ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ದಾಳಿ ಖಂಡಿಸಿ ಮಡಿಕೇರಿ, ವೀ.ಪೇಟೆಯಲ್ಲಿ ಪ್ರತಿಭಟನೆ
ಮೈಸೂರು

ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ದಾಳಿ ಖಂಡಿಸಿ ಮಡಿಕೇರಿ, ವೀ.ಪೇಟೆಯಲ್ಲಿ ಪ್ರತಿಭಟನೆ

February 18, 2019

ಮಡಿಕೇರಿ: ಪಾಕಿಸ್ತಾನಿ ಪ್ರೇರಿತ ಕಾಶ್ಮೀರಿ ಉಗ್ರ ಅದಿಲ್ ಅಹ್ಮದ್ ಗುರು ವಾರ ನಡೆಸಿದ ಆತ್ಮಾಹುತಿ ದಾಳಿಗೆ ಹುತಾತ್ಮ ರಾದ ಭಾರತದ ಯೋಧರಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಿಜೆಪಿ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾ ಯಿಸಿದ ಪ್ರತಿಭಟನಾಕಾರರು, ಪಾಕಿಸ್ತಾನದ ವಿರುದ್ಧ, ಉಗ್ರಗಾಮಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಸಂತಾಪ ವ್ಯಕ್ತಪಡಿಸಿದರು. ಭಯೋತ್ಪಾದನೆಗೆ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತಾಗಬೇಕು. ಪಾಕ್‍ಗೆ ಕೇಂದ್ರ ಸರಕಾರ ಎಚ್ಚರಿಕೆಯನ್ನು ನೀಡಬೇಕು. ನಮ್ಮ ಭಾರತೀಯ ಯೋಧರ ಸಾವಿಗೆ ನಾವು ಪ್ರತ್ಯುತ್ತರ ನೀಡುವ ಅಗತ್ಯ ವಿದೆ. ಭಯೋತ್ಪಾದಕ ಅದಿಲ್ ಅಹ್ಮದ್ ನಾನು ಸ್ವರ್ಗಕ್ಕೆ ಹೋಗುತ್ತೇನೆ ಎಂದು ದಾಳಿಯ ಮುನ್ನ ವಿಡಿಯೋ ಚಿತ್ರೀಕರಣ ಮಾಡಿದ್ದಾನೆ. ಎಲ್ಲಾ ಧರ್ಮದಲ್ಲೂ ಹಿಂಸೆ ಮಾಡಬಾರದು ಎಂಬ ತತ್ವವೇ ಇರು ವುದು. ಅವನಿಗೆ ನರಕ ಸಿಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತ ನಾಡಿ, ಭಯೋತ್ಪಾದನೆ ಒಂದು ಜಾಗತಿಕ ಸಮಸ್ಯೆಯಾಗಿದ್ದು, ಭಾರತ ದೇಶಕ್ಕೆ ಭಯೋತ್ಪಾದನೆ ಸ್ವಾತಂತ್ರ್ಯ ಹೋರಾಟ ಅವಧಿಯಲ್ಲೂ ಇತ್ತು. ದೇಶ ವಿಭಜನೆ ಯಾದಂದಿನಿಂದಲೂ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದು, ನಾವು ಶತ್ರು ದೇಶಕ್ಕೆ ಉತ್ತರ ನೀಡುತ್ತಾ ಬಂದಿದ್ದೇವೆ. ದೇಶದಲ್ಲಿ ರುವ ಭಯೋತ್ಪಾದನೆ ಮನಸ್ಥಿತಿಯ ವಿಕೃತ ಜನರು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದ್ದಾರೆ. ಕಾನೂನಿಗೆ ಹೊರತಾಗಿ ನಡೆದುಕೊಳ್ಳುವವರನ್ನು ಶಿಕ್ಷಿಸುವಂತಾಗ ಬೇಕು. ದೇಶದಲ್ಲಿರುವ ಎಲ್ಲಾ ಭಯೋತ್ಪಾ ದಕ ಅಡಗು ತಾಣಗಳು ಹಾಗೂ ದೇಶ ದ್ರೋಹಿಗಳಿಗೆ ಆಶ್ರಯ ನೀಡುವಂತಹವ ರನ್ನು ಭಯೋತ್ಪಾದಕರಿಗೆ ಸಹಾಯ ಮಾಡುವ ವಿಕೃತ ಮನಸ್ಸಿನ ಬುದ್ಧಿಜೀವಿಗಳನ್ನು ಸಂಪೂರ್ಣ ವಾಗಿ ನಿರ್ಮೂಲನೆ ಮಾಡುವವರೆಗೆ ದೇಶ ವಿರಮಿಸಬಾರದು ಎಂದರು.

