ತೃತೀಯ ಲಿಂಗಿ ವ್ಯಕ್ತಿಗಳ ಮಸೂದೆ ವಿರೋಧಿಸಿ ಪ್ರತಿಭಟನೆ
ಮೈಸೂರು

ತೃತೀಯ ಲಿಂಗಿ ವ್ಯಕ್ತಿಗಳ ಮಸೂದೆ ವಿರೋಧಿಸಿ ಪ್ರತಿಭಟನೆ

December 11, 2019

ಮೈಸೂರು,ಡಿ.10(ಪಿಎಂ)-ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿ ರುವ `ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕು ರಕ್ಷಣೆ) ಮಸೂದೆ-2019’ ತೃತೀಯ ಲಿಂಗಿಗಳ ಪಾಲಿಗೆ ಕರಾಳ ಎನಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಆರೋ ಪಿಸಿ ಆಶೋದಯ ಸಮಿತಿಯ ನೇತೃತ್ವ ದಲ್ಲಿ ತೃತೀಯ ಲಿಂಗಿಗಳು ಮೈಸೂರು ನಗರ ದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂ ಆಶೋದಯ ಸಮಿತಿ ಕಚೇರಿ ಆವರಣ ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು.

ತೃತೀಯ ಲಿಂಗಿಗಳೆಂದು ಕೇವಲ ವ್ಯಕ್ತಿಯ ಬಾಹ್ಯ ಲಕ್ಷಣಗಳ ಆಧಾರದ ಮೇಲೆ ಹೇಳು ವುದು, ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿ ಯೊಬ್ಬರು ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಅಂಶಗಳು ತೀರಾ ಅವೈಜ್ಞಾ ನಿಕ. ಕೂಡಲೇ ಈ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಉದ್ಯೋಗ, ಶಿಕ್ಷಣದಲ್ಲಿ ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡಬಾರದು ಎಂದು ಮಸೂದೆ ಹೇಳಿದೆ. ಆದರೆ ಮೀಸಲಾತಿಯನ್ನು ಕಲ್ಪಿಸಿಲ್ಲ. ಮೀಸಲಾತಿ ಇಲ್ಲದೇ ಉದ್ಯೋಗವಾಗಲಿ, ಶಿಕ್ಷಣವಾಗಲಿ ತೃತೀಯ ಲಿಂಗಿಗಳಿಗೆ ಸಿಗುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ಮಸೂದೆ ಕುರಿತು ಹೆಚ್ಚಿನ ಚರ್ಚೆಯಾಗಬೇಕು. ಹಲವು ಅಂಶಗಳು ಬದಲಾವಣೆಯಾಗಬೇಕಿದೆ. ತರಾತುರಿ ಯಲ್ಲಿ ಈ ಮಸೂದೆ ಜಾರಿ ಬೇಡ ಎಂದು ಒತ್ತಾಯಿಸಿದರು.

ಸಂಘಟನೆ ಸಂಚಾಲಕಿ ಪ್ರಣತಿ ಪ್ರಕಾಶ್, ಕಾರ್ಯಕರ್ತರಾದ ಬಿಂದು, ರೀಚಾ, ಮಂಜುಳಮ್ಮ, ಸಹನಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »