ಕೊಡಗು ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಭರವಸೆ
ಕೊಡಗು

ಕೊಡಗು ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಭರವಸೆ

February 18, 2019

ಮಡಿಕೇರಿ: ಕೊಡಗಿನ ರಸ್ತೆ ಅಭಿವೃದ್ಧಿ, ನಿರಾಶ್ರಿತರ ಮನೆ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಮುಖ್ಯಮಂತ್ರಿ ಕುಮಾರ ಸ್ವಾಮಿಯೊಂದಿಗೆ ಮತ್ತೊಮ್ಮೆ ಚರ್ಚೆ ನಡೆಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಅಡ ಗೂರು ಎಚ್. ವಿಶ್ವನಾಥ್ ಹೇಳಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ರಾಜ್ಯ ಸರಕಾರ, ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಸಂತ್ರಸ್ತರ ನೆರವಿಗೆ ನಿಂತಿತ್ತು. ಭೂಕುಸಿತ ದಿಂದಾಗಿ ಹಲವು ಕಡೆಗಳಲ್ಲಿ ರಸ್ತೆಗಳೇ ಕೊಚ್ಚಿ ಹೋಗಿದ್ದರೂ 30-35 ದಿನಗಳಲ್ಲಿ ರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ನಿರಾಶ್ರಿತರ ಮನೆಗಳ ನಿರ್ಮಾಣ ವೂ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮತ್ತೆ ಪ್ರವಾಸಿಗರು ಕೊಡಗಿನತ್ತ ಬರ ಬೇಕು ಎನ್ನುವುದೇ ಸರಕಾರದ ಆಶಯ. ಕೊಡಗಿನ ರಸ್ತೆ ಅಭಿವೃದ್ಧಿ, ನಿರಾಶ್ರಿತರ ಮನೆ ನಿರ್ಮಾಣ ಕಾರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಮುಖ್ಯ ಮಂತ್ರಿ ಕುಮಾರಸ್ವಾಮಿಯೊಂದಿಗೆ ಶೀಘ್ರ ಚರ್ಚೆ ನಡೆಸಲಾಗುವುದು. ಈ ಸಂದರ್ಭ ಮುಖ್ಯಮಂತ್ರಿಗಳನ್ನು ಕೊಡಗಿಗೆ ಭೇಟಿ ನೀಡುವಂತೆಯೂ ಮನವಿ ಮಾಡಲಾಗು ವುದು ಎಂದು ಹೇಳಿದರು.

ರಾಜ್ಯ ಸಮ್ಮಿಶ್ರ ಸರಕಾರದ 2019-20ನೇ ಸಾಲಿನ ಬಜೆಟ್‍ನಲ್ಲಿ ಕೊಡವ ಸಮಾಜದ ಅಭಿವೃದ್ಧಿಗೆ 10 ಕೋಟಿ ರೂ. ಘೋಷಿಸಲಾ ಗಿದೆ. ಸೂಕ್ಷ್ಮಾತಿಸೂಕ್ಷ್ಮ ಜನಾಂಗಗಳನ್ನು ಗುರುತಿಸಿ 134 ಕೋಟಿ ನೀಡಿದ್ದು, ಪಟ್ಟಿಯಲ್ಲಿ ಅರೆಭಾಷೆ ಜನಾಂಗವು ಮೊದಲ ಸ್ಥಾನದಲ್ಲಿದೆ. ಅಂತಾರಾಷ್ಟ್ರೀಯ ಮಟ್ಟದ ಹಾಕಿ ಸ್ಟೇಡಿಯಂಗೆ 5 ಕೋಟಿ, ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ಸೇರಿದಂತೆ ಭಾಷೆ, ಆರ್ಥಿಕ ಅಭಿವೃದ್ಧಿ, ಶೈಕ್ಷಣಿಕ ವ್ಯವಸ್ಥೆ ಎಲ್ಲದಕ್ಕೂ ಸರಕಾರ ಕಟಿಬದ್ಧವಾಗಿದೆ ಎಂದರು.
ಕೇಂದ್ರ ಸರಕಾರದ ಬೊಕ್ಕಸದಲ್ಲಿರುವ ಲಕ್ಷಾಂತರ ಕೋಟಿ ರೂ.ಗಳನ್ನು ದೇಶದ ರಕ್ಷಣೆಗೆ ಖರ್ಚು ಮಾಡಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶ ವನ್ನು ರಕ್ಷಣೆ ಮಾಡುವಲ್ಲಿ ಹಲವಾರು ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಆದರೂ ಪಾಕಿಸ್ತಾನಿ ಉಗ್ರರ ದಾಳಿಗೆ ಭಾರತೀಯ ಯೋಧರು ಬಲಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ರಹಿತ ವಾಗಿ ನರೇಂದ್ರ ಮೋದಿಯವರಿಗೆ ಬಲ ತುಂಬಬೇಕಿದೆ. ಸಂಘ-ಸಂಸ್ಥೆಗಳು, ಸಂಘಟನೆಗಳೆಲ್ಲವೂ ಕೇಂದ್ರ ಸರಕಾರಕ್ಕೆ ಬೆಂಬಲ ಸೂಚಿಸಬೇಕು ಎಂದು ಅವರು ಮನವಿ ಮಾಡಿದರು.