ನಮ್ಮ ಸೇನೆ ಶಕ್ತಿಯುತವಾಗಿದ್ದು, ಯಾವುದೇ ಯುದ್ದಕ್ಕೂ ಮುನ್ನುಗ್ಗುವ ಸಾಮಥ್ರ್ಯವನ್ನು ಹೊಂದಿದೆ. ಪಾಕ್ ಉಗ್ರರ ಈ ಕೃತ್ಯಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಲಿದ್ದು ಕೇಂದ್ರ ಸರಕಾರ ಸೇನೆಯ ಪರವಾಗಿದ್ದು ಸೈನಿಕರಿಗೆ ರಕ್ಷಣೆ ಒದಗಿಸುವ ಭರವಸೆ ಇದೆ ಎಂದರು.

ನಿವೃತ ಯೋಧ ಮೇಜರ್ ಚೆಂಗಪ್ಪ ಮಾತನಾಡಿ, ಭಾರತೀಯ ಸೇನೆಯ ತಾಕತ್ತು ತೋರಿಸುವ ದಿನ ಬಂದಿದೆ. ಭಾರತೀಯ ಸೇನೆ ಪಾಕ್‍ನ ಎಲ್ಲಾ ಕುಕೃತ್ಯಗಳೆಲ್ಲವನ್ನೂ ಸಹಿಸಿಕೊಂಡು ಬರುತ್ತಿದ್ದು, ಕಾರ್ಗಿಲ್ ಯುದ್ದ, ಸರ್ಜಿಕಲ್ ಸ್ಟ್ರೈಕ್ ಮಾಡಿ ಅವರಿಗೆ ತಕ್ಕ ಉತ್ತರ ನೀಡುತ್ತಾ ಬಂದಿದ್ದೇವೆ. ಇದೀಗ ನಡೆದಿರುವ ಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದ್ದು, ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯರಾದ ಕೆ.ಎಸ್.ರಮೇಶ್, ನಗರಸಭೆ ಸ್ಥಾನೀಯ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ಸದಸ್ಯ ರಾದ ಅನಿತಾ ಪೂವಯ್ಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ ಸೇರಿದಂತೆ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.

ವಿರಾಜಪೇಟೆ ವರದಿ: ಕಾಶ್ಮಿರದ ಪುಲ್ವಾಮ ದಲ್ಲಿ ಯೋಧರು ಪ್ರಯಾಣಿಸು ತ್ತಿದ್ದ ಬಸ್ ಮೇಲೆ ಉಗ್ರರ ದಾಳಿಯಲ್ಲಿ ಹುತಾತ್ಮ ರಾದ ಯೋಧರಿಗೆ ಪಟ್ಟಣದ ನಾಗರಿಕರು ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಕಾರು ನಿಲ್ದಾಣದಲ್ಲಿ ಅಯೋಜಿ ಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಟ್ಟಣದ ವರ್ತಕರು ಒಂದು ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಹುತಾತ್ಮ ಯೋಧರಿಗೆ ಮುಂಬತ್ತಿ ಹಚ್ಚಿ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ಮೇಜರ್ ವೆಂಕಟಗಿರಿ ಅವರು ದೀಪ ಬೆಳಗಿಸಿದ ಬಳಿಕ ಮಾತನಾಡಿ, ದೇಶ ಕಾಯುವ ಸೈನಿಕರ ಮೇಲೆ ನಡೆದಿರುವ ಕೃತ್ಯ ತುಂಬಾ ನೊವುಂಟು ಮಾಡಿದೆ. ಹುತಾತ್ಮರಾದ ಯೋಧರ ಕುಟುಂಬಗಳಿಗೆ ಜನತೆ ಸಹಕಾರ ನೀಡುವಂತಾಗಬೇಕು ಎಂದರು. ಈ ವೇಳೆ ಪಪಂ ಅಭಿಯಂತರ ಎನ್.ಪಿ. ಹೇಮ್‍ಕುಮಾರ್. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಡಿವೈಎಸ್‍ಪಿ ನಾಗಪ್ಪ, ಸೇರಿ ದಂತೆ ಸಾರ್ವಜನಿಕರು ಭಾಗವಹಿಸಿದ್ದರು.

Translate »