ದಲಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ದಲಿತರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

August 6, 2019

ಮೈಸೂರು,ಆ.5(ಎಂಟಿವೈ)-ದಲಿತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ, ದೌರ್ಜನ್ಯದಿಂದ ಮುಕ್ತಿ ದೊರಕಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಭಾರೀ ಪ್ರತಿಭಟನೆ ನಡೆಸಿದರು. ಮೈಸೂರಿನ ಪುರ ಭವನ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತ, ಚಿಕ್ಕಗಡಿಯಾರದ ವೃತ್ತ, ಡಿ.ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆ ಮೂಲಕ ಡಿಸಿ ಕಚೇರಿ ತಲುಪಿ ಧರಣಿ ನಡೆಸಿ ದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಶೋಷಿತರ ಬದುಕು ಇಂದಿಗೂ ಶೋಚನೀಯವಾಗಿದೆ. ಜಿಲ್ಲೆಯಲ್ಲಿ ದಲಿ ತರ ಸಮಸ್ಯೆಗಳು ಗಂಭೀರವಾಗಿದೆ. ಭ್ರಷ್ಟಾ ಚಾರದ ಸುಳಿಯಲ್ಲಿ ಅಧಿಕಾರಿ ವರ್ಗ ಸಿಲುಕಿ ರುವ ಹಿನ್ನೆಲೆಯಲ್ಲಿ ದಲಿತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದಕ್ಕೆ ಇಚ್ಛಾ ಸಕ್ತಿ ಪ್ರದರ್ಶಿಸುತ್ತಿಲ್ಲ. ಬಡವರ, ದೀನ-ದಲಿತರ, ಪೌರಕಾರ್ಮಿಕರ, ಆದಿವಾಸಿ ಗಳ ಹಾಗೂ ಗಿರಿಜನರ ಏಳಿಗೆಗೆ ಶ್ರಮಿಸದೆ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ನಿರ್ಮಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ, ಜಗಜೀವನರಾಂ ಭವನ, ವಾಲ್ಮೀಕಿ ಭವನಗಳ ಕಾಮಗಾರಿಗಳು ಅಪೂರ್ಣ ಸ್ಥಿತಿಯಲ್ಲಿವೆ. ಸಾಗುವಳಿ ಪತ್ರಕ್ಕೆ ಅರ್ಜಿ ಹಾಕಿರುವ ದಲಿತರಿಗೆ ಇನ್ನೂ ಸಹ ಸಾಗುವಳಿ ಪತ್ರ ಕೊಡುವುದರಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ನಿರ್ಮಿತಿ ಕೇಂದ್ರ, ಕರ್ನಾಟಕ ಭೂ ಸೇನಾ ನಿಗಮ, ಲೋಕೋ ಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾ ಯಿತಿ ಇಲಾಖೆ ವತಿಯಿಂದ ದಲಿತ ಕೇರಿ ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿಲ್ಲ ಎಂದು ದೂರಿ ದರು. ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮೈಸೂರು ವಿಭಾಗೀಯ ಪದಾಧಿಕಾರಿಗಳಾದ ನಿಂಗರಾಜ್ ಮಲ್ಲಾಡಿ, ಕಾರ್ಯ ಬಸವಣ್ಣ, ದೊಡ್ಡಸಿದ್ದು ಹಾದನೂರು, ಬನ್ನಹಳ್ಳಿ ಸೋಮಣ್ಣ, ವಸಂತ ಹೊನ್ನೇನಹಳ್ಳಿ ಇತರರು ಪಾಲ್ಗೊಂಡಿದ್ದರು.

 

Translate »