ಪ್ರೊ.ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರಗತಿಪರರಿಂದ ಪ್ರತಿಭಟನೆ
ಮೈಸೂರು

ಪ್ರೊ.ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಪ್ರಗತಿಪರರಿಂದ ಪ್ರತಿಭಟನೆ

February 6, 2019

ಮೈಸೂರು: ಮಾನವ ಹಕ್ಕುಗಳ ಹೋರಾಟಗಾರ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರೊ.ಆನಂದ್ ತೇಲ್ತುಂಬ್ಡೆ ಅವರನ್ನು ವಿನಾ ಕಾರಣ ಬಂಧಿಸಿರುವ ಮಹಾರಾಷ್ಟ್ರ ಪೊಲೀಸರ ಕ್ರಮ ಹಾಗೂ ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡು ಹೊಡೆದು ರಕ್ತ ಹರಿಸುವ ಅಣಕ ಮಾಡಿರುವ ಹಿಂದೂ ಮಹಾಸಭಾದ ಕೃತ್ಯವನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂ ಟದ ಆಶ್ರಯದಲ್ಲಿ ಮೈಸೂರಿನ ನ್ಯಾಯಾ ಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಲಾಯಿತು.

ಸಾಹಿತಿ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ನೇತೃತ್ವದಲ್ಲಿ ಪ್ರಗತಿಪರ ಮುಖಂ ಡರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು. ಈ ಸಂದರ್ಭ ದಲ್ಲಿ ಮಾತನಾಡಿದ ಪ್ರೊ.ಕೆ.ಎಸ್.ಭಗ ವಾನ್, ಕಾರಣವಿಲ್ಲದೇ ಬಂಧಿಸುವ ಈ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮತ್ತು ಸಂವಿ ಧಾನದ ಆಶಯಗಳಿಗೆ ವಿರುದ್ಧವಾಗಿದೆ. ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕ್ರಮವಾಗಿದೆ. ಇದನ್ನು ಸಂವಿಧಾನ ದಲ್ಲಿ ನಂಬಿಕೆಯಿರುವ ಎಲ್ಲರೂ ಖಂಡಿಸಬೇಕು. ಪ್ರೊ.ಆನಂದ್ ಅವರ ಮೇಲೆ ಹೊರಿಸಿ ರುವ ಸುಳ್ಳು ಆರೋಪಗಳ ಮೊಕದ್ದಮೆ ಯನ್ನು ಹಿಂಪಡೆಯಬೇಕು ಎಂದು ಒತ್ತಾ ಯಿಸಿದರು.

ಹುತಾತ್ಮರ ದಿನದಂದು ಹಿಂದೂ ಮಹಾಸಭಾದ ಕಾರ್ಯಕರ್ತರು ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿ, ರಕ್ತ ಹರಿಸುವ ಅಣಕ ಮಾಡುವ ಮೂಲಕ ಹೇಯ ಕೃತ್ಯ ಎಸಗಿ ದ್ದಾರೆ. ಜೊತೆಗೆ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆ ಪರ ಜಯಕಾರ ಹಾಕಿದ್ದಾರೆ. ಹಿಂದೂ ಮಹಾ ಸಭಾದ ಈ ಕ್ರಮ ದೇಶದ ಹಿತಕ್ಕೆ, ಅಹಿಂಸಾ ತತ್ವಕ್ಕೆ ಮಾರಕವಾಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧ ವಾಗಿದೆ. ಹೀಗಾಗಿ ಹಿಂದೂ ಮಹಾಸಭಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ಹಿಂಸೆಯನ್ನು ಪ್ರಚೋದಿ ಸುವ ಇಂತಹ ಕೃತ್ಯದಲ್ಲಿ ಭಾಗಿಯಾ ದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಾಜಿ ಮೇಯರ್ ಪುರುಷೋತ್ತಮ್, ಡಾ.ವಿ. ಲಕ್ಷ್ಮಿನಾರಾಯಣ, ಜಿ.ಪಿ.ಬಸವರಾಜು, ಬಸವರಾಜು ಕುಕ್ಕರಹಳ್ಳಿ, ಕುಪ್ಪೆ ನಾಗ ರಾಜು, ಪ್ರೊ.ಕುಮಾರಸ್ವಾಮಿ, ಎಂ.ಎನ್. ಸುಮನಾ, ಡಾ.ರತಿರಾವ್, ಜಗದೀಶ್ ಸೂರ್ಯ, ಆಲಗೂಡು ಶಿವಕುಮಾರ್, ವರ ದಯ್ಯ, ಎಲ್.ಜಗನ್ನಾಥ್, ಪ್ರೊ.ಪಂಡಿತಾ ರಾಧ್ಯ, ಕೆ.ಎಸ್.ಶಿವರಾಮು, ಕೆ.ಬಸವರಾಜು, ಕೆ.ಎಸ್.ವಿಮಲಾ ಇನ್ನಿತರರು ಭಾಗವಹಿಸಿದ್ದರು.

Translate »