ಅಘಲಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ
ಮಂಡ್ಯ

ಅಘಲಯ ಪ್ರೌಢಶಾಲೆ ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ

June 2, 2018

ಅಘಲಯ:  ತಾಲೂಕಿನ ಅಘಲಯ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ರಂಗನಾಥ್ ಅವರನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರ ವೃಂದ ಸನ್ಮಾನಿಸಿ, ಗೌರವಿಸುವ ಮೂಲಕ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷ ಹೊನ್ನೇಗೌಡ, ಶಿಕ್ಷಕರಾದ ಎಂ.ಪಿ.ಸೋಮ ನಾಥ್, ಶಂಕರ್, ಜಗದೀಶ್, ಉಮೇಶ್, ಜಯಲಕ್ಷ್ಮೀ, ನಿವೃತ್ತ ಶಿಕ್ಷಕ ನಂಜಪ್ಪ ಮತ್ತಿತರರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯ ಶಿಕ್ಷಕ ಎ.ರಂಗನಾಥ್, ಸರ್ಕಾರಿ ಸೇವೆ ಎಂಬುದು ದೇವರು ಕೊಟ್ಟ ವರ. ಸರ್ಕಾರಿ ನೌಕರರು ಪ್ರಾಮಾಣ ಕವಾಗಿ ಅರ್ಪಣಾ ಭಾವನೆಯಿಂದ ತಮ್ಮ ಕರ್ತವ್ಯ ನಿರ್ವಹಿಸುವ ಮೂಲಕ ತಮ್ಮ ವೃತ್ತಿಯ ಗೌರವ ಹೆಚ್ಚಿಸಬೇಕು. ಈ ಮೂಲಕ ಸಮಾಜದಲ್ಲಿ ಉತ್ತಮ ಹೆಸರು ಗಳಿಸ ಬೇಕು ಎಂದ ಅವರು, ಈ ನಿಟ್ಟಿನಲ್ಲಿ ತಾವು ಶಿಕ್ಷಣ ಇಲಾಖೆಯಲ್ಲಿ 30ವರ್ಷಕ್ಕೂ ಹೆಚ್ಚು ಕಾಲ ಉತ್ತಮ ಸೇವೆ ಸಲ್ಲಿಸಿದ ತೃಪ್ತಿ ಇದೆ ಎಂದು ತಿಳಿಸಿದರು.

Translate »