ವೇತನಕ್ಕಾಗಿ ಅರಣ್ಯ ಇಲಾಖಾ ದಿನಗೂಲಿಗಳ ಮುಷ್ಕರ ಆರಂಭ
ಮಂಡ್ಯ

ವೇತನಕ್ಕಾಗಿ ಅರಣ್ಯ ಇಲಾಖಾ ದಿನಗೂಲಿಗಳ ಮುಷ್ಕರ ಆರಂಭ

June 2, 2018

ಮಂಡ್ಯ:  ಸೇವೆ ಖಾಯಂ ಮ್ಮಾತಿ ಸೇರಿದಂತೆ ವೇತನಕ್ಕಾಗಿ ಆಗ್ರಹಿಸಿ ಮಂಡ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣ ಆರಂಭಿಸಿದ್ದಾರೆ.ಮಂಡ್ಯ ಅರಣ್ಯ ಇಲಾಖೆ ಎದುರೇ ದಿನಗೂಲಿ ನೌಕರರ ಸಂಘದ ನೇತೃತ್ವದಲ್ಲಿ ದಿನಗೂಲಿ ನೌಕರರು ಪ್ರತಿಭಟನಾ ಧರಣ ಆರಂಭಿಸಿದ್ದಾರೆ.

ಇಂದು ಬೆಳಿಗ್ಗೆ ಧರಣ ಆರಂಭಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉಪ ಸಮಿತಿ ವರದಿ ಜಾರಿಗೊಳಿಸುವುದರ ಮೂಲಕ ದಿನಗೂಲಿ ನೌಕರರನ್ನು ಖಾಯಂಗೊಳಿ ಸಬೇಕು, ಅಧಿಕಾರಿಗಳ ಶೋಷಣೆ, ಆಡಳಿತ ಯಂತ್ರ ದುರುಪಯೋಗ ತಪ್ಪಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿದ್ದಯ್ಯ ಮತ್ತಿತರರಿದ್ದರು.

Translate »