`ಪೌರತ್ವ ತಿದ್ದುಪಡಿ ಕಾಯ್ದೆ’ ಹಿಂಪಡೆಯಲು ಆಗ್ರಹಿಸಿ ಧರಣಿ
ಮೈಸೂರು

`ಪೌರತ್ವ ತಿದ್ದುಪಡಿ ಕಾಯ್ದೆ’ ಹಿಂಪಡೆಯಲು ಆಗ್ರಹಿಸಿ ಧರಣಿ

December 31, 2019

ಮೈಸೂರು,ಡಿ.30(ಎಸ್‍ಪಿಎನ್)-ಭಾರ ತೀಯ ಮುಸ್ಲಿಂ ಸಮುದಾಯದಲ್ಲಿ ಆತಂಕ ಸೃಷ್ಟಿಸಿರುವ `ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ)ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’(ಎನ್‍ಆರ್‍ಸಿ)ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಮೈಸೂರು ವೆಲ್‍ಫೇರ್ ಟ್ರಸ್ಟ್‍ನ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಟೌನ್‍ಹಾಲ್‍ನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೈಸೂರು ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷೆ ಡಾ.ಸಾರಾ ಹಕ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ  ತಂದಿ ರುವ `ಸಿಎಎ’ ಮತ್ತು `ಎನ್‍ಆರ್‍ಸಿ’ ಕಾಯ್ದೆ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು, ಪ್ರಗತಿ ಪರ ಚಿಂತಕರು, ತೀವ್ರ ತರಹದ ಹೋರಾಟ ನಡೆಸಿ, ಕೇಂದ್ರ ಸರ್ಕಾರದ ನಡೆಯನ್ನು ವಿರೋ ಧಿಸುತ್ತಿದ್ದರೂ ಇವೆರಡು ಕಾಯ್ದೆಗಳ ವಾಪಸ್ ಪಡೆಯುವ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದು ಕಿಡಿಕಾರಿದರು.

ಇವೆರಡು ಕಾಯ್ದೆಗಳು ಜಾರಿಯಾದರೆ, ಭಾರತದಲ್ಲಿರುವ ಮುಸ್ಲಿಂ ಸಮುದಾಯದವ ರಿಂದ ಹತ್ತಾರು ದಾಖಲಾತಿ ಕೇಳುವ ಕೇಂದ್ರ ಸರ್ಕಾರ, ಬಾಂಗ್ಲಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳಲ್ಲಿ ನೊಂದು ಭಾರತಕ್ಕೆ ಬರುವವರಿಗೆ ದಾಖಲಾತಿ ಮಾಡಿಕೊಡುತ್ತಿರು ವುದು ಸರಿಯಷ್ಟೇ. ಈ ಕಾರಣಕ್ಕೆ ನಾವೇಕೆ ಇಲ್ಲಿನ ಎಲ್ಲಾ ದಾಖಲಾತಿ ಒದಗಿಸಿ ನಮ್ಮ ಪೌರತ್ವ ಸಾಬೀತುಪಡಿಸಬೇಕು ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಹಿರಿಯ ಪತ್ರಕರ್ತ ಟಿ.ಗುರುರಾಜ್, ನಗರ ಪಾಲಿಕೆ ಮಾಜಿ ಸದಸ್ಯ ಬಾಬು, ಜಹೀರ್ ವುಲ್ಲಾಖಾನ್, ಮುದಾಸಿರ್ ಅಲಿಖಾನ್, ಸೇರಿದಂತೆ ಇತರರಿದ್ದರು.

Translate »