ತಂಬಾಕು ಚಟಕ್ಕೆ ಬಲಿಯಾಗದಿರಿ
ಮೈಸೂರು

ತಂಬಾಕು ಚಟಕ್ಕೆ ಬಲಿಯಾಗದಿರಿ

December 11, 2019

ಮೈಸೂರು,ಡಿ.10(ಆರ್‍ಕೆ)- ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ದಾರಿ ಮಾಡಿ ಕೊಡುವ ತಂಬಾಕು ಚಟಕ್ಕೆ ಬಲಿಯಾಗ ಬೇಡಿ ಎಂದು ಮೈಸೂರು ವಿಶ್ವವಿದ್ಯಾ ನಿಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಯುವಕರಿಗೆ ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಘಟಕ ಹಾಗೂ ಗುರ ಗಾಂವ್‍ನ ಸಂಬಂಧ ಫೌಂಡೇಷನ್ ಆಶ್ರಯದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತಂಬಾಕು ನಿಯಂತ್ರಣ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

`ತಂಬಾಕು ಬಳಸುವುದಿಲ್ಲ. ಇತರರಿಗೂ ಅರಿವು ಮೂಡಿಸುತ್ತೇವೆ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಿದ ಕುಲಪತಿಗಳು, ಅನು ಕರಣೆ ಹಾಗೂ ಕುತೂಹಲಕ್ಕಾಗಿ ಯುವ ಕರು ತಂಬಾಕು ಸೇವನೆಯತ್ತ ಆಸಕ್ತಿ ತೋರುವುದರಿಂದ ಹಿರಿಯರು ಮೊದಲು ಈ ಅಭ್ಯಾಸವನ್ನು ಬಿಡಬೇಕು. ಯಾರಾ ದರೂ ಬೀಡಿ, ಸಿಗರೇಟ್ ಸೇದುತ್ತಿದ್ದರೆ ಅದನ್ನು ನೋಡಿದ ಯುವಕರು ತಾವೂ ಅನುಕರಣೆಗೆ ಮುಂದಾಗಿ ಸಿಗರೇಟ್ ಸೇದಲಾರಂಭಿಸುತ್ತಾರೆ. ಅದರಲ್ಲಿರುವ ನಿಕೋಟಿನ್ ಅಂಶ ಮನಸ್ಸಿಗೆ ಉತ್ತೇಜನ ನೀಡುವ ಕಾರಣ ಅವರು ಆ ಅಭ್ಯಾಸ ಮುಂದುವರಿಸುತ್ತಾರೆ. ಬಳಿಕ ಹಲವು ವರ್ಷಗಳ ನಂತರ ಕ್ಯಾನ್ಸರ್‍ನಂತಹ ಮಾರಕ ರೋಗಕ್ಕೆ ತುತ್ತಾಗುತ್ತಾರೆ ಎಂದರು.

ನಿಕೋಟಿನ್‍ನಲ್ಲಿ 4000 ಬಗೆಯ ರಾಸಾಯನಿಕಗಳಿರುತ್ತವೆಯಲ್ಲದೆ, 500 ಬಗೆಯ ವಿಷಕಾರಿ ಅಂಶಗಳೂ ಇರುತ್ತವೆ. ಧೂಮಪಾನದಿಂದ ಹೊರ ಸೂಸುವ ಕಾರ್ಬನ್ ಮಾನಾಕ್ಸೈಡ್ ಹಲವು ರೋಗಗಳಿಗೆ ಕಾರಣವಾಗುತ್ತದೆ ಯಾದ್ದ ರಿಂದ ತಂಬಾಕನ್ನು ಸಂಪೂರ್ಣವಾಗಿ ತಡೆಗಟ್ಟಲು ಎಲ್ಲರೂ ಮುಂದಾಗಬೇಕು ಎಂದೂ ಪ್ರೊ.ಹೇಮಂತಕುಮಾರ್ ಅವರು ಜಾಗೃತಿ ಮೂಡಿಸಲೆತ್ನಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಎನ್‍ಎಸ್‍ಎಸ್ ಘಟಕದ ಕಾರ್ಯಕ್ರಮ ಸಂಯೋಜನಾಧಿಕಾರಿ ಚಂದ್ರಶೇಖರ್, ನಾರಾಯಣ ಹೃದಯಾಲಯದ ವೈದ್ಯೆ ಡಾ.ಮೇಖಲಾ ಶೇಷಾದ್ರಿ, ಸಂಬಂಧ ಫೌಂಡೇ ಷನ್ನಿನ ಸೋಯಿಲ್ ರಸ್ತೋಗಿ, ಗಾಯತ್ರಿ ರೆಡ್ಡಿ ಅವರು ಕಾರ್ಯಾಗಾರದಲ್ಲಿ ಮಾತನಾಡಿದರು.

Translate »