ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
ಮಂಡ್ಯ

ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ

July 2, 2018

ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ವಿಜಯನಗರ ಬಡಾವಣೆ ಮುಖ್ಯರಸ್ತೆ ಅಭಿ ವೃದ್ಧಿ ಪಡಿಸುವಂತೆ ಆಗ್ರಹಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಹೊಸಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್.ಆರ್. ನಂದಕುಮಾರ್, ಮುಖಂಡರಾದ ಹೆಚ್.ಡಿ. ಉದಯಕುಮಾರ್, ವೆಂಕಟಶೆಟ್ಟಿ, ಎಚ್.ಆರ್. ವೆಂಕಟೇಶ್, ರಾಘು, ಹೆಚ್.ವಿ.ರಘುನಾಥ್, ಜಿ.ವೆಂಕಟೇಶ್, ಸುನೀತಾ, ಭಾಗ್ಯ, ಪುಷ್ಪಾಂಜಲಿ ಮತ್ತಿತರರ ನೇತೃತ್ವದಲ್ಲಿ ಬೀದಿ ಗಳಿದು ಪ್ರತಿಭಟನೆ ನಡೆಸಿದ ಪ್ರತಿಭಟ ನಾಕಾರರು, ಕಳೆದ 35ವರ್ಷಗಳಿಂದ ವಿಜಯನಗರ ಬಡಾವಣೆ ಮುಖ್ಯ ರಸ್ತೆ ಯನ್ನು ಅಭಿವೃದ್ಧಿ ಪಡಿಸದ ಕಾರಣ ಈ ರಸ್ತೆ ಗುಂಡಿಯಂತಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಹಾಗೂ ವಾಹನ ಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.

ಈ ರಸ್ತೆ ಪ್ರಮುಖ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಆದರೆ ದುರಸ್ತಿಗೊಳ್ಳದೇ ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡಲು ಕಿರಿಕಿರಿ ಅನುಭವಿ ಸುವಂತಾಗಿದೆ. ಅಲ್ಲದೆ 3 ತಿಂಗಳ ಹಿಂದೆ ಸದರಿ ರಸ್ತೆಯನ್ನು ದುರಸ್ತಿಗೊಳಿಸಲು ಜೆಸಿಬಿಯಿಂದ ಅಗೆದಿದ್ದು ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಈ ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ, ವಯೋವೃದ್ಧರು ಸೇರಿದಂತೆ ಸಾರ್ವ ಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಕಾರಣ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಪುರಸಭಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

Translate »