ವೈದ್ಯರ ವರ್ಗಾವಣೆ ಖಂಡಿಸಿ ಪ್ರತಿಭಟನೆ
ಮೈಸೂರು

ವೈದ್ಯರ ವರ್ಗಾವಣೆ ಖಂಡಿಸಿ ಪ್ರತಿಭಟನೆ

May 3, 2019

ಮೈಸೂರು: ವೈದ್ಯರ ವರ್ಗಾವಣೆ ಖಂಡಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ವತಿ ಯಿಂದ ಯಾದವಗಿರಿ ರೈಲ್ವೆ ಆಸ್ಪತ್ರೆ ಬಳಿ ಪ್ರತಿ ಭಟನೆ ನಡೆಸಿದರು. ಗುರುವಾರ ಮಧ್ಯಾಹ್ನ ಆಸ್ಪತ್ರೆ ಬಳಿ ಜಮಾವಣೆಗೊಂಡ ನೂರಾರು ಮಂದಿ ನೌಕರರು, ಕಾರ್ಮಿಕರು, ಡಾ.ಶಿವ ಕುಮಾರ್ ಮತ್ತು ಡಾ.ಶೋಭಾ ಜಗ ನ್ನಾಥ್ ಅವರ ವರ್ಗಾವಣೆ ಖಂಡಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿ ಯನ್‍ನ ವಲಯ ಕಾರ್ಯಾಧ್ಯಕ್ಷ ಅರ್ತೂರ್ ಫರ್ನಾಡಿಸ್ ಮಾತನಾಡಿ, ವೈದ್ಯರಾದ ಡಾ. ಶಿವಕುಮಾರ್ ಮತ್ತು ಡಾ.ಶೋಭಾ ಜಗ ನ್ನಾಥ್ ಅವರಿಗೆ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದು, ಇಂದು ಕಾರ್ಮಿಕ ರೆಲ್ಲರೂ ಆರೋಗ್ಯವಾಗಿರಲು ಅವರೇ ಮುಖ್ಯ ಕಾರಣ. ಇವರನ್ನು ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವರ ವರ್ಗಾ ವಣೆಯನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲವಾದಲ್ಲಿ ಅಮರಾಣಾಂತಿಕ ಉಪವಾಸ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿ ದರು. ನಂತರ ವರ್ಗಾವಣೆ ರದ್ದು ಕೋರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಪಾಟೀಲ್ ಮೂಲಕ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.

ಡಿವಿಜನಲ್ ಪ್ರೆಸಿಡೆಂಟ್ ಸೋಮಶೇಖರ್, ವರ್ಕ್‍ಶಾಪ್ ಡಿವಿಜನಲ್ ಉಪಾಧ್ಯಕ್ಷ ಶಿವ ಕುಮಾರ್, ಪದಾಧಿಕಾರಿಗಳಾದ ಉಮಾ ಶಂಕರ್, ಅನಿಲ್‍ಕುಮಾರ್, ಮೋಹನ್ ಕುಮಾರ್, ಶ್ರೀಪತಿ ಸೇರಿದಂತೆ ಪದಾಧಿ ಕಾರಿಗಳು, ನೌಕರರು ಭಾಗವಹಿಸಿದ್ದರು.

Translate »