ಶ್ರೀರಂಗಪಟ್ಟಣ: ಸಂಬಂ ಧಿಕರ ಮನೆಗೆ ಬಂದಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ದೊಡ್ಡಪಾಳ್ಯ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಹನಿಯಂಬಾಡಿ ಗ್ರಾಮದ ಸೌಮ್ಯ(23) ಮೃತಪಟ್ಟ ಯುವತಿ. ಸೌಮ್ಯ ಮೈಸೂರಿನ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ದೊಡ್ಡಪಾಳ್ಯ ಗ್ರಾಮದ ತನ್ನ ದೊಡ್ಡಮ್ಮನ ಮನೆಗೆ ಬಂದಿದ್ದಳು. ಆದರೆ, ಗುರುವಾರ ರಾತ್ರಿ ಅಧಿಕ ರಕ್ತ ದೊತ್ತಡದಿಂದ ಬಳಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಸಂಬಂಧಿಕರು ತಿಳಿಸಿ ದ್ದಾರೆ. ಆದರೆ, ಆಕೆ ಗರ್ಭವತಿಯಾ ಗಿದ್ದು, ಇನ್ನೂ ವಿವಾಹವಾಗಿರಲಿಲ್ಲ. ಹಾಗಾಗಿ, ಸೌಮ್ಯಳ ಸಾವು ಅನುಮಾನ ಮೂಡಿಸಿದ್ದು, ಈ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.