ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ
ಮಂಡ್ಯ

ರಾಸುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಿ

June 2, 2018

ಚಿನಕುರುಳಿ:  ಪಶು ಸಂಗೋಪನಾ ಇಲಾಖೆ ವತಿಯಿಂದ ಹಾಕುವ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಕಡ್ಡಾಯವಾಗಿ ಹಾಕಿಸುವಂತೆ ಜಿಪಂ ಸದಸ್ಯ ಸಿ.ಅಶೋಕ್ ಮನವಿ ಮಾಡಿದರು.

ಚಿನಕುರಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಎದುರು ಆಯೋಜಿ ಸಿದ್ದ 14ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಸು ಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿ ನಾದ್ಯಂತ 35 ಸಾವಿರ ಹಸುಗಳು, 8,500 ಎಮ್ಮೆಗಳು ಹಾಗೂ 650 ಹಂದಿಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಹಾಕಲು 3 ತಂಡಗಳನ್ನು ರಚಿಸಲಾ ಗಿದ್ದು, ಎಲ್ಲಾ ವೈದ್ಯರು, ಸಿಬ್ಬಂದಿಗಳು ತಮ್ಮ ಗ್ರಾಮಗಳಿಗೆ ಬಂದು ರಾಸುಗಳಿಗೆ ಲಸಿಕೆ ಹಾಕಲಿದ್ದಾರೆ. ರಾಸುಗಳ ಮಾಲೀಕರು ವೈದ್ಯರು ಬರುವ ಮಾಹಿತಿಯನ್ನು ತಮ್ಮ ಗ್ರಾಮಗಳ ಹಾಲಿನ ಡೈರಿಗಳಲ್ಲಿ ಪಡೆದು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಮನವಿ ಮಾಡಿದರು.

ಪಶು ಸಂಗೋಪನಾ ಇಲಾಖೆ ವತಿ ಯಿಂದ ಜೂ.1 ರಿಂದ 19ರವರೆಗೆ ತಾಲೂಕಿ ನಲ್ಲಿ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂ ಕಿನ ಎಲ್ಲಾ ರೈತರು, ರಾಸುಗಳ ಮಾಲೀಕರು ಕಾಲುಬಾಯಿ ಜ್ವರ ಲಸಿಕೆ ಹಾಕಿಸುವ ಮೂಲಕ ರಾಸುಗಳಿಗೆ ಕಾಲು ಬಾಯಿ ಜ್ವರ ಬರದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.

ಈ ವೇಳೆ ತಾಪಂ ಸದಸ್ಯ ಸಿ.ಎಸ್. ಗೋಪಾಲೇಗೌಡ, ಡೈರಿ ಅಧ್ಯಕ್ಷ ವನರಾಜು, ಉಪಾಧ್ಯಕ್ಷೆ ತಾಯಮ್ಮ, ಮಾಜಿ ಅಧ್ಯಕ್ಷ ಸಿ.ಎಂ.ರಮೇಶ್, ವರದರಾಜು, ಲೋಕೇಶ್, ಮಹೇಶ್, ಮಾಜಿ ಉಪಾಧ್ಯಕ್ಷ ರಾಮೇ ಗೌಡ, ನಿರ್ದೇಶಕರಾದ ರೇವಣ್ಣ, ದಿನೇಶ್, ಗ್ರಾಪಂ ಸದಸ್ಯರಾದ ಸಿ.ಎ.ಲೋಕೇಶ್, ಸಿ.ಡಿ.ಮಹದೇವು, ರಾಮಚಂದ್ರು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪ್ರಕಾಶ್, ಡೈರಿ ಕಾರ್ಯದರ್ಶಿ ಕಾಂತರಾಜು, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇ ಶಕ ನಟರಾಜು, ವೈದ್ಯರಾದ ಡಾ.ಎಂ. ಎಸ್.ನಂದಿನಿ, ಕೆ.ಎಂ.ಕಾವ್ಯ ಸೇರಿದಂತೆ ಹಲವರಿದ್ದರು.

Translate »