ಮಂಡ್ಯ: ನಂದಿನಿ ಹಾಲನ್ನೇ ಬಳಸುವ ಮೂಲಕ ರೈತರಿಗೆ ನೆರವಾಗ ಬೇಕೆಂದು ಮನ್‍ಮುಲ್ ನಿರ್ದೇಶಕ ಎಸ್.ಪಿ.ಮಹೇಶ್ ತಿಳಿಸಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಮನ್‍ಮುಲ್ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರೋಗಿಗಳಿಗೆ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವ ಹಾಲು ದಿನಾಚರಣೆ ಅಂಗ ವಾಗಿ ಜಿಲ್ಲಾ ಆಸ್ಪತ್ರೆ ರೋಗಿಗಳಿಗೆ ಹಾಲು ವಿತರಿಸಲಾಗುತ್ತಿದೆ. ಹಾಲು ಅತ್ಯಂತ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ. ಪ್ರತಿಯೊಬ್ಬರೂ ನಂದಿನಿ ಹಾಲನ್ನು ಉಪಯೋಗಿಸುವಂತೆ ಕರೆ ನೀಡಿದರು.
ನಂದಿನಿ ಉತ್ಪನ್ನಗಳನ್ನು ಉಪಯೋಗಿ ಸುವುದರಿಂದ ನಮ್ಮ ರೈತರಿಗೆ, ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಗ್ರಾಹಕರು ನಂದಿನಿ ಉತ್ಪನ್ನಗಳನ್ನೇ ಬಳಸು ವಂತೆ ಕಿವಿಮಾತು ಹೇಳಿದರು. ವ್ಯವಸ್ಥಾಪಕ ರಾಜಶೇಖರ್ ಮಾತನಾಡಿ, ಆಹಾರ ಮತ್ತು ಕೃಷಿ ಒಕ್ಕೂಟದ ವತಿಯಿಂದ 2001ರಿಂದ ವಿಶ್ವ ಹಾಲು ದಿನಾಚರಣೆ ಆಚರಿಸಲಾಗುತ್ತಿದೆ. ಎಂದ ಅವರು ಹಾಲು ಸಮತೋಲನ ಆಹಾರ. ಅದರಲ್ಲಿ ಜೀವಿಯ ಬೆಳವಣ ಗೆಗೆ ಅಗತ್ಯವಾಗಿರುವ ಪ್ರೋಫ್ಯಾಟ್, ಮಿನರಲ್ಸ್ ಇತರೆ ಅಂಶಗಳು ಇರುವುದ ರಿಂದ ಅದನ್ನು ಅಮೃತ ಎಂದು ಹೇಳುತ್ತೇವೆ. ಇಂತಹ ಬ್ಯಾಲೆನ್ಸ್ ಫುಡ್‍ನ್ನು ಸೇವಿಸಿ ಆರೋಗ್ಯ ವಂತರಾಗಿ ಎಂದು ಮಾಹಿತಿ ನೀಡುವ ವತಿಯಿಂದ ಪಟ್ಟಣದ ಕೆ.ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಉಚಿತವಾಗಿ ಹಾಲಿನ ಪೌಡರ್ ವಿತರಿಸ ಲಾಯಿತು. ಹಾಲಿನ ಪೌಡರ್ ವಿತರಣೆ ಮಾಡಿ ಮಾತನಾಡಿದ ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ವಿಶ್ವ ಹಾಲಿನ ದಿನಾಚರಣೆ ಅಂಗವಾಗಿ ಒಕ್ಕೂಟದ ವತಿ ಯಿಂದ ಹಾಲಿನ ಪೌಡರ್ ನೀಡಲಾಗುತ್ತಿದೆ. ನಂದಿನಿ ಹಾಲಿನಲ್ಲಿ ಉತ್ತಮ ಪೌಷ್ಟಿಕಾಂಶ ವಿದ್ದು, ಮಕ್ಕಳು ಮತ್ತು ಎಲ್ಲಾ ವರ್ಗ ವಯಸ್ಸಿ ನವರು ಹಾಲು ಕುಡಿಯುವುದರಿಂದ ಆರೋಗ್ಯ ಚೆÀನ್ನಾಗಿರುತ್ತದೆ ಎಂದು ತಿಳಿಸಿದರು.
ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ರಾಮಕೃಷ್ಣಯ್ಯ, ಉಪ ವ್ಯವಸ್ಥಾಪಕ ಗಿರೀಶ್, ಸಾಗರ್, ಡಾ.ಶಿವಕುಮಾರ್, ಕೆಂಚಪ್ಪ ಹಾಗೂ ಮಾಲತೇಶ್ ಇನ್ನಿತರರಿದ್ದರು.