ಯಡಿಯೂರಪ್ಪ ಆಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿರುವುದರ ಬಗ್ಗೆ ಉತ್ತರಿಸಿದ ವಿಶ್ವನಾಥ್, ಪ್ರಕರಣ ಹಂತ ಹಂತವಾಗಿ ನಡೆಯಲಿದೆ ಎಂದರು.
2019 ರ ಸಾಲಿನ ಲೋಕಸಭಾ ಅಭ್ಯರ್ಥಿ ಬಗ್ಗೆ ಸ್ಪಷ್ಟನೆ ಇಲ್ಲ. ಸಮ್ಮಿಶ್ರ ಸರಕಾರ ವಿರುವ ಕಾರಣ ಎಲ್ಲರು ಕೂಡ ಒಟ್ಟಾಗಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಜೆಡಿಎಸ್ ಹಾಗೂ ಕಾಂಗ್ರೆಸ್‍ನವರು ತಮ್ಮ ತಮ್ಮ ಅಭ್ಯರ್ಥಿಗೆ ಅವಕಾಶ ನೀಡಿ ಎಂದು ಮನವಿ ಮಾಡುತ್ತಿ ದ್ದಾರೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ದಿನದಲ್ಲಿ ಅಭ್ಯರ್ಥಿ ಬಗ್ಗೆ ನಿರ್ಧಾರ ಕೈಗೊಳ್ಳ ಲಾಗುತ್ತದೆ ಎಂದ ಅವರು, ಚುನಾವಣೆ ಯಲ್ಲಿ ನಾನು ಸ್ಪರ್ಧಿಸುವ ಸಂದರ್ಭ ಇಲ್ಲ ಎಂದು ಹೇಳಿದರು.

ರಾಜಕೀಯ ನಡವಳಿಕೆಗಳನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಇತ್ತೀಚೆಗೆ ಇಡೀ ರಾಜಕೀಯ ಅವ್ಯವಸ್ಥೆಯಾ ಗುತ್ತಿದೆ. ಇದಕ್ಕೆ ಒಂದಿಬ್ಬರು ಕಾರಣವಲ್ಲ. ಕರ್ನಾಟಕದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರೆಲ್ಲರೂ ಕಾರಣರಾಗಿ ದ್ದಾರೆ. ರಾಜ್ಯದ ಜನತೆ ನಾಯಕರನ್ನು ಆರಿಸಿ ಕಳಿಸಿದ್ದಾರೆ. ಆದರೆ ರಾಜಕಾರಣಿಗಳ ನಡವಳಿಕೆ ತೀರಾ ಹದಗೆಟ್ಟು ಹೋಗಿದೆ ಎಂದು ಹೇಳಿದರು. ಈ ಸಂದರ್ಭ ಜೆಡಿಎಸ್ ಪಕ್ಷದ ಪ್ರಮುಖ ರಾದ ಕೆ.ಎಂ ಬಿ ಗಣೇಶ್, ಲೀಲಾ ಶೇಷಮ್ಮ ಮತ್ತಿತರರು ಹಾಜರಿದ್ದರು.

Translate »