ನಿರಾಶ್ರಿತರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ
ಕೊಡಗು

ನಿರಾಶ್ರಿತರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

February 9, 2019

ಮಡಿಕೇರಿ: ಜಿಲ್ಲೆಯ ಮಡಿಕೇರಿ ಸೇರಿದಂತೆ 3 ತಾಲೂಕುಗಳ ಬಡ ನಿರಾ ಶ್ರಿತರಿಗೆ 94ಸಿ ಹಾಗೂ 94ಸಿಸಿ ಅಡಿ ಹಕ್ಕು ಪತ್ರ ನೀಡದೆ ತಹಶೀಲ್ದಾರರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿ ಬಹು ಜನ ಕಾರ್ಮಿಕರ ಸಂಘ ಹಾಗೂ ಸೋಶಿ ಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಗಾಂಧಿ ಮೈದಾನದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹಕ್ಕು ಪತ್ರ ವಂಚಿತರು ಹಾಗೂ ಸಂಘಟನೆಗಳ ಕಾರ್ಯಕರ್ತರು ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು. 94ಸಿ ಹಾಗೂ ನಗರ ವಾಸಿಗ ಳಿಗೆ 94ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸರಕಾರದ ಆದೇಶ ದಂತೆ ಫಲಾನುಭವಿಗಳು ಸಾವಿರಾರು ಸಂಖ್ಯೆ ಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಹಶೀಲ್ದಾರ್ ಕಛೇರಿಗೆ ಬಡವರು ಪ್ರತಿದಿನ ಅಲೆದಾಡಿ ಬೇಸತ್ತು ಹೋಗಿದ್ದಾರೆ. ಕಛೇರಿ ಸಿಬ್ಬಂದಿ ಗಳ ನಿರ್ಲಕ್ಷ್ಯ ಧೋರಣೆಯಿಂದ ಬಡವರ್ಗ ಇಕ್ಕಟ್ಟಿಗೆ ಸಿಲುಕಿದೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಪ್ರಕೃತಿ ವಿಕೋ ಪದ ಸಂತ್ರಸ್ತರಿಗೆ ಇಲ್ಲಿಯವರೆಗೆ ಸೂಕ್ತ ರೀತಿಯಲ್ಲಿ ಪರಿಹಾರ ವಿತರಿಸಲು ಸರ್ಕಾ ರಕ್ಕೆ ಸಾಧ್ಯವಾಗಿಲ್ಲ. ಇದು ಬಡವರ ಮೇಲಿನ ದೌರ್ಜನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣ 94ಸಿ ಹಾಗೂ 94ಸಿಸಿ ಯಡಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ನ್ಯಾಯ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಮಡಿಕೇರಿ ತಾಲ್ಲೂಕು ಪಾಲೆಮಾಡು, ಹೊದ್ದೂರು ಗ್ರಾಮದ ಸುಮಾರು 200 ನಿವಾಸಿಗಳ ಅರ್ಜಿಗಳನ್ನು ಪುರಸ್ಕರಿಸಿ ಹಕ್ಕುಪತ್ರ ನೀಡ ಬೇಕು, ಇಲ್ಲಿನ ಸ್ಮಶಾನ ಹಾಗೂ ಕ್ರಿಕೆಟ್ ಸಂಸ್ಥೆಯ ವಿವಾದ ಬಗೆಹರಿಯದೆ ಹಾಗೇ ಉಳಿದಿದ್ದು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ತಕ್ಷಣ ಸೂಕ್ತ ಪರಿಹಾರ ಸೂಚಿ ಸಬೇಕು, ಸ್ಮಶಾನ ಮಂಜೂರಾತಿ ಆದೇಶ ವನ್ನು ತೆಗೆದು ಹಾಕಿರುವ ಉಪವಿಭಾಗಾ ಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಬೇಕು, ಚೆರಿಯಪರಂಬು ಪೈಸಾರಿ, ಮಡಿಕೇರಿಯ ತ್ಯಾಗರಾಜ ಕಾಲೋನಿ, ಮಲ್ಲಿಕಾರ್ಜುನ ನಗರ, ವಿದ್ಯಾನಗರ, ಕುಂಬಳಗೇರಿ, ಉಕ್ಕುಡ, ಇಂದಿರಾನಗರ, ಚಾಮುಂಡೇಶ್ವರಿ ನಗರ, ಮಂಗಳಾದೇವಿ ನಗರ ಸೇರಿದಂತೆÉ ಪ್ರಕೃತಿ ವಿಕೋಪದ ಸಂದರ್ಭ ಮನೆ ಕಳೆದು ಕೊಂಡ ಸಂತ್ರಸ್ತರಿಗೆ ನಿಯಮ ಸಡಿಲಿ ಕೆಯ ಮೂಲಕ ಪರಿಹಾರ ಮತ್ತು ಮನೆಗ ಳನ್ನು ಮಂಜೂರು ಮಾಡಬೇಕು, ವಿರಾಜ ಪೇಟೆ ತಾಲೂಕು ಅರುವತ್ತೊಕ್ಲು ಪಂಚಾ ಯಿತಿಯ ಅಂಬೇಡ್ಕರ್ ಕಾಲೋನಿ ನಿವಾಸಿ ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸ ಬೇಕು, ಸೋಮವಾರಪೇಟೆ ತಾಲೂಕಿನ ಕೂಡಿಗೆ ಪಂಚಾಯಿತಿಗೆ ಸಂಬಂಧಪಟ್ಟ ಬ್ಯಾಡಗೊಟ್ಟ ಗ್ರಾಮದಲ್ಲಿ ಪರಿಶಿಷ್ಟ ಕುಟುಂಬ ಗಳು ಸುಮಾರು 70 ವರ್ಷಗಳಿಂದ ವಾಸ ವಿದ್ದು, ಇಲ್ಲಿನ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆ ಗಳನ್ನು ಮುಂದಿನ ಏಳು ದಿನಗಳೊಳಗೆ ಜಿಲ್ಲಾಡಳಿತ ಈಡೇರಿಸದಿದ್ದಲ್ಲಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸು ವುದಾಗಿ ಎಚ್ಚರಿಕೆ ನೀಡಿದರು.

Translate »