ಪ್ರತಿಭೆಗೆ ತಕ್ಕ ಶಿಕ್ಷಣ ದೊರೆತರೆ `ಪರಿಣಿತರ’ ಸೃಷ್ಟಿ ಸಾಧ್ಯ
ಮೈಸೂರು

ಪ್ರತಿಭೆಗೆ ತಕ್ಕ ಶಿಕ್ಷಣ ದೊರೆತರೆ `ಪರಿಣಿತರ’ ಸೃಷ್ಟಿ ಸಾಧ್ಯ

February 6, 2019

ಮೈಸೂರು: ಮಕ್ಕ ಳಲ್ಲಿರುವ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ನೀಡಿದಾಗ ಮಾತ್ರ ಪರಿಣಿತರನ್ನು ರೂಪಿ ಸಲು ಸಾಧ್ಯ ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂ ಗಣದಲ್ಲಿ ಆರಂಭವಾದ `ಸಂಶೋಧನಾ ವಿಧಾನದ ಕಡೆಗೆ ಪ್ರಯಾಣ’ ಕುರಿತ ಮೂರು ದಿನಗಳ `ಇಶಾನ-2019’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತ ನಾಡಿದರು.

ಯಾವುದೇ ಕ್ಷೇತ್ರದಲ್ಲಿಯೂ ಸಂಶೋ ಧನೆ ವಿಧಾನ ಒಂದೇ ಆಗಿರುತ್ತದೆ. ಆದರೆ ಸಂಶೋಧನೆಗೆ ಬಳಸುವ ವಸ್ತುಗಳು ಬೇರೆ ಬೇರೆಯಾಗಿರುತ್ತವೆ. ವಿಜ್ಞಾನ, ವೈದ್ಯಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಗಳು ಗುಣಮಟ್ಟ ಕಾಯ್ದು ಕೊಳ್ಳುವ ಅಗತ್ಯವಿದೆ. ಇತ್ತೀಚಿನ ದಿನ ಗಳಲ್ಲಿ ಗುಣಮಟ್ಟವಿಲ್ಲದ ಸಂಶೋಧನೆ ಗಳು ಮತ್ತು ಪ್ರಬಂಧಗಳು ಮಂಡನೆಯಾ ಗುತ್ತಿವೆ. ಇದರಿಂದ ಹೆಚ್ಚಿನ ಮಟ್ಟದ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದಿಸಿದರು.

ಪ್ರತಿಯೊಬ್ಬರಲ್ಲೂ ಯೋಗ್ಯತೆ(ಪ್ರತಿಭೆ) ಇರುತ್ತದೆ. ಅದನ್ನು ಗುರುತಿಸಿ, ತಕ್ಕ ಶಿಕ್ಷಣ ವನ್ನು ಕೊಡಿಸುವುದು ಪೋಷಕರ ಕರ್ತವ್ಯ. ಎಲ್ಲರನ್ನೂ ವೈದÀ್ಯರು, ಇಂಜಿನಿಯರ್, ವಿಜ್ಞಾನಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆಗಳಿರು ತ್ತವೆ. ಯಾರ ಮನಸ್ಥಿತಿಯಲ್ಲಿ ಯಾವ ವಿಷ ಯದ ಬಗ್ಗೆ ಪಾಂಡಿತ್ಯ ಅಥವಾ ಒಲವಿದೆ ಎನ್ನುವುದನ್ನು ಪೋಷಕರು ಅಥವಾ ಯೋಜಕರು(ಶಿಕ್ಷಕರು) ಗುರುತಿಸಬೇಕು.

ವೈದÀ್ಯಕೀಯ ಕ್ಷೇತ್ರಗಳಲ್ಲಿಯೂ ವಿವಿಧ ವಿಭಾಗಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಅದಕ್ಕೆ ತಕ್ಕ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು. ವಿಶ್ವದಲ್ಲಿನ ಗುಣಮ ಟ್ಟದ ವಿಶ್ವವಿದ್ಯಾ ನಿಲಯಗಳಲ್ಲಿ 500ನೇ ಸ್ಥಾನದಲ್ಲಿಯೂ ಭಾರತೀಯ ವಿಶ್ವವಿದ್ಯಾ ನಿಲಯಗಳು ಸ್ಥಾನಗಿಟ್ಟಿಸಿಕೊಳ್ಳದೇ ಇರುವುದು ವಿಷಾದನೀಯ. ಗ್ಲೋಬಲ್ ರ್ಯಾಂಕಿಂಗ್ ಪಟ್ಟಿಯಲ್ಲಿಯೂ ದೇಶದ ವಿವಿಗಳು ಹಿನ್ನಡೆ ಅನುಭವಿಸಿವೆ. ಚೀನಾದ ವಿವಿಗಳು 500ರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಭಾರತದಲ್ಲಿ ವರ್ಷಕ್ಕೆ 4 ಸಾವಿರ ಸಂಶೋಧನೆಗಳು ನಡೆದರೆ, ಚೀನಾದಲ್ಲಿ 16 ಸಾವಿರ, ಅಮೆ ರಿಕಾದಲ್ಲಿ 23 ಸಾವಿರ ಸಂಶೋಧನೆ ನಡೆ ಯುತ್ತಿವೆ. ಶೇ.10ಕ್ಕಿಂತಲೂ ಹೆಚ್ಚು ಗುಣಮಟ್ಟದ ಸಂಶೋಧನಾ ಪ್ರಬಂಧ ಮಂಡನೆಯಾಗು ತ್ತಿವೆ. ಇದರಿಂದಲೇ ಗುಣಮಟ್ಟವನ್ನು ಅಳೆಯಬಹುದಾಗಿದೆ ಎಂದರು.
ಔಷಧಿಯಲ್ಲದ ವನಸ್ಫತಿಯಿಲ್ಲ ಎಂಬ ಗಾದೆಯಂತೆ ಆಯುರ್ವೇದ ಕ್ಷೇತ್ರದಲ್ಲಿ ಔಷಧೀಯ ಗುಣವುಳ್ಳ ಸಾವಿರಾರು ಗಿಡಗಳಿವೆ. ಅವನ್ನು ಗುರುತಿಸುವ ಕೌಶಲ ವನ್ನು ಆಯುರ್ವೇದ ಸಂಶೋಧನಾ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಚಾಮುಂಡಿಬೆಟ್ಟದಲ್ಲಿಯೂ ಹಲವಾರು ಔಷಧೀಯ ಸಸ್ಯಗಳಿವೆ. ಚಾಮುಂಡಿಬೆಟ್ಟ ಆಧ್ಯಾತ್ಮಿಕವಾಗಿಯೂ ಸಂಶೋಧನಾ ಸ್ಥಳ ವಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ ಮಾತನಾಡಿ, ಆಯುರ್ವೇದ ಸಂಶೋ ಧನಾ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಶೋ ಧನೆಗೆ ವಿಪುಲ ಅವಕಾಶವಿದೆ. ಹಲವು ಕಾರ್ಯಕ್ರಮಗಳ ಮೂಲಕ ಪ್ರೇರೇಪಣೆ ನೀಡಲಾಗುತ್ತಿದೆ. ಮೂರು ದಿನಗಳ ಈ ಕಾರ್ಯಾಗಾರದಲ್ಲಿ ವಿಷಯ ತಜ್ಞರು ವಿದ್ಯಾರ್ಥಿ ಗಳಿಗೆ ಮಾಹಿತಿ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಆಯುಷ್ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಬಿ.ಎಸ್.ಶ್ರೀಧರ್, ಸರ್ಕಾರಿ ಆಯು ರ್ವೇದ ಕಾಲೇಜಿನ ಸ್ನಾತಕೋತ್ತರ ವಿಭಾ ಗದ ಮುಖ್ಯಸ್ಥ ಡಾ.ವಿ.ರಾಜೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಜೆಎಸ್‍ಎಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಶ್ ಉಡುಪಾಡಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »