ಮಹಿಳಾ ಮೀಸಲಾತಿಗಾಗಿ ಮಾ.31ರಂದು ದೆಹಲಿಯಲ್ಲಿ ಧರಣಿ
ಮೈಸೂರು

ಮಹಿಳಾ ಮೀಸಲಾತಿಗಾಗಿ ಮಾ.31ರಂದು ದೆಹಲಿಯಲ್ಲಿ ಧರಣಿ

February 18, 2019

ಮೈಸೂರು: ಮಹಿಳಾ ಮೀಸಲಾತಿ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.31ರಂದು ಮಧ್ಯಾಹ್ನ 3ಕ್ಕೆ ನವ ದೆಹಲಿಯ ಜಂತರ್ ಮಂತರ್‍ನಲ್ಲಿ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಂಘ ಗಳ ಒಕ್ಕೂಟದ ಅಧ್ಯಕ್ಷ ಡಾ.ಎನ್.ಹನುಮಂತಪ್ಪ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ವತಿಯಿಂದ ಈ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಆರ್.ಎನ್.ಚಂಡೋಲಿಯಾ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ವರ ರಾವ್, ಕೋಶಾಧ್ಯಕ್ಷ ಎಂ.ಎಸ್.ಮೀನಾ ನೇತೃತ್ವದಲ್ಲಿ ದೇಶಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ರಾಜ್ಯದಿಂದ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ನವದೆಹಲಿಗೆ ತೆರಳಲಿದ್ದಾರೆ ಎಂದರು. ಗೋಹತ್ಯೆ ನೆಪದಲ್ಲಿ ಅಲ್ಪಸಂಖ್ಯಾತರನ್ನು ಕಗ್ಗೊಲೆ ಮಾಡಲಾಗುತ್ತಿದೆ. ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದು ವಿಷಾದನೀಯ. ವರ್ಷಕ್ಕೊಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿಯವರು ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದ್ದಾರೆ. ಉನ್ನತ ವ್ಯಾಸಂಗ ಮಾಡಿದ ಯುವಕರಿಗೂ ದ್ವಿತೀಯ ದರ್ಜೆ ಗುಮಾ ಸ್ತನ ಕೆಲಸವು ಸಿಗುತ್ತಿಲ್ಲ. ಮಹಿಳಾ ಮೀಸಲಾತಿ ಕೇವಲ ಹೆಸರಿಗೆ ಮಾತ್ರವಿದೆ. ರಾಜ್ಯ ಸರ್ಕಾರದಲ್ಲಿ ಏಕೈಕ ಮಹಿಳೆ ಜಯಮಾಲ ಅವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋ ಪಿಸಿದರು. ಗೋಷ್ಠಿಯಲ್ಲಿ ಕೆ.ನಾಗೇಶ್ವರರಾವ್, ಚಂಡೋಲಿಯ, ಸಿ.ರಮೇಶ್ ಇದ್ದರು.

Translate »