಕಾರದ ನಿಯಮದ ಪ್ರಕಾರ ಪಡೆಯಬೇಕಾದ ಶುಲ್ಕವನ್ನು ಹೊರತು ಪಡಿಸಿ ಹೆಚ್ಚು ಹಣ ಪಡೆಯುತ್ತಿರುವುದ ರಿಂದ ಸಾರ್ವಜನಿಕರು ಗ್ರಾಮ ಪಂಚಾಯಿತಿ ಮತ್ತು ಸದಸ್ಯರ ಬಗ್ಗೆ ತೀವ್ರ ಅಸಮಧಾನ ಗೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇ ಕಾದ ಪಿಡಿಓ ಸುಮ್ಮನಿರುವುದು ಭ್ರಷ್ಟಾ ಚಾರಕ್ಕೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಆರೋಪಿಸಿದರು.

ಕೂಡಲೇ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಸಾರ್ವಜನಿಕರ ಕೆಲಸಗಲು ಸಕಾಲದಲ್ಲಿ ಆಗುವಂತೆ ಕ್ರಮ ವಹಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಉಪಾಧ್ಯಕ್ಷ ಕೆ.ಟಿ.ಶ್ರೀನಿವಾಸ್(ಶ್ರೀನಿಧಿ), ಕರವೇ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮನು, ಗೌರವ ಸಲಹೆಗಾರ ಶಿವ ಕುಮಾರ್, ವಿಎಸ್‍ಎಸ್‍ಎನ್ ಅಧ್ಯಕ್ಷ ಉದಯ ಕುಮಾರ್, ಮುಖಂಡರಾದ ಸುಬ್ಬೇಗೌಡ, ಜವರೇಗೌಡ, ಅನಿಲ್, ಕಲಾವತಿ, ಜಯ ರಾಮೇಗೌಡ ಪಾಲ್ಗೊಂಡಿದ್ದರು.

Translate »