ಎಸ್‍ಟಿಜಿಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ
ಮಂಡ್ಯ

ಎಸ್‍ಟಿಜಿಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ

July 2, 2018

ಚಿನಕುರಳಿ: ಇಲ್ಲಿನ ಎಸ್‍ಟಿಜಿ ಪಬ್ಲಿಕ್ ಶಾಲೆಯಲ್ಲಿ 2018-19ನೇ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು.

ಶಾಲೆಯ ಹೆಡ್‍ಬಾಯ್ ಹಾಗೂ ಹೆಡ್ ಗರ್ಲ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿ ಯಾಗಿತ್ತು. ಹೆಡ್‍ಬಾಯ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿಗಳಾದ ಎಂ.ಸಂಜಯ್, ಎನ್. ನರೇಶ್, ಕೆ.ಪಿ.ಯೋಗೇಶ್, ಟಿ. ವಿಲಾಸ್‍ಗೌಡ, ಕೆ.ಎನ್.ತೇಜಸ್, ಕೆ.ಎನ್. ಹರ್ಷಿತ್ ಚುನಾವಣೆಗೆ ಸ್ಪರ್ಧಿಸಿದ್ದರು. ಹೆಡ್‍ಗರ್ಲ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿ ನಿಯರಾದ ಎಸ್.ಭವಾನಿ, ಜಿ.ಸಿ.ಗಾನವಿ, ಪಿ.ಎಂ.ಅಪೂರ್ವ, ಎನ್.ಹಿತೈಶಿ, ಪಿ.ಜಿ. ರಕ್ಷಿತಾ ಹಾಗೂ ಕೆ.ವಿ ದಿಶಾ ಸ್ಪರ್ಧಿಸಿದ್ದರು.

ಈ ವಿದ್ಯಾರ್ಥಿ ಪರಿಷತ್ ಚುನಾವಣೆಗೆ ಶಾಲೆಯ ಸಿಇಓ ಸಿ.ಪಿ.ಶಿವರಾಜು, ಆಡಳಿತಾ ಧಿಕಾರಿ ನಿವೇದಿತಾ ನಾಗೇಶ್, ಪ್ರಾಂಶು ಪಾಲೆ ಮಾಚಮ್ಮ ಅವರು ವಿದ್ಯುನ್ಮಾನ (ಎಲೆಕ್ಟ್ರಾನಿಕ್ ಓಟಿಂಗ್) ಮಾಧ್ಯಮದ ಮೂಲಕ ಮತ ಚಲಾಯಿಸುವುದ ರೊಂದಿಗೆ ಚಾಲನೆ ನೀಡಿದರು.

ಅಲ್ಲದೇ ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಶಾಲೆಯ 5ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಮತದಾನಕ್ಕೆ ಒಂದು ನಿಗದಿತ ಸ್ಥಳ ಗುರುತಿಸಿ ಗೌಪ್ಯ ಮತದಾನ ನಡೆಸಿದ್ದು, ವಿಶೇಷವಾಗಿತ್ತು. ಅಲ್ಲದೇ ಶಾಲೆಯ ಸುಮಾರು 471 ವಿದ್ಯಾರ್ಥಿ ಗಳು ತಮ್ಮ ಮತ ಚಲಾವಣೆ ಮಾಡಿದ್ದು, ಚುನಾವಣೆ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಯಿತು. ಈ ವಿದ್ಯಾರ್ಥಿ ಪರಿಷತ್ ಚುನಾವಣೆ ಫಲಿತಾಂಶ ಜು.2ರ ಸೋಮವಾರದಂದು ಪ್ರಕಟವಾಗಲಿದೆ.

Translate »