ಅಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಖಂಡಿಸಿ: ಪ್ರತಿಭಟನೆ
ಮಂಡ್ಯ

ಅಸಮರ್ಪಕ ಮತದಾರರ ಪಟ್ಟಿ ಪರಿಷ್ಕರಣೆ ಖಂಡಿಸಿ: ಪ್ರತಿಭಟನೆ

June 2, 2018

ಮದ್ದೂರು:  ಪಟ್ಟಣದ ಪುರ ಸಭಾಧಿಕಾರಿಗಳು ಸ್ಥಳೀಯ ಸಂಸ್ಥೆ ಚುನಾವಣೆ ಮತಪಟ್ಟಿ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸಿ ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯ ಕರ್ತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಎದುರು ಜಮಾ ಯಿಸಿದ ಕಾರ್ಯಕರ್ತರು ಪುರಸಭಾಧಿ ಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ನಿರ್ಮೂಲನಾ ಸಂಘಟನೆ ಸಂಚಾಲಕಿ ಪ್ರಿಯಾಂಕ ಅಪ್ಪು ಪಿ.ಗೌಡ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಚುನಾ ವಣೆ ನಡೆಯುವ ಹಿನ್ನೆಲೆಯಲ್ಲಿ ಮತಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಜಿಲ್ಲಾಧಿಕಾರಿಗಳು ಪರಿಷ್ಕತ ಮತಪಟ್ಟಿ ಕೇಳುತ್ತಿದ್ದಂತೆ ಅಲ್ಲಿಯವರೆಗೆ ಸುಮ್ಮನಿದ್ದ ಪುರಸಭಾಧಿಕಾರಿಗಳು ಇದೀಗ ತರಾತುರಿ ಯಲ್ಲಿ ಯಾವುದೇ ವಾರ್ಡುಗಳಿಗೆ ಭೇಟಿ ನೀಡದೇ, ಮತದಾರರ ಮಾಹಿತಿ ಪಡೆ ಯದೇ ತಮ್ಮ ಕಚೇರಿಯಲ್ಲೇ ಕುಳಿತು ಅಂಗನವಾಡಿ ಬಿಎಲ್‍ಓಗಳ ಸಹಾಯ ದಿಂದ ನೆಪ ಮಾತ್ರಕ್ಕೆ ಮತಪಟ್ಟಿ ಸಿದ್ಧಪಡಿಸಿ ಅದಕ್ಕೆ ಪರಿಷ್ಕøತ ಹಣೆಪಟ್ಟಿ ಕಟ್ಟಿ, ಜಿಲ್ಲಾ ಧಿಕಾರಿಗಳಿಗೆ ಮತಪಟ್ಟಿ ಸಲ್ಲಿಸಲು ಸಿದ್ಧ ವಾಗಿದ್ದಾರೆ. ಈ ಪಟ್ಟಿಯಿಂದ ಮತದಾರ ರಿಗೆ ಅನಾನೂಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮತದಾರರು ವಾಸ ಮಾಡುವ ಹಾಗೂ ಮತದಾನ ಮಾಡುವ ವಾರ್ಡು ಗಳೇ ಬದಲಾವಣೆಯಾಗಿರುತ್ತದೆ ಎಂದು ಆರೋಪಿಸಿದರು.

ಈ ಕೂಡಲೇ ಜಿಲ್ಲಾಧಿಕಾರಿಗಳು ಈ ನೆಪ ಮಾತ್ರದ ಮತಪಟ್ಟಿಯನ್ನು ತಿರಸ್ಕರಿಸಿ ಮತ್ತೇ ಮತಪಟ್ಟಿ ಪರಿಷ್ಕರಣೆಗೆ ಮುಂದಾಗ ಬೇಕೆಂದು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಸುರೇಶ್, ಕಾರ್ಯಾಧ್ಯಕ್ಷ ಲಕ್ಷ್ಮಣ್, ನಗರ ಘಟಕದ ಅಧ್ಯಕ್ಷ ಸಿದ್ದು, ಸುರೇಶ್, ಸಿದ್ದೇಗೌಡ, ಮಲ್ಲೇಶ್ ಸೇರಿದಂತೆ ಹಲವರಿದ್ದರು.

Translate